ಮೈಸೂರು: ದಸರಾ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ (Mysuru Dasara) ಭೇಟಿ ನೀಡಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಅಭಿಮಾನಿಯೊಬ್ಬ ರಸ್ತೆಯಲ್ಲೇ ʼಐ ಲವ್ ಯುʼ ಎಂದು ಕೂಗಿರುವ ಘಟನೆ ನಡೆದಿದೆ. ಯುವಕನ ಪ್ರೇಮ ನಿವೇದನೆಯನ್ನು ಕೇಳಿದ ಕೂಡಲೇ, ಸಚಿವೆ (Laxmi Hebbalkar) ನಾಚಿ ನೀರಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಇತರ ಸಚಿವರು ತೆರೆದ ವಾಹನದಲ್ಲಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ವೀಕ್ಷಿಸುತ್ತಿದ್ದರು. ಈ ವೇಳೆ ರಸ್ತೆಬದಿಯಿದ್ದ ಓರ್ವ ಯುವಕ, ಐ ಲವ್ ಯು ಎಂದು ಕೂಗಿದ್ದಾನೆ. ಆ ಮಾತು ಕೇಳುತ್ತಲೇ ಸಚಿವೆ ನಿಮಗೆಲ್ಲಾ ಕೇಳಿಸ್ತಾ ಎಂದು ನಾಚಿ ನೀರಾಗಿದ್ದಾರೆ. ಈ ವೇಳೆ ಪಕ್ಕದಲ್ಲೇ ಇದ್ದ ಸಿಎಂ ಸಿದ್ದರಾಮಯ್ಯ ಹಾಗೂ ಇತರರು ನಗೆಗಡಲಲ್ಲಿ ತೇಲಿದ್ದಾರೆ.
ಈ ಸುದ್ದಿಯನ್ನೂ ಓದಿ | Dasara Celebration In Movie: ದಸರಾ ಮಹತ್ವ ಸಾರುವ ಬಾಲಿವುಡ್‌ನ 5 ಸಿನಿಮಾಗಳಿವು
ಕಾಳಿಂಗ ಸರ್ಪದ ಮಂಡೆಗೆ ಮುತ್ತಿಟ್ಟ ಯುವತಿ; ಎದೆ ಝಲ್ಲೆನ್ನುವ ವಿಡಿಯೊ ಇಲ್ಲಿದೆ…
ಬೆಂಗಳೂರು : ಹಾವುಗಳನ್ನು ದೂರದಿಂದ ನೋಡಿದರೆ ಸಾಕು ಜನರು ಹೆದರಿ ಓಡುತ್ತಾರೆ. ಅದರಲ್ಲೂ ಕಾಳಿಂಗ ಸರ್ಪವೆಂದರೆ ಬೆಚ್ಚಿಬೀಳುತ್ತಾರೆ. ಯಾಕೆಂದರೆ ಅದು ಭಯಂಕರ ವಿಷಕಾರಿ, ಕಚ್ಚಿದರೆ ಸಾವು ಖಚಿತ. ಅಂತಹದರಲ್ಲಿ ಯುವತಿಯೊಬ್ಬಳು ಇಂತಹ ವಿಷಕಾರಿ ಕಾಳಿಂಗ ಸರ್ಪದ ಜೊತೆಗೆ ಆಟವಾಡಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆದ ಈ ವಿಡಿಯೊ ಕಂಡು ವೀಕ್ಷಕರು ಹೌಹಾರಿದ್ದಾರೆ. ಹಾಗೇ ಆ ಯುವತಿಯ ಕೆಲಸಕ್ಕೆ ವೀಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ವೈರಲ್ ಆಗಿರುವ ಈ ವಿಡಿಯೊದಲ್ಲಿ ಯುವತಿಯೊಬ್ಬಳು ಅಪಾಯಕಾರಿಯಾದ ಕಾಳಿಂಗ ಸರ್ಪದ ಪಕ್ಕದಲ್ಲಿ ಕುಳಿತಿದ್ದು ಮಾತ್ರವಲ್ಲ ಅದರ ಜೊತೆಗೆ ಆಟವಾಡುತ್ತಾ ಅದರ ತಲೆಗೆ ಮುತ್ತಿಟ್ಟಿದ್ದಾಳೆ. ಇದಲ್ಲದೆ, ಯುವತಿ ತನ್ನ ಕೆನ್ನೆಯನ್ನು ಕಾಳಿಂಗ ಸರ್ಪದ ಬಾಯಿಯ ಬಳಿ ಇಟ್ಟು ತನಗೂ ಮುತ್ತು ಕೊಡುವಂತೆ ಹೇಳಿದ್ದಾಳೆ.
ಈ ವಿಡಿಯೊವನ್ನು ಔಲಿಯಾ ಖೈರುನಿಸಾ ಎಂಬ ಇನ್ಸ್ಟಾಗ್ರಾಂ ಹ್ಯಾಂಡಲ್‍ನಲ್ಲಿ ಹಂಚಿಕೊಳ್ಳಲಾಗಿದೆ. ಈ ಯುವತಿ ವನ್ಯಜೀವಿ ಪ್ರೇಮಿಯಾಗಿದ್ದು ಯೂಟ್ಯೂಬ್‍ನಲ್ಲಿ 80,000 ಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾಳೆ. ಯುವತಿ ತನ್ನ ಪೇಜ್‍ನಲ್ಲಿ ವಿವಿಧ ಪ್ರಾಣಿಗಳೊಂದಿಗಿನ ಸಾಕಷ್ಟು ವಿಡಿಯೊಗಳನ್ನು, ಪೋಸ್ಟ್ ಮಾಡಿದ್ದಾಳೆ.
ಈ ವಿಡಿಯೊ ನೋಡಿದವರು ಬೆಚ್ಚಿ ಬಿದ್ದಿದ್ದಾರೆ ಮತ್ತು ತಮ್ಮ ಕಳವಳವನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ. “ಹಾವಿನ ಬಗ್ಗೆ ಎಚ್ಚರದಿಂದಿರಿ. ಎಂದು ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ. “ನಾಗರಹಾವನ್ನು ಚುಂಬಿಸುವುದು ತುಂಬಾ ಮೂರ್ಖತನದ ಆಲೋಚನೆ” ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ.
ಇದನ್ನೂ ಓದಿ: ನಾಗಾ ಸಾಧುಗಳ ಬಗ್ಗೆ ಗೊತ್ತಿರದ ಕುತೂಹಲಕಾರಿ ವಿಷಯಗಳು ಇಲ್ಲಿವೆ ಓದಿ…
“ಈ ಹುಡುಗಿ ಮಾಡಿದ ಕೆಲಸ ತುಂಬಾ ಅಪಾಯಕಾರಿ” ಎಂದು ಮೂರನೇ ಬಳಕೆದಾರರು ಹೇಳಿದ್ದಾರೆ. ಮತ್ತು ಕೆಲವರು ಅವಳ ಕೆಲಸವನ್ನು ಹೊಗಳಿದ್ದಾರೆ ಮತ್ತು ಅಪಾಯಕಾರಿ ಪ್ರಾಣಿಗಳಿಗೆ ತುಂಬಾ ಹತ್ತಿರವಾಗಿದ್ದಕ್ಕಾಗಿ ಅವಳ ಧೈರ್ಯವನ್ನು ಮೆಚ್ಚಿದ್ದಾರೆ.