Friday, 22nd November 2024

Train Accident : ರೈಲು ಹಳಿಯಲ್ಲಿ ಗ್ಯಾಸ್ ಸಿಲಿಂಡರ್ ಪತ್ತೆ; ತಪ್ಪಿನ ದೊಡ್ಡ ಅನಾಹುತ

Train Accident

ಬೆಂಗಳೂರು: ಉತ್ತರಾಖಂಡದ ರೂರ್ಕಿ ಬಳಿಯ ರೈಲ್ವೆ ಹಳಿಗಳಲ್ಲಿ ಭಾನುವಾರ ಮುಂಜಾನೆ ಖಾಲಿ ಎಲ್‌ಪಿಜಿ ಸಿಲಿಂಡರ್ ಪತ್ತೆಯಾಗಿದೆ. ಹೀಗಾಗಿ ದೊಡ್ಡ ಅನಾಹುತವೊಂದು (Train Accident) ತಪ್ಪಿದೆ. ಗೂಡ್ಸ್ ರೈಲಿನ ಲೋಕೋ ಪೈಲಟ್ ಸಿಲಿಂಡರ್ ಅನ್ನು ಕಂಡು ರೈಲು ನಿಲ್ಲಿಸಿ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಧಂಧೇರಾದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಲಂಡೌರಾ ಮತ್ತು ಧಂಧೇರಾ ನಿಲ್ದಾಣಗಳ ನಡುವೆ ಬೆಳಿಗ್ಗೆ 6: 35 ಕ್ಕೆ ಈ ಘಟನೆ ಸಂಭವಿಸಿದೆ ಎಂದು ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್‌ ) ಹಿಮಾಂಶು ಉಪಾಧ್ಯಾಯ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಪಾಯಿಂಟ್ ಮ್ಯಾನ್ ಕಳುಹಿಸಲಾಗಿದ್ದು ಅದು ಖಾಲಿಯಾಗಿರುವ ಸಿಲಿಂಡರ್ ಎಂದು ಖಚಿತಪಡಿಸಿದ್ದಾರೆ. ಬಳಿಕ ಅದನ್ನು ಧಂಧೇರಾದಲ್ಲಿನ ಸ್ಟೇಷನ್ ಮಾಸ್ಟರ್ ಅವರ ವಶಪಡಿಸಿಕೊಂಡಿದ್ದಾರೆ.

ಸ್ಥಳೀಯ ಪೊಲೀಸರು ಮತ್ತು ಸರ್ಕಾರಿ ರೈಲ್ವೆ ಪೊಲೀಸರಿಗೆ (ಜಿಆರ್‌ಪಿ) ಮಾಹಿತಿ ನೀಡಲಾಗಿದ್ದು, ಎಫ್ಐಆರ್ ದಾಖಲಿಸಲಾಗಿದೆ.

ಭಾರತದಾದ್ಯಂತ ಇತ್ತೀಚೆಗೆ ರೈಲು ಹಳಿ ತಪ್ಪುವ ಘಟನೆಗಳ ನಡುವೆ ಒಂದಾಗಿದೆ. ಆಗಸ್ಟ್‌ನಿಂದ ದೇಶಾದ್ಯಂತ ಇಂತಹ 18 ಪ್ರಯತ್ನಗಳು ನಡೆದಿವೆ ಎಂದು ಭಾರತೀಯ ರೈಲ್ವೆ ಬಹಿರಂಗಪಡಿಸಿದೆ. ಈ ವಾರಗಳಲ್ಲಿ ಹೆಚ್ಚುವರಿ ಮೂರು ಪ್ರಯತ್ನಗಳು ವರದಿಯಾಗಿವೆ. ಇತ್ತೀಚಿನ ಪ್ರಕರಣದಲ್ಲಿ ಕಾನ್ಪುರದ ಹಳಿಗಳಲ್ಲಿ ಮತ್ತೊಂದು ಎಲ್ಪಿಜಿ ಸಿಲಿಂಡರ್ ಪತ್ತೆಯಾಗಿದೆ.

ಇದನ್ನೂ ಓದಿ: CM Siddaramaiah: ಬಿಜೆಪಿಯವರ ಹೋರಾಟಗಳು ನಿರಾಧಾರ: ಸಿಎಂ ಸಿದ್ದರಾಮಯ್ಯ

ಜೂನ್ 2023 ರಿಂದ, ಎಲ್‌ಪಿಜಿ ಸಿಲಿಂಡರ್‌ಗಳು, ಬೈಸಿಕಲ್‌ಗಳು ಕಬ್ಬಿಣದ ರಾಡ್‌ಗಳು ಮತ್ತು ಸಿಮೆಂಟ್ ಬ್ಲಾಕ್‌ಗಳು ಸೇರಿದಂತೆ ವಿವಿಧ ವಸ್ತುಗಳನ್ನು ಹಳಿಗಳ ಮೇಲೆ ಇರಿಸಿ ರೈಲುಗಳನ್ನು ಹಳಿ ತಪ್ಪಿಸುವ ಪ್ರಯತ್ನದಲ್ಲಿ 24 ಘಟನೆಗಳು ನಡೆದಿವೆ. ಇವುಗಳಲ್ಲಿ 15 ಘಟನೆಗಳು ಆಗಸ್ಟ್‌ನಲ್ಲಿ ಸಂಭವಿಸಿದ್ದು, ಸೆಪ್ಟೆಂಬರ್‌ನಲ್ಲಿ ಇನ್ನೂ ಐದು ಘಟನೆಗಳು ಸಂಭವಿಸಿವೆ. ಇದು ರೈಲ್ವೆ ಸುರಕ್ಷತೆಯ ಬಗ್ಗೆ ಕಾಳಜಿ ಹೆಚ್ಚುವಂತೆ ಮಾಡಿದೆ.