Friday, 22nd November 2024

Money Tips: ಆಧಾರ್‌ನಲ್ಲಿ ಆನ್‌ಲೈನ್‌ ಮೂಲಕ ಮೊಬೈಲ್ ನಂಬರ್‌ ಅಪ್‌ಡೇಟ್‌ ಮಾಡಬಹುದೆ? ಇಲ್ಲಿದೆ ಅನುಮಾನಕ್ಕೆ ಉತ್ತರ

Money Tips

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವ್ಯವಹಾರ ಡಿಜಿಟಲ್‌ ರೂಪಕ್ಕೆ ಬದಲಾಗಿದೆ. ನಗದು ಪಾವತಿಯಿಂದ ಹಿಡಿದು ಪುಸ್ತಕದವರೆಗೆ ಎಲ್ಲವೂ ಡಿಜಿಟಲ್‌ ರೂಪದಲ್ಲಿ ಲಭ್ಯ. ಹೀಗಾಗಿ ಬಹುತೇಕ ಎಲ್ಲ ವ್ಯವಹಾರಕ್ಕೆ ಆಧಾರ್‌ ಬೇಕೇ ಬೇಕು. ಬ್ಯಾಂಕ್‌ನಿಂದ ಹಿಡಿದು, ಸರ್ಕಾರಿ ಸೇವೆಗಳವರೆಗೆ ಆಧಾರ್‌ ನಂಬರ್‌ ಕಡ್ಡಾಯ ಎನಿಸಿಕೊಂಡಿದೆ. ಆಧಾರ್ ಕಾರ್ಡ್​ಗೆ ಮೊಬೈಲ್ ಲಿಂಕ್ ಮಾಡುವುದು ಕಡ್ಡಾಯವಲ್ಲ. ಆದರೆ ಮೊಬೈಲ್ ಸಂಖ್ಯೆ ಜೋಡಿಸಿದ್ದರೆ ಇದರಿಂದ ಬಹಳ ಉಪಯೋಗ ಕಂಡು ಬರುತ್ತದೆ. ಆನ್​ಲೈನ್​ನಲ್ಲಿ ಆಧಾರ್ ವೆರಿಫಿಕೇಶನ್​ಗೆ ಮೊಬೈಲ್ ನಂಬರ್ ಬೇಕಾಗುತ್ತದೆ. ಆಧಾರ್ ಕಾರ್ಡ್​ಗೆ ಲಿಂಕ್ ಮಾಡಲಾದ ಮೊಬೈಲ್ ನಂಬರ್ ಅನ್ನು ಸುಲಭವಾಗಿ ಬದಲಿಸಬಹುದು. ಆ ಕುರಿತಾದ ವಿವರ ಇಲ್ಲಿದೆ (Money Tips).

ಆಧಾರ್ ನೋಂದಣಿ ವೇಳೆ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನು ಒದಗಿಸುವುದು ಭಾರತೀಯರಿಗೆ ಕಡ್ಡಾಯವಲ್ಲ. ಅದಾಗ್ಯೂ ನಿಮ್ಮ ಆಧಾರ್ ಅರ್ಜಿಯ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಮತ್ತು ಒಟಿಪಿ ಆಧಾರಿತ ವಿವಿಧ ಸೇವೆಗಳನ್ನು ಹೊಂದಲು ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನು ಒದಗಿಸುವುದು ಉತ್ತಮ. ಆನಿವಾಸಿ ಭಾರತೀಯರು (NRI) ಮತ್ತು ಆನಿವಾಸಿ ವಿದೇಶಿ ಪ್ರಜೆಗಳಿಗೆ ಇಮೇಲ್ ಐಡಿ ಕಡ್ಡಾಯ ಎನಿಸಿಕೊಂಡಿದೆ.

ಆಧಾರ್‌ಗೆ ನಿಮ್ಮ ಮೊಬೈಲ್‌ ನಂಬರ್‌ ಯಾಕಾಗಿ ಲಿಂಕ್‌ ಮಾಡಬೇಕು?

ಸರ್ಕಾರಿ ಸೇವೆಗಳು, ಬ್ಯಾಂಕಿಂಗ್ ಅಥವಾ ಇ-ಕೆವೈಸಿ ಪ್ರಕ್ರಿಯೆ ನಡೆಸುವಾಗ ಆಧಾರ್ ಆಧಾರಿತ ದೃಢೀಕರಣಕ್ಕಾಗಿ ಒನ್-ಟೈಮ್ ಪಾಸ್‌ವರ್ಡ್‌ಗಳನ್ನು (OTP) ಕಳುಹಿಸಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಲಾಗುತ್ತದೆ. ಇದು ನಿಮ್ಮ ವಹಿವಾಟುಗಳಿಗೆ ಭದ್ರತೆಯನ್ನು ಒದಗಿಸುತ್ತದೆ. ಪ್ಯಾನ್ ಕಾರ್ಡ್ ಲಿಂಕ್, ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ ಅಥವಾ ಬ್ಯಾಂಕ್ ಖಾತೆಗಳನ್ನು ತೆರೆಯುವಂತಹ ಅನೇಕ ಆನ್‌ಲೈನ್‌ ಸೇವೆಗಳ ಪರಿಶೀಲನೆಗಾಗಿ ನಿಮ್ಮ ಆಧಾರ್ ನಂಬರ್‌ ಅಗತ್ಯವಿರುತ್ತದೆ ಮತ್ತು ಪ್ರಮುಖ ಸಂದೇಶಗಳು ನಿಮ್ಮ ಮೊಬೈಲ್‌ ನಂಬರ್‌ಗೆ ಕಳುಹಿಸಲಾಗುತ್ತದೆ.

ಹೀಗೆ ನಂಬರ್‌ ಅಪ್‌ಡೇಟ್‌ ಮಾಡಿ

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್​ನ ಮೊಬೈಲ್ ನಂಬರ್ ಬದಲಿಸುವ/ಅಪ್‌ಡೇಟ್‌ ಮಾಡುವ ಅವಕಾಶವನ್ನು ಈಗ ನಿಲ್ಲಿಸಲಾಗಿದೆ. ಇದಕ್ಕಾಗಿ ನೀವು ಆಧಾರ್ ಎನ್ರೋಲ್‌ಮೆಂಟ್‌ಗೆ ಹೋಗಿ ಸಂಬಂಧಿಸಿದ ಫಾರ್ಮ್ ಪಡೆದು ಭರ್ತಿ ಮಾಡಿಕೊಡಬೇಕು. ಇಲ್ಲಿ ನಿಮ್ಮ ಬಯೋಮೆಟ್ರಿಕ್ ಮೂಲಕ ಆಧಾರ್​ಗೆ ಲಾಗಿನ್ ಮಾಡಲಾಗುತ್ತದೆ. ಈಗ ನಿಮ್ಮ ಹೊಸ ಮೊಬೈಲ್ ನಂಬರ್ ಅನ್ನು ಇದಕ್ಕೆ ಸೇರಿಸಬಹುದು. 30 ದಿನದೊಳಗೆ ಆಧಾರ್ ಡಾಟಾಬೇಸ್​ನಲ್ಲಿ ಮೊಬೈಲ್ ನಂಬರ್ ಅಪ್​ಡೇಟ್ ಆಗಿರುತ್ತದೆ. ಈ ಸೇವೆಗೆ 50 ರೂ. ಶುಲ್ಕ ನಿಗದಿಯಾಗಿದೆ. ನವೀಕರಣಕ್ಕಾಗಿ ಯಾವುದೇ ಪೂರಕ ದಾಖಲೆಗಳು ಅಥವಾ ಹಳೆಯ ಮೊಬೈಲ್ ಸಂಖ್ಯೆಯ ಅಗತ್ಯವಿಲ್ಲ.

ಪಿಎಫ್‌ ಅಕೌಂಟ್‌ಗೆ ಹೊಸ ಮೊಬೈಲ್‌ ನಂಬರ್‌ ಸೇರಿಸುವ ವಿಧಾನ

  • ಮೊದಲು https://unifiedportal-mem.epfindia.gov.in/memberinterface/ ವೆಬ್‌ಸೈಟ್‌ಗೆ ತೆರಳಿ.
  • ಅಥವಾ ಇಲ್ಲಿ ಕ್ಲಿಕ್‌ ಮಾಡಿ.
  • UAN ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಲಾಗಿನ್ ಆಗಿ.
  • ‘Manage’ ಆಯ್ಕೆಯಲ್ಲಿನ ‘Contact Details’ ಆಪ್ಶನ್‌ ಕ್ಲಿಕ್‌ ಮಾಡಿ.
  • ‘Change Mobile No.’ ಆಯ್ಕೆ ಸೆಲೆಕ್ಟ್‌ ಮಾಡಿ.
  • ಎರಡು ಬಾರಿ ಹೊಸ ಮೊಬೈಲ್‌ ನಂಬರ್‌ ನಮೂದಿಸಿ. ಬಳಿಕ ‘Get Mobile OTP’ ಬಟನ್‌ ಕ್ಲಿಕ್‌ ಮಾಡಿ.
  • ಹೊಸ ಮೊಬೈಲ್‌ ನಂಬರ್‌ಗೆ ಬಂದಿರುವ ಒಟಿಪಿಯನ್ನು ನಮೂದಿಸಿ.
  • ಬಳಿಕ ನಿಮ್ಮ ಮೊಬೈಲ್‌ ನಂಬರ್‌ ಅಪ್‌ಡೇಟ್‌ ಆಗುತ್ತದೆ.

ಈ ಸುದ್ದಿಯನ್ನೂ ಓದಿ: Money Tips: Health Insurance ಮಾಡಿಸುವ ತಿಳಿದಿರಲೇ ಬೇಕಾದ ಅಂಶಗಳಿವು