Friday, 22nd November 2024

Mallikarjun Kharge : ಬಿಜೆಪಿ ಭಯೋತ್ಪಾಕರ ಪಕ್ಷ ಎಂಬ ಖರ್ಗೆ ಟೀಕೆಗೆ ತಿರುಗೇಟು ಕೊಟ್ಟ ಬಿಜೆಪಿ

Mallikarjun Kharge

ನವದೆಹಲಿ: ಬಿಜೆಪಿಯನ್ನು ಭಯೋತ್ಪಾದಕರ ಪಕ್ಷ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕರೆದ ನಂತರ ಕೇಂದ್ರದ ಆಡಳಿತ ಪಕ್ಷದ ನಾಯಕರು ಕಾಂಗ್ರೆಸ್ ಜನರನ್ನು ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಅವಮಾನಿಸುವ ಅಭ್ಯಾಸವನ್ನು ಮುಂದುವರಿಸಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್‌ ತನ್ನ ನಿಜ ಬಣ್ಣವನ್ನು ಆಗಾಗ ತೋರಿಸುತ್ತಿದೆ ಎಂದು ಹೇಳಿದ್ದಾರೆ.

ತಮ್ಮ ಪಕ್ಷವನ್ನು ‘ನಗರ ನಕ್ಸಲರು’ ನಡೆಸುತ್ತಿದ್ದಾರೆ ಎಂಬ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಪ್ರಧಾನಿ ಮೋದಿ ಅವರ ಹೇಳಿಕೆಗೆ ಖರ್ಗೆ ಶನಿವಾರ ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಜೆಪಿ ಭಯೋತ್ಪಾದಕರ ಪಕ್ಷವಾಗಿದ್ದು, ಅದು ಜನರ ಮೇಲೆ ದೌರ್ಜನ್ಯ ಮಾಡುತ್ತಿದೆ. ಬುಡಕಟ್ಟು ಮತ್ತು ದಲಿತರ ವಿರುದ್ಧ ದೌರ್ಜನ್ಯ ನಡೆಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದರು.

ಕಾಂಗ್ರೆಸ್‌ ಸ್ವಲ್ಪ ಸಮಯದವರೆಗೆ ಮೌನವಾಗಿದ್ದರು. (ಹರಿಯಾಣ ಗೆಲುವಿನ ಬಳಿಕ) ಈಗ ಸ್ವಲ್ಪ ಜೀವ ಪಡೆದುಕೊಂಡಿದ್ದಾರೆ, ಬುದ್ಧಿಜೀವಿಗಳು ಮತ್ತು ಪ್ರಗತಿಪರ ಜನರನ್ನು ‘ನಗರ ನಕ್ಸಲರು’ ಎಂದು ಕರೆಯುತ್ತಾರೆ, ಅವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ನಗರ ನಕ್ಸಲರು ಎಂದು ಕರೆಯುತ್ತಾರೆ. ಬಿಜೆಪಿಯೇ ಭಯೋತ್ಪಾದಕರ ಪಕ್ಷ. ಅವರು ಜನರ ಮೇಲೆ ದಾಳಿ ಮಾಡುತ್ತಿದೆ. ಪರಿಶಿಷ್ಟ ಜಾತಿಗಳ ಸದಸ್ಯರ ಬಾಯಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ ಮತ್ತು ಬುಡಕಟ್ಟು ಜನಾಂಗದವರ ಮೇಲೆ ಅತ್ಯಾಚಾರ ಮಾಡುತ್ತಾರೆ. ಅವರು (ಬಿಜೆಪಿ ನಾಯಕತ್ವ) ಇಂಥ ಕೃತ್ಯಗಳನ್ನು ಮಾಡುವವರನ್ನು ಬೆಂಬಲಿಸುತ್ತಾರೆ ಎಂದು ಖರ್ಗೆ ಆರೋಪಿಸಿದ್ದರು.

ಇದನ್ನು ಹೇಳುವ ಹಕ್ಕು ಪ್ರಧಾನಿ ಮೋದಿಗೆ ಇಲ್ಲ. ಅವರ ಸರ್ಕಾರ ಎಲ್ಲೆಲ್ಲಿ ಅಧಿಕಾರದಲ್ಲಿದೆಯೋ ಅಲ್ಲೆಲ್ಲ ಪರಿಶಿಷ್ಟ ಜಾತಿಗಳ ಜನರ ವಿರುದ್ಧ, ವಿಶೇಷವಾಗಿ ಬುಡಕಟ್ಟು ಜನಾಂಗದವರ ವಿರುದ್ಧ ದೌರ್ಜನ್ಯಗಳು ನಡೆಯುತ್ತಿವೆ. ನಂತರ ಅವರು ಈ ಜನರ ವಿರುದ್ಧದ ಅನ್ಯಾಯದ ಬಗ್ಗೆ ಮಾತನಾಡುತ್ತಾರೆ. ನಾವು ಅಧಿಕಾರದಲ್ಲಿದ್ದೇವೆಯೇ? ಇದು ಅವರ ಸರ್ಕಾರ, ಅವರು ಇದನ್ನು ನಿಯಂತ್ರಿಸಬಹುದು” ಎಂದು ಅವರು ಹೇಳಿದರು.

ಇದನ್ನೂ ಓದಿ: Mallikarjun Kharge: ಬಿಜೆಪಿ ಭಯೋತ್ಪಾದಕರ ಪಕ್ಷ; ಮೋದಿಯ ಅರ್ಬನ್‌ ನಕ್ಸಲ್‌ ಹೇಳಿಕೆಗೆ ಖರ್ಗೆ ಖಡಕ್‌ ತಿರುಗೇಟು

ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ಕಾಂಗ್ರೆಸ್ ಅತ್ಯಂತ ದಲಿತ ವಿರೋಧಿ ಪಕ್ಷ ಎಂದು ಹೇಳಿದ್ದಾರೆ.