Thursday, 12th December 2024

Chikkaballapur News: ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯ ಬಹಳ ಮುಖ್ಯ: ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ  

ಚಿಕ್ಕಬಳ್ಳಾಪುರ : ಎಲ್ಲರಿಗೂ ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯ ಬಹಳ ಮುಖ್ಯ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ನೇರಳೆ ವೀರಭದ್ರಯ್ಯ ಭವಾನಿ  ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾರ್ಮಿಕ ಇಲಾಖೆ, ಷೆಲ್ ಅಪರೆಲ್ಸ್ ಪ್ರೈ. ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಒಬ್ಬ  ವ್ಯಕ್ತಿಯ ಮಾನಸಿಕ ಆರೋಗ್ಯವು ಆರೋಗ್ಯಕರ ಸಮಾಜ ಮತ್ತು ರಾಷ್ಟçವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಉತ್ತಮ ಮತ್ತು ಸಮತೋಲಿತ ಜೀವನವನ್ನು ಸಾಧಿಸಲು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೊಂದಿರುವುದು ಕಡ್ಡಾಯವಾಗಿದೆ.

ವಿವಿಧ ಜಾಗೃತಿ ಅಭಿಯಾನಗಳನ್ನು ಆಯೋಜಿಸುವ ಮೂಲಕ ಮಾನಸಿಕ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ಪರಸ್ಪರ ಬೆಂಬಲಿಸಲು ಜನರನ್ನು ಒಟ್ಟುಗೂಡಿಸುವಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಮತ್ತು ಇತರರು ಭಾಗವಹಿಸಲು ಮತ್ತು ಅವರ ಸುತ್ತಮುತ್ತಲಿನ ಮಾನಸಿಕ ಆರೋಗ್ಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಅವಕಾಶವನ್ನು ಬಳಸಿಕೊಳ್ಳುವಂತೆ ಒತ್ತಾಯಿಸುತ್ತದೆ

ಯಾವುದೇ ಕೆಲಸವನ್ನು ಮಾಡುತ್ತಿದ್ದರೆ ಇದು ನನ್ನ ಕೆಲಸ  ಎಂದು ಮಾಡಿದರೆ ಮಾನಸಿಕ ಒತ್ತಡ ಎಂಬುವುದು ಎಲ್ಲರಿಗು ಇರುತ್ತದೆ  ಅದನ್ನು ಯಾವ ರೀತಿ ನಿವಾರಿಸಿಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯ. ನಮ್ಮ ಜೀವನವನ್ನು ಯಾವ ರೀತಿ ಮಾಡಬೇಕು ಅಂದರೆ ಕೆಲಸವನ್ನು ಪ್ರೀತಿಸಬೇಕು

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್ ಮಾತನಾಡಿ ಆರೋಗ್ಯ ಎಂಬುದು ಪ್ರತಿಯೊಬ್ಬರಿಗು ಬಹಳ ಮುಖ್ಯ. ಪ್ರತಿ ವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಇದು 1992 ರಲ್ಲಿ ವಿಶ್ವ ಮಾನಸಿಕ ಆರೋಗ್ಯ ಸಂಸ್ಥೆಯಿಂದ ಸೇರಿ ೧೨ ದೇಶಗಳು ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಡೆಪ್ಯುಟಿ ಸೆಕ್ರೆಟರಿ  ರಾಬರ್ಟ್ ಹಂಟರ್ ಎಂಬುವರು ಜಾರಿಗೊಳಿಸಿದರು. ಇದರ ಪ್ರಮುಖ ಉದ್ದೇಶ ಜನರಲ್ಲಿ ಮಾನಸಿಕ ಜಾಗೃತಿಯನ್ನು ಮೂಡಿಸುವುದು. ವಿವಿಧ ದೇಶಗಳಲ್ಲಿ ಇದರ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ.

150 ಕ್ಕಿಂತ ಹೆಚ್ಚು ದೇಶಗಳು ಕಾರ್ಯಕ್ರಮದಲ್ಲಿ ಕೈ ಜೋಡಿಸಿ ಪ್ರತಿಯೊದು ದೇಶ, ಜಿಲ್ಲೆಯಲ್ಲಿ ಈ ಕಾರ್ಯ ಕ್ರಮವನ್ನು ಜಾರಿಗೆ ಗೊಳಿಸಿ ಕಾರ್ಯಕ್ರಮವನ್ನು ಮಾಡಲಾಗುತ್ತಿದ್ದೇವೆ. ಪ್ರತಿ ವರ್ಷವು ಒಂದು ಘೋಷ ವಾಕ್ಯವನ್ನು ತಿಳಿಸಿ ಆ ಘೋಷ ವಾಕ್ಯದ ಮಖಾಂತರ ಜನರಲ್ಲಿ ಜಾಗೃತಿ ಮೂಡಿಸುವುದು. ಈ ವರ್ಷದ  ಘೋಷ ವಾಕ್ಯ “ಕಾರ್ಯಕ್ಷೇತ್ರದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯವಿದು” ಎಂಬ ಘೋಷ ವಾಕ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಎಷ್ಟೇ ಒತ್ತಡವಿದ್ದರು ಕುಟುಂಬಕ್ಕೆ, ಕೆಲಸದಲ್ಲಿ, ಸಾಮಾಜಿಕ ಒತ್ತಡ ಎಲ್ಲಾ ಒತ್ತಡವನ್ನು ಬಗೆಹರಿಸಿ  ನಾವು  ಉತ್ತಮವಂತ ಜೀವನ ಮಾಡಬೇಕಾದರೆ ಮನೆಗಿಂತ ಹೆಚ್ಚಿನ ಅವಧಿಯಲ್ಲಿ ಕಾರ್ಯಚರಣೆಗಳಲ್ಲಿ ಮಾಡುತ್ತೇವೆ. ಪ್ರತಿಯೊಂದು ಇಲಾಖೆಯಿಂದ ಕೆಲಸದಲ್ಲಾದ ಒತ್ತಡವನ್ನು ಗೊಂದಲದಲ್ಲಿ ಜೀವನವನ್ನು ಅಳವಡಿಸಿಕೊಂಡು ಎಲ್ಲರೂ ಆರೋಗ್ಯದಿಂದ ಬಾಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶರು  ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಬಿ.ಶಿಲ್ಪ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಶಿವಕುಮಾರ್,  ಡಿ.ಎಂ.ಹೆಚ್.ಪಿ ಮನೋವೈದ್ಯರಾದ ಡಾ.ಜಿ. ಹೇಮಂತ್ ಕುಮಾರ್, ಟಿ.ಎಂ.ಹೆಚ್.ಪಿ ಮನೋವೈದ್ಯರಾದ ಡಾ.ಎ ಲಾವಣ್ಯ ಗೌರಿಬಿದನೂರು,   ಜಿಲ್ಲಾ ಕಾರ್ಮಿಕ ಅಧಿಕಾರಿ ಶಬಾನಾ ಅಜ್ಮಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಮುರಳಿ ಮೋಹನ್, ಷೆಲ್ ಅಪೆರಲ್ಸ್ ಪ್ರೆöÊ.ಲಿ ನ ಮಾನವ ಸಂಪನ್ಮೂಲ ಆಡಳಿತ ವ್ಯವಸ್ಥಾಪಕ ಬಿ.ಆರ್. ಅನಂತ್, ಲೇಬರ್ ಇಲಾಖೆಯ ಮಂಜುಳ, ಮುನಿರಾಜು, ಕಾರ್ಮಿಕರು ಹಾಗೂ ಉಪಸ್ಥಿತರಿದ್ದರು.

ಇದನ್ನೂ ಓದಿ: Chikkaballapur News: ಕನಿಷ್ಠ ಆಸೆ ಬಿಟ್ಟು ಪರಮಪದವನ್ನು ಪಡೆಯಿರಿ: ಸದ್ಗುರು ಶ್ರೀ ಮಧುಸೂದನ ಸಾಯಿ