Sunday, 24th November 2024

Dasara Pooja: ದೇವಾಲಯಗಳಲ್ಲಿ ದೇವರಿಗೆ: ಮನೆಯ ಮುಂದೆ ವಾಹನಗಳಿಗೆ ಪೂಜೆ

ಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಆಯುಧಪೂಜೆ ವಿಜಯದಶಮಿ

ಗ್ರಾಮೀಣ ಪ್ರದೇಶದಲ್ಲಿ ವಿಜಯದಶಮಿ ಅಂಗವಾಗಿ ಪಟ್ಟದ ದೇವರ ಮೆರವಣಿಗೆ

ಚಿಕ್ಕಬಳ್ಳಾಪುರ: ಜನತೆ ಜಿಲ್ಲೆಯಲ್ಲಿ ಶ್ರದ್ದಾಭಕ್ತಿಯಿಂದ ಆಯುಧಪೂಜೆ,ವಿಜಯದಶಮಿ ಹಬ್ಬವನ್ನು ಆಚರಿಸಿದರು. ಗ್ರಾಮೀಣ ಪ್ರದೇಶ ಮೊದಲಾಗಿ ನಗರ ಪಟ್ಟಣಗಳಲ್ಲಿ ಜನತೆ ಬೈಕು, ಸ್ಕೂಟರ್, ಕಾರು ಸೇರಿ, ನಾವು ಬಳಕೆ ಮಾಡುವ ವಸ್ತುಗಳನ್ನು ತೊಳೆದು ಬೆಳಗಿ ಹೂವು ಹಣ್ಣು ಕಾಯಿಯಿಟ್ಟು ಪೂಜೆ ಮಾಡಿ ಸಂಭ್ರಮಿಸಿದರು.

ಜೀವನಾಧಾರವಾಗಿದ್ದ ಆಯುಧಗಳಿಗೆ ಪೂಜೆ ಮಾಡುವ ಪದ್ದತಿ ಮಹಾಭಾರತದ ಕಾಲದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಕೌರವರ ವಿರುದ್ಧ ಅಜ್ಞಾತವಾಸದಲ್ಲಿದ್ದ ಪಾಂಡವರು ದಿಗ್ವಿಜಯ ಸಾಧಿಸಿದ ನೆನಪಿನಲ್ಲಿ ಆಯುಧಪೂಜೆಯನ್ನು ಆಚರಿಸಿದ್ದರು. ನಂತರದ ದಿನಗಳಲ್ಲಿ ಇದು ಜನಮಾನಸದಲ್ಲಿ ಹಬ್ಬದ ಸ್ವರೂಪವಾಗಿ ಬದಲಾಗಿದ್ದು ಪ್ರತಿಯೊಬ್ಬರೂ ಆಚರಿಸಿಕೊಂಡು ಬರಲಾಗುತ್ತಿದ್ದಾರೆ.ಜಿಲ್ಲೆಯಲ್ಲಿಯೂ ಕೂಡ ಶುಕ್ರವಾರ ಶನಿವಾರ ಅನಾಧಿಕಾಲದಿಂದ ನಡೆದುಕೊಂಡು ಬಂದಿರುವ ನವರಾತ್ರಿ, ಆಯುಧ ಪೂಜೆ, ವಿಜಯ ದಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ತಾಲೂಕು ಆಡಳಿತದ ಪರವಾಗಿ ವಾಪಸಂದ್ರದಲ್ಲಿನ ಶಮೀವೃಕ್ಷಕ್ಕೆ ತಹಶೀಲ್ದಾರ್ ಅನಿಲ್ ದಂಪತಿಗಳು ಬಂದು ಪೂಜೆ ಸಲ್ಲಿಸಿ ವಿಜಯದಶಮಿಯನ್ನು ಆಚರಿಸಿದ್ದು ವಿಶೇಷವಾಗಿತ್ತು. ಜಿಲ್ಲೆಯಾದ್ಯಂತ 9 ದಿನಗಳ ಕಾಲ ಗ್ರಾಮದೇವರುಗಳನ್ನು ಪಟ್ಟಕ್ಕೆ ಕೂರಿಸಿ ಬೆಳಿಗ್ಗೆ ಸಂಜೆ ಪೂಜೆ ಸಲ್ಲಿಸುತ್ತಾರೆ. ಅಂತಿಮವಾಗಿ ವಿಜಯದಶಮಿಯ ದಿವಸ ಪಟ್ಟದ ದೇವರನ್ನು ಅಲಂಕರಿಸಿ ಮೆರವಣಿಗೆ ಮಾಡುವ ಪರಿಪಾಠದಂತೆ ದೇವಾನುದೇವತೆಗಳನ್ನು ಮೆರವಣಿಗೆ ಮಾಡಿ ದಸರಾ ಹಬ್ಬದ ಆಚರಣೆಗೆ ತೆರೆ ಎಳೆದರು.

ಇದನ್ನೂ ಓದಿ: Chikkaballapur_Dasara: ವೈದ್ಯ ಡಾ.ಬಿ.ವಿ.ಮಂಜುನಾಥ್ ಮನೆಯಲ್ಲಿ ೧೬ನೇ ವರ್ಷದ ದಸರಾ ಗೊಂಬೆಪೂಜೆ ಆರಾಧನೆ