Sunday, 17th November 2024

Karnikotsava: ʼಆಕಾಶದತ್ತ ಚಿಗುರಿತಲೇ, ಬೇರೆಲ್ಲಾ ಮುತ್ತಾಯಿತಲೇ ಪರಾಕ್ʼ; ಗೊರವಯ್ಯನ ಕಾರ್ಣಿಕ ನುಡಿಯ ಅರ್ಥವೇನು?

Karnikotsava

ಹಾವೇರಿ: ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಮಾಲತೇಶ ಸ್ವಾಮಿ ಕಾರ್ಣಿಕೋತ್ಸವ (Karnikotsava) ನಡೆದಿದ್ದು, ಸಾವಿರಾರು ಭಕ್ತರ ಸಮ್ಮುಖದಲ್ಲಿ ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು ವಾರ್ಷಿಕ ಕಾರ್ಣಿಕ ನುಡಿದಿದ್ದಾರೆ.

ಕಾರ್ಣಿಕೋತ್ಸವದಲ್ಲಿ 18 ಅಡಿಯ ಬಿಲ್ಲನ್ನೇರಿದ ಗೊರವಯ್ಯ, “ಆಕಾಶದತ್ತ ಚಿಗುರಿತಲೇ, ಬೇರೆಲ್ಲಾ ಮುತ್ತಾಯಿತಲೇ ಪರಾಕ್” ಎಂದು ಭವಿಷ್ಯವಾಣಿ ನುಡಿದರು. ಕಾರ್ಣಿಕದ ಅರ್ಥವನ್ನು ದೇವರಗುಡ್ಡದಲ್ಲಿ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಗುರೂಜಿ ಅವರು ವಿವರಿಸಿದ್ದು, ಆಕಾಶದತ್ತ ಚಿಗುರಿತಲೆ ಎಂದರೆ ಒಳ್ಳೆಯ ಮಳೆ ಆಗುತ್ತದೆ, ಬೇರೆಲ್ಲ ಮುದ್ದಾಯಿತಲೇ ಎಂದರೆ ರೈತರಿಗೆ ಒಳ್ಳೆಯ ಬೆಳೆ ಬರುತ್ತೆ ಎಂದು ಅರ್ಥ ಮಾಡಿಕೊಳ್ಳಬಹುದು ಎಂದು ವಿಶ್ಲೇಷಣೆ ಮಾಡಿದರು.

ರಾಜಕೀಯವಾಗಿ ಹೇಳುವುದಾದರೆ ಆಕಾಶದತ್ತ ಚಿಗುರಿತಲೇ ಎಂದರೆ, ಈಗಿರುವ ನಾಯಕತ್ವ ಆಕಾಶದತ್ತ ಚಿಗುರಿಬಿಟ್ಟಿದೆ. ಬೇರೆಲ್ಲಾ ಮುದ್ದಾಯಿತಲೇ ಎಂದರೆ ಅವರಿಗೆಲ್ಲಾ ಬೆನ್ನೆಲುಬಾಗಿ ನಿಂತಿರೋದು ನೀವೆಲ್ಲಾ ನೋಡಿರಬಹುದು. ಕಾನೂನು ವ್ಯವಸ್ಥೆಯಲ್ಲಿ ಏನು ಬದಲಾವಣೆ ಆದರೂ ಕೂಡ ಈಗಿರುವ ನಾಯಕತ್ವ ಹೇಳಿದಂಗೆ ಅವರು ಒಪ್ಪಿಕೊಳ್ತಾರೆ ಅಂತ ಹೇಳಬಹುದು. ಅಂದರೆ ಆಕಾಶದತ್ತ ಚಿಗುರಿರೋ ಗಿಡ ಹೇಳಿದಂಗೆ ಬೇರುಗಳು ಒಪ್ಪಿಕೊಳ್ಳುತ್ತವೆ ಎಂದು ರಾಜಕೀಯವಾಗಿ ವಿಶ್ಲೇಷಣೆ ಮಾಡಬಹುದು ಎಂದರು.

ಈ ಸುದ್ದಿಯನ್ನೂ ಓದಿ | Godess Kali : ಬಾಂಗ್ಲಾದಲ್ಲಿ ಕಾಳಿ ದೇವಸ್ಥಾನದಲ್ಲಿ ಕಿರೀಟ ಕಳ್ಳತನ; ಭಾರತದ ಖಂಡನೆ

ಅಂದಹಾಗೆ ಹಾವೇರಿ ಜಿಲ್ಲೆಯ ರಾಣೆ ಬೆನ್ನೂರು ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಮಾಲತೇಶ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಕಾರ್ಣಿಕೋತ್ಸವದಲ್ಲಿ ನುಡಿಯುವ ಭವಿಷ್ಯವಾಣಿ ನಿಜವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಈ ಕಾರ್ಣಿಕೋತ್ಸವಕ್ಕೂ ಮುನ್ನ ಗೊರವಯ್ಯ 9 ದಿನ ಉಪವಾಸವಿರುತ್ತಾರೆ.

ಸಾಮೂಹಿಕ ಶಿವಪೂಜಾ ಪದ್ದತಿಗೆ ಹಿರೇಮಠ ಶ್ರೀಗಳ ಸಲಹೆ

ತುಮಕೂರು: ನಗರ ವೀರಶೈವ ಸಮಾಜ ಸೇವಾ ಸಮಿತಿಯಿಂದ ಶನಿವಾರ ನಗರದಲ್ಲಿ ಸಂಭ್ರಮದ ಶಮೀಪೂಜಾ ಕಾರ್ಯಕ್ರಮ ನಡೆಯಿತು. ಏಳು ದಶಕಗಳಿಂದ ಸಮಾಜದಿಂದ ಶಮಿಪೂಜಾ ಕಾರ್ಯಕ್ರಮ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬರುತ್ತಿದೆ.

ರೇಣುಕಾ ವಿದ್ಯಾಪೀಠ ಆವರಣದಲ್ಲಿ ನಡೆದ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದುಷ್ಟ ಶಕ್ತಿ ದಮನವಾಗಿ, ಶಿಷ್ಟ ಶಕ್ತಿಯು ಉಳಿಯಬೇಕು ಎಂಬದು ವಿಜಯ ದಶಮಿ ಆಚರಿಸಲಾಗುತ್ತಿದೆ. ವಿಜಯದಶಮಿಗೆ ರಾಮಾಯಣ, ಮಹಾಭಾರತ, ಪುರಾಣಗಳ ಹಿನ್ನೆಲೆಯಿದೆ. ದಕ್ಷಿಣ ಭಾರತದಲ್ಲಿ ದುಷ್ಟ ಸಂಹಾರ ಮಾಡಿದ ದೇವಿಯ ವಿಜಯವನ್ನು ವಿಜಯದಶಮಿಯಾಗಿ ಆಚರಿಸಿದರೆ, ಉತ್ತರ ಭಾರತದಲ್ಲಿ ಭಾರತದಲ್ಲಿ ರಾಮಣ ಮೂರ್ತಿ ಸುಡುವ ಮೂಲಕ ರಾಮನ ವಿಜಯೋತ್ಸವವಾಗಿ ಆಚರಿಸಲಾಗುತ್ತದೆ ಎಂದರು.

ವೀರಶೈವ ಸಮಾಜ ಸೂಕ್ಷö್ಮಸಂವೇದನೆಯ ಸಮಾಜ. ಜ್ಞಾನ, ತಂತ್ರಜ್ಞಾನ, ದಾನದಲ್ಲಿ ವೀರಶೈವ ಸಮಾಜದ ಕೊಡುಗೆಗೆ ಕೊರತೆಯಿಲ್ಲ. ಸಮಾಜದ ಸ್ವಾಮೀಜಿಗಳು ಶಿಕ್ಷಣವನ್ನು ಸಾರ್ವತ್ರಿಕಗೊಳಿಸದಿದ್ದರೆ ಸಮಾಜದಲ್ಲಿ ಇಷ್ಟು ಜ್ಞಾನವಂತರನ್ನು ಕಾಣಲು ಸಾಧ್ಯವಿರಲಿಲ್ಲವೇನೋ, ಸ್ವಾಮೀಜಿಗಳು ಮಾತ್ರವಲ್ಲದೆ ವೀರಶೈವ ಸಮಾಜದ ಹಲ ವಾರು ಮುಖಂಡರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಎಷ್ಟೋ ಮಹನೀಯರು ಸಮಾಜಕ್ಕಾಗಿ ತಮ್ಮ ಆಸ್ತಿ, ಸಂಪತ್ತನ್ನು ನೀಡಿದ್ದಾರೆ ಎಂದು ಹೇಳಿದರು.

ಸಾಮೂಹಿಕ ಶಿವಪೂಜೆಗೆ ಸಲಹೆ

ಜಾತಿ ಗಣತಿಯಂತೆ ವೀರಶೈವ ಸಮಾಜದಲ್ಲಿ ದೀಕ್ಷಾ ಗಣತಿ ನಡೆಸಬೇಕಾಗಿದೆ. ಸಮಾಜದ ಎಲ್ಲರೂ ದೀಕ್ಷೆ ಪಡೆಯ ಬೇಕು. ನಿತ್ಯ ಶಿವಪೂಜೆ ಮಾಡಲು ಸಾಧ್ಯವಾಗದೇ ಇರಬಹುದು, ಹೀಗಾಗಿ ವಾರಕ್ಕೊಮ್ಮೆ ಶ್ರೀ ಮಠದಲ್ಲಿ ಸಾಮೂಹಿಕ ಶಿವಪೂಜೆ ವ್ಯವಸ್ಥೆ ಮಾಡುವ ಆಲೋಚನೆ ತಮಗಿದೆ. ಮುಸ್ಲೀಮರು, ಕ್ರೈಸ್ತರು ಶುಕ್ರವಾರ, ಭಾನುವಾರ ಮಸೀದಿ, ಚರ್ಚ್ಗಳಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ರೀತಿಯಲ್ಲಿ ವಾರಕ್ಕೊಮ್ಮೆ ಸಾಮೂಹಿಕ ಶಿವಪೂಜೆ ಪದ್ದತಿ ಶುರು ಮಾಡಬೇಕು. ಇದರಿಂದ ನಮ್ಮ ಧರ್ಮ, ಸಂಸ್ಕೃತಿ ಉಳಿಯುತ್ತದೆ ಎಂದು ಸ್ವಾಮೀಜಿ ಹೇಳಿದರು.

ಇದೂವರೆಗೂ ವೀರಶೈವ ಸಮಾಜ ಸೇವಾ ಸಮಿತಿಯ ಶಮೀಪೂಜಾ ಕಾರ್ಯಕ್ರಮವು ಉರುಗಾದ್ರಿ ಗವಿ ಮಠಾಧ್ಯಕ್ಷ ರಾದ ಚನ್ನಬಸವ ರಾಜೇಂದ್ರ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆಯುತ್ತಿತ್ತು. ಅನಾರೋಗ್ಯದ ಕಾರಣ ಈ ಬಾರಿ ಸ್ವಾಮೀಜಿ ಭಾಗವಹಿಸಲಿಲ್ಲ, ತಮ್ಮ ಸಂದೇಶ ಕಳಿಸಿದ್ದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು, ಏಳು ದಶಕಗಳಿಂದ ವೀರಶೈವ ಸಮಾಜ ನಗರದಲ್ಲಿ ದಸರಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಈಗಲೂ ಅದೇ ಸಂಪ್ರದಾಯದಲ್ಲಿ ಆಚರಣೆ ಮುಂದುವರೆದಿದೆ. ಧಾರ್ಮಿಕ ಕಾರ್ಯ ಕ್ರಮ ವ್ಯವಸ್ಥೆ ಮಾಡುವುದರಲ್ಲಿ ವೀರಶೈವ ಸಮಾಜ ಯಾವತ್ತಿಗೂ ಮುಂದೆ ಇರುತ್ತದೆ ಎಂದು ಹೇಳಿದರು.

ಈ ವೇಳೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ.ಡಿ.ವಿ.ಪರಶಿವಮೂರ್ತಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಜಿಲ್ಲಾ ಅಧ್ಯಕ್ಷ ಡಾ.ಎಸ್.ಪರಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಪ್ರದಾಯದಂತೆ ದೇಶದ ಶೆಟ್ಟರು ಮನೆತನದವರು ಸಮಾಜದ ಶಮೀಪೂಜಾ ಕಾರ್ಯಕ್ರಮದಲ್ಲಿ ಶಮಿ ಕಡಿಯುವ ಪದ್ದತಿ ಮುಂದುವರೆದಿದೆ. ಇದೇ ಮನೆತನದ ವಿ.ಆರ್.ಎಲ್.ಟ್ರಾನ್ಸ್ಪೋರ್ಟ್ ಶಾಖಾ ವ್ಯವಸ್ಥಾಪಕ ಕೆ.ಎಸ್.ಚೆನ್ನಬಸಪ್ಪ ಅವರು ಬನ್ನಿ ಮರ ಕಡಿದು ಶಮೀಪೂಜೆ ನೆರವೇರಿಸಿದರು.

ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಸೊಗಡು ಶಿವಣ್ಣ, ಸಮಿತಿ ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಗೌರವ ಕಾರ್ಯದರ್ಶಿ ಅತ್ತಿ ರೇಣುಕಾನಂದ, ಜಂಟಿ ಕಾರ್ಯದರ್ಶಿ ಟಿ.ಎನ್.ರುದ್ರೇಶ್, ಖಜಾಂಚಿ ಶಿವಲಿಂಗಮ್ಮ, ಆಡಳಿತಾಧಿಕಾರಿ ರುದ್ರಕುಮಾರ್ ಆರಾಧ್ಯ, ಮುಖಂಡ ರಾದ ದಿಲೀಪ್‌ಕುಮಾರ್, ಕೆ.ವೈ.ಸಿದ್ಧಲಿಂಗಮೂರ್ತಿ, ಟಿ.ಸಿ.ಓಹಿಲೇಶ್ವರ್, ಕೆ.ಜೆ.ರುದ್ರಪ್ಪ, ಟಿ.ಆರ್.ನಟರಾಜು, ಟಿ.ಸಿ.ವಿಕಾಸ್, ನಳಿನಾ ಶಿವಾನಂದ್, ಸುಮ ಪ್ರಸನ್ನ, ಡಿ.ಆರ್.ಮಲ್ಲೇಶಯ್ಯ, ಟಿ.ಆರ್.ಅನುಸೂಯಮ್ಮ ಮೊದಲಾದ ವರು ಭಾಗವಹಿಸಿದ್ದರು.

ಇದನ್ನೂ ಓದಿ: Tumkur Dasara: ಸಂಪ್ರದಾಯಬದ್ಧವಾಗಿ ತುಮಕೂರು ದಸರಾ ಉತ್ಸವ ಆಚರಣೆ

ದಿವಾನರ ಬೀದಿಯ ಸಿದ್ಧಲಿಂಗೇಶ್ವರಸ್ವಾಮಿ, ಕೊಡಿ ಬಸವೇಶ್ವರಸ್ವಾಮಿ, ಕಾಶಿ ವಿಶ್ವನಾಥಸ್ವಾಮಿ, ಬೆಣ್ಣೆ ಬಸವೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳ ಉತ್ಸವ ಮೂರ್ತಿಗಳನ್ನು ಶಮೀಪೂಜಾ ಸ್ಥಳಕ್ಕೆ ಮೆರವಣ ಗೆಯಲ್ಲಿ ಕರೆತರಲಾಗಿತ್ತು.