ನವದೆಹಲಿ: ಇನ್ಫೋಸಿಸ್ ಸಹಸಂಸ್ಥಾಪಕ, ಮಾಜಿ ಕೋ ಛೇರ್ಮನ್ ಸೇನಾಪತಿ ಗೋಪಾಲಕೃಷ್ಣನ್ ಅವರನ್ನು ರಿಸರ್ವ್ ಬ್ಯಾಂಕ್ ಇನೊವೇಷನ್ ಹಬ್ ನ ಮೊದಲ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಆರ್ಥಿಕ ವಲಯದಲ್ಲಿ ಆವಿಷ್ಕಾರ ಪ್ರಚುರ ಪಡಿಸುವ ಸಲುವಾಗಿ ರಿಸರ್ವ್ ಬ್ಯಾಂಕ್ ಇನೊವೇಷನ್ ಹಬ್ ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರವು ಕಳೆದ ಆಗಸ್ಟ್ ನಲ್ಲಿ ಘೋಷಣೆ ಮಾಡಿತ್ತು.
ಸೇನಾಪತಿ (ಕ್ರಿಸ್) ಗೋಪಾಲಕೃಷ್ಣನ್ ಅವರನ್ನು RBIH ಮೊದಲ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಆರ್ ಬಿಐ ಹೇಳಿಕೆಯಲ್ಲಿ ಮಂಗಳವಾರ ತಿಳಿಸಲಾಗಿದೆ.
ಸಮಿತಿಯ ಇತರ ಸದಸ್ಯರಾಗಿ ಅಶೋಕ್ ಜುಂಜುನ್ ವಾಲಾ, ಎಚ್. ಕೃಷ್ಣಮೂರ್ತಿ, ಗೋಪಾಲ್ ಶ್ರೀನಿವಾಸನ್, ಎ.ಪಿ. ಹೋತಾ, ಮೃತ್ಯುಂಜಯ್ ಮಹಾಪಾತ್ರ, ಟಿ. ರಬಿ ಶಂಕರ್, ದೀಪಕ್ ಕುಮಾರ್, ಕೆ. ನಿಖಿಲ. RBIHನಿಂದ ಹಣಕಾಸು ಒಳಗೊಳ್ಳುವಿಕೆ ಕೂಡ ಉತ್ತೇಜನ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಆರ್ಥಿಕ ವಲಯದ ಸಂಸ್ಥೆಗಳು, ತಂತ್ರಜ್ಞಾನ ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳ ಜತೆಗೆ ಹಬ್ ಸಹಯೋಗ ವಹಿಸಲಿದೆ.