ನವದೆಹಲಿ: ಕೆಲವು ತಿಂಗಳ ಹಿಂದೆ ಪಂಜಾಬ್ನಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಮುಖಂಡ ವಿಕಾಸ್ ಪ್ರಭಾಕರ್ ಅಲಿಯಾಸ್ ವಿಕಾಸ್ ಬಗ್ಗಾ (Vikas Prabhakar alias Vikas Bagga) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ಬಬ್ಬರ್ ಖಾಲ್ಸಾ ಇಂಟರ್ನ್ಯಾಶನಲ್ (BKI) ಸಂಘಟನೆ ಮುಖ್ಯಸ್ಥ ವಾಧವಾ ಸಿಂಗ್ (Wadhawa Singh) ಮತ್ತು ಇತರ ಐವರು ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (NIA Chargesheet) ಚಾರ್ಜ್ ಶೀಟ್ ಸಲ್ಲಿಸಿದೆ. ಏಪ್ರಿಲ್ 13ರಂದು ಪಂಜಾಬ್ನ ರೂಪನಗರ ಜಿಲ್ಲೆಯ ನಂಗಲ್ನಲ್ಲಿರುವ ಅವರ ಮಿಠಾಯಿ ಅಂಗಡಿಯಲ್ಲಿ ಬಿಕೆಐ ಮಾಡ್ಯೂಲ್ಗೆ ಸೇರಿದ ಭಯೋತ್ಪಾದಕರು ಬಗ್ಗಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಶುಕ್ರವಾರ ಸಲ್ಲಿಸಲಾದ NIA ಚಾರ್ಜ್ಶೀಟ್ನಲ್ಲಿ ವಾಧವಾ ಸಿಂಗ್ ಅಲಿಯಾಸ್ ಬಬ್ಬರ್, ಇಬ್ಬರು ತಲೆಮರೆಸಿಕೊಂಡಿರುವ ಆರೋಪಿಗಳು ಮತ್ತು ಮೂವರು ಬಂಧಿತ ಆರೋಪಿಗಳನ್ನು ಭೀಕರ ಹತ್ಯೆಯ ಪ್ರಮುಖ ಅಪರಾಧಿಗಳು ಎಂದು ಹೆಸರಿಸಲಾಗಿದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಬಂಧಿತ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಶೂಟರ್ಗಳಾದ ಮಂದೀಪ್ ಕುಮಾರ್ ಅಲಿಯಾಸ್ ಮಾಂಗ್ಲಿ ಮತ್ತು ಸುರೀಂದರ್ ಕುಮಾರ್ ಅಲಿಯಾಸ್ ರಿಕಾ ಎಂದು ಗುರುತಿಸಲಾಗಿದ್ದು, ಇಬ್ಬರೂ ಪಂಜಾಬ್ನ ನವನ್ಶಹರ್ ನಿವಾಸಿಗಳು. ಎನ್ಐಎಯಿಂದ ಬಂಧಿತರಾಗಿರುವ ಮೂರನೇ ಆರೋಪಿ ಗುರುಪ್ರೀತ್ ರಾಮ್ ಅಲಿಯಾಸ್ ಗೋರಾ, ನವಾನ್ಶಹರ್ನವನಾಗಿದ್ದಾನೆ. ಮೂವರು ತಲೆಮರೆಸಿಕೊಂಡವರೆಂದರೆ, ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಸಿರುವ ವಧವಾ ಸಿಂಗ್, ಜೊತೆಗೆ ನವನ್ಶಹರ್ನ ಹರ್ಜಿತ್ ಸಿಂಗ್ ಅಲಿಯಾಸ್ ಲಡ್ಡಿ ಮತ್ತು ಹರಿಯಾಣದ ಯಮುನಾನಗರದ ಕುಲ್ಬೀರ್ ಸಿಂಗ್ ಅಲಿಯಾಸ್ ಸಿಧು. ಇವರು ದಾಳಿ ನಡೆಸಲು ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಹಣಕಾಸು ಇತ್ಯಾದಿಗಳನ್ನು ಒದಗಿಸಿದ್ದಾರೆ. NIA ಮೇ 9 ರಂದು ರಾಜ್ಯ ಪೊಲೀಸರಿಂದ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಈ ಕೃತ್ಯದ ಹಿಂದೆ BKIಯ ಕೈವಾಡ ಇರುವುದು ಬಯಲಾಗಿತ್ತು.
NIA Declares Rs.10 Lakh Each Cash Award for Arrest of 2 Accused in VHP Leader Vikas Prabhakar Murder Case pic.twitter.com/kqBuYGh8O6
— NIA India (@NIA_India) June 25, 2024
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಥವಾ ಯುಎಪಿಎ ಅಡಿಯಲ್ಲಿ ವಾಧವಾ ಸಿಂಗ್ನನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಭಯೋತ್ಪಾದಕ ಎಂದು ಘೋಷಿಸಿದೆ. ಆತನ ಅಧೀನದಲ್ಲಿ, BKI ಜೂನ್ 1985 ರಲ್ಲಿ ಏರ್ ಇಂಡಿಯಾ ಕನಿಷ್ಕ ವಿಮಾನ ಫ್ಲೈಟ್ 182 ರಲ್ಲಿ ಬಾಂಬ್ ದಾಳಿ ಸೇರಿದಂತೆ ಭಾರತದಲ್ಲಿ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದೆ.
ಆಗಸ್ಟ್ 1995ರಲ್ಲಿ ಚಂಡೀಗಢದಲ್ಲಿ ಈ ಸಂಘಟನೆ ಉಗ್ರರು ನಡೆಸಿದ ಮಾನವ ಬಾಂಬ್ ಸ್ಫೋಟದಲ್ಲಿ ಪಂಜಾಬ್ನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹಾಗೂ ಹನ್ನೆರಡು ಇತರ ಸಿಬ್ಬಂದಿಗಳು ಸಾವನ್ನಪ್ಪಿದ್ದರು. ಮೇ 2005 ರಲ್ಲಿ ನವದೆಹಲಿಯ ಲಿಬರ್ಟಿ ಮತ್ತು ಸತ್ಯಂ ಚಿತ್ರಮಂದಿರಗಳಲ್ಲಿ ಬಾಂಬ್ ಸ್ಫೋಟದಲ್ಲಿ 40 ಜನ ಗಂಭೀರವಾಗಿ ಗಾಯಗೊಂಡಿದ್ದರು. ಲೂಧಿಯಾನಾದ ಶಿಂಗಾರ್ ಚಿತ್ರಮಂದಿರದಲ್ಲಿ ನಡೆದ ಬಾಂಬ್ ಸ್ಫೋಟ 6 ಜನರನ್ನು ಬಲಿ ತೆಗೆದುಕೊಂಡಿದ್ದು, 35 ಜನರಿಗೆ ಗಾಯಗಳನ್ನು ಉಂಟುಮಾಡಿದವು.
ಈ ಸುದ್ದಿಯನ್ನೂ ಓದಿ: Jeshoreshwari Kali Temple: ಬಾಂಗ್ಲಾದ ಜೇಶೋರೇಶ್ವರಿ ಕಾಳಿ ಮಾತೆಗೆ ಮೋದಿ ನೀಡಿದ ಚಿನ್ನದ ಕಿರೀಟ ಕಳವು