Monday, 25th November 2024

Rohit Sharma: ಮುಂಬೈ ಇಂಡಿಯನ್ಸ್ ಆಫೀಸ್​ ಬಳಿ ರೋಹಿತ್‌ ಕಾರು; ಕುತೂಹಲ ಮೂಡಿಸಿದ ಹಿಟ್​ಮ್ಯಾನ್ ನಡೆ

ಮುಂಬಯಿ: ಮುಂಬರುವ 18 ಆವೃತ್ತಿಯ ಐಪಿಎಲ್‌(IPL 2025) ಟೂರ್ನಿಯಲ್ಲಿ ರೋಹಿತ್‌ ಶರ್ಮಾ(Rohit Sharma) ಅವರು ಮುಂಬೈ ಇಂಡಿಯನ್ಸ್‌ ತಂಡ ತೊರೆದು ಬೇರೆ ಫ್ರಾಂಚೈಸಿ ಪರ ಆಡಲು ನಿರ್ಧರಿಸಿದ್ದಾರೆ ಎಂದು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ರೋಹಿತ್‌ ಮುಂಬೈ ಇಂಡಿಯನ್ಸ್‌(Mumbai Indians) ಕಚೇರಿಗೆ ಭೇಟಿ ನೀಡಿದ್ದಾರೆ. ರೋಹಿತ್‌ ಭೇಟಿ ಇದೀಗ ಮುಂಬೈ ಮತ್ತು ರೋಹಿತ್‌ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ವರದಿಗಳ ಪ್ರಕಾರ ಮುಂಬೈ ಇಂಡಿಯನ್ಸ್ ಮಾಲೀಕರು ರಿಟೈನ್ ಬಗ್ಗೆ ಚರ್ಚಿಸಲು ರೋಹಿತ್ ಶರ್ಮಾ ಅವರನ್ನು ತಮ್ಮ ಆಫೀಸ್​ಗೆ ಕರೆಸಿದ್ದಾರೆ ಎಂದು ಹೇಳಲಾಗಿದೆ. ಈ ಸುದ್ದಿ ವೈರಲ್‌ ಆಗುತ್ತಿದ್ದಂತೆ ಕೆಲ ನೆಟ್ಟಿಗರು ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದಲ್ಲೇ ಉಳಿಯಲಿದ್ದಾರೆ ಎಂದು ಹೇಳಲಾರಂಭಿಸಿದ್ದಾರೆ.

ಅಸಲಿಗೆ ರೋಹಿತ್‌ ಶರ್ಮಾ ನ್ಯೂಜಿಲ್ಯಾಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಈ ಮೈದಾನ ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದಲ್ಲಿದೆ. ಇದನ್ನು ಮುಂಬೈ ಇಂಡಿಯನ್ಸ್ ಆಟಗಾರರ ತರಬೇತಿ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಾರೆ. ರೋಹಿತ್‌ ಕೂಡ ಮುಂಬೈ ಆಟಗಾರನಾಗಿರುವ ಕಾರಣ ಈ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್‌ ಆಫೀಸ್‌ ಕೂಡ ಈ ಸ್ಟೇಡಿಯಂನಲ್ಲಿದೆ. ಹೀಗಾಗಿ ರೋಹಿತ್‌ ಅಭ್ಯಾಸದ ವೇಳೆ ಕಚೇರಿ ಮುಂದೆ ತಮ್ಮ ಕಾರನ್ನು ಪಾರ್ಕಿಂಗ್‌ ಮಾಡಿದ್ದರು. ಇದನ್ನೇ ನೆಟ್ಟಿಗರು ತಪ್ಪಾಗಿ ಅರ್ಧ ಮಾಡಿಕೊಂಡು ರೋಹಿತ್‌ ಐಪಿಎಲ್‌ ಬಗ್ಗೆ ಚರ್ಚಿಸಲು ಇಲ್ಲಿಗೆ ಭೇಟಿ ನೀಡಿದ್ದಾರೆ ಎಂದು ಸುದ್ದಿ ಹಬ್ಬಿದ್ದಾರೆ.

ಇದನ್ನೂ ಓದಿ Rohit Sharma: ಅಜರುದ್ದೀನ್ ದಾಖಲೆ ಮೇಲೆ ಕಣ್ಣಿಟ್ಟ ರೋಹಿತ್‌

ಆಸೀಸ್‌ ಮೊದಲ ಟೆಸ್ಟ್‌ಗೆ ರೋಹಿತ್‌ ಗೈರು

ಭಾರತ ತಂಡದ ನಾಯಕ ರೋಹಿತ್​ ಶರ್ಮ(Rohit Sharma) ವರ್ಷಾಂತ್ಯದ ಆಸ್ಟ್ರೆಲಿಯಾ ಪ್ರವಾಸದ ಬಾರ್ಡರ್​-ಗಾವಸ್ಕರ್​ ಟ್ರೋಫಿ(IND vs AUS Test) ಟೆಸ್ಟ್​ ಸರಣಿಯ ಆರಂಭಿಕ ಎರಡು ಪಂದ್ಯಗಳ ಪೈಕಿ ಒಂದು ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ವೈಯಕ್ತಿಕ ಕಾರಣದಿಂದಾಗಿ ಒಂದು ಪಂದ್ಯಕ್ಕೆ ಗೈರಾಗುವುದಾಗಿ ರೋಹಿತ್​ ಈಗಾಗಲೆ ಬಿಸಿಸಿಐ ಜತೆಗೆ ಸಂವಹನ ನಡೆಸಿ ಒಪ್ಪಿಗೆ ಪಡೆದಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ರೋಹಿತ್​ ಪತ್ನಿ ರಿತಿಕಾ ಆ ಸಮಯದಲ್ಲಿ ಎರಡನೇ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇರುವುದರಿಂದ ರೋಹಿತ್‌ ಮೊದಲ ಪಂದ್ಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ರೋಹಿತ್​ ಅವರ ಪತ್ನಿ ರಿತಿಕಾ ಆಸ್ಟ್ರೆಲಿಯಾ ಪ್ರವಾಸಕ್ಕೆ ಮೊದಲೇ ಮಗುವಿಗೆ ಜನ್ಮ ನೀಡಿದರೆ ಆಗ ರೋಹಿತ್‌ ಎಲ್ಲ 5 ಟೆಸ್ಟ್​ ಪಂದ್ಯಗಳಲ್ಲೂ ಆಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.