ಮುಂಬರುವ ಪಾಕಿಸ್ತಾನ ವಿರುದ್ದ ಏಕದಿನ ಸರಣಿ(ODI Series) ಗೆ ಆಸ್ಟ್ರೇಲಿಯಾ ತಂಡ(Cricket Australia) ವನ್ನು ಪ್ರಕಟಿಸಲಾಗಿದೆ. ಈ ಏಕದಿನ ಸರಣಿಗಾಗಿ ಅನುಭವಿ ವೇಗಿ ಪ್ಯಾಟ್ ಕಮ್ಮಿನ್ಸ್ (Pat Cummins) ತಂಡಕ್ಕೆ ಮರಳಿದ್ದು, ನಾಯಕತ್ವ ವಹಿಸಲಿದ್ದಾರೆ.
ಆಸೀಸ್ ತಂಡದ ಆರಂಭಿಕರಾದ ಮಿಚೆಲ್ ಮಾರ್ಷ್ (Mitchell Marsh) ಹಾಗೂ ಟ್ರಾವಿಸ್ ಹೆಡ್ (Travis Head) ಪಿತೃತ್ವ ರಜೆಯಲ್ಲಿದ್ದು, ಈ ಸರಣಿ ಯಲ್ಲಿ ಆಡುತ್ತಿಲ್ಲ. ಬದಲಿಗೆ ಯುವ ಆರಂಭಿಕರಾದ ಜೇಕ್ ಫ್ರೇಸರ್ (Jake Fraser-McGurk) ಹಾಗೂ ಮ್ಯಾಟ್ ಶಾರ್ಟ್(Matt Short) ಆರಂಭಿಕ ಜೋಡಿ(Opening pair) ಗಳಾಗಿದ್ದಾರೆ. ಈ ಸರಣಿಗೆ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ (Cameron Green) ಕೂಡ ಅಲಭ್ಯರಾಗಿದ್ದಾರೆ. ಬೆನ್ನುಮೂಳೆಯ ಚಿಕಿತ್ಸೆ ಗಾಗಿ ಮುಂದಿನ ಆರು ತಿಂಗಳು ತಂಡದ ಸೇವೆಗೆ ಲಭ್ಯವಿರುವುದಿಲ್ಲ.
Big Three assemble! 👊
— cricket.com.au (@cricketcomau) October 14, 2024
Australia have named their squad to face Pakistan: https://t.co/mMH8t29hSR pic.twitter.com/bZqLZmio6t
ಕಳೆದ ಇಂಗ್ಲೆಂಡ್ ಹಾಗೂ ಸ್ಕಾಟ್ಲೆಂಡ್ ವಿರುದ್ದ ಸರಣಿಯಿಂದ ಕಮ್ಮಿನ್ಸ್ ದೂರ ಉಳಿದಿದ್ದರು. 2023 ರ ವಿಶ್ವಕಪ್ (World Cup 2023) ಗೆದ್ದ ಬಳಿಕ ಮೊದಲ ಬಾರಿಗೆ ಏಕದಿನ ಸರಣಿಗೆ ಮರಳಿದ್ದಾರೆ.
ತಂಡದ ಆಯ್ಕೆ ಕುರಿತಂತೆ, ಮುಖ್ಯ ಆಯ್ಕೆಗಾರ ಜಾರ್ಜ್ ಬೈಲಿ(chief selector George Bailey) , ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ ಟ್ರೋಫಿ(Champion Trophy) ಗೂ ಮುನ್ನ ಇದು ನಮ್ಮ ಕೊನೆಯ ಏಕದಿನ ಸರಣಿಯಾಗಿದೆ. ಹೀಗಾಗಿ ಏಕದಿನ ತಂಡದಲ್ಲಿ ಸಮತೋಲನ ತರಬೇಕಿದೆ. ಹಾಗೆಯೇ ಮುಂಬರುವ ಟೆಸ್ಟ್ ಸರಣಿಯತ್ತಲೂ ಗಮನ ಇಡಲಾಗಿದೆ ಎಂದು ಹೇಳಿದರು. ಸದ್ಯ ಏಕದಿನ ತಂಡದ ನಿರ್ವಹಣೆ ಉತ್ತಮವಾಗಿದೆ. ಇದೇ ನಿರ್ವಹಣೆಯನ್ನು ಪಾಕಿಸ್ತಾನದಲ್ಲಿ ಮುಂದುವರಿಸಲು ಸಿದ್ದರಿದ್ದೇವೆ ಎಂದು ಹೇಳಿದರು.
ಮುಂದಿನ ತಿಂಗಳು ಪಾಕಿಸ್ತಾನ ವಿರುದ್ದ ಆಸೀಸ್ ತಂಡ ಮೂರು ಏಕದಿನ ಸರಣಿಯನ್ನು ಮೇಲ್ಬರ್ನ್, ಆಡಿಲೇಡ್ ಹಾಗೂ ಪರ್ತ್ ನಲ್ಲಿ ಆಡಲಿದೆ. ಬಳಿಕ ಮೂರು ಟಿ20 ಸರಣಿ (T20 Series) ಕೂಡ ನಡೆಯಲಿದೆ. ಈ ಕುರಿತ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.
ಆಸೀಸ್ ಏಕದಿನ ತಂಡ ಇಂತಿದೆ.
ಪ್ಯಾಟ್ ಕಮ್ಮಿನ್ಸ್(ನಾಯಕ). ಸೀನ್ ಅಬ್ಬೊಟ್ ಕೂಪರ್ ಕನೋಲಿ, ಜೇಕ್ ಫ್ರೇಸರ್ ಮ್ಯಾಕ್ ಗರ್ಕ್, ಆರನ್ ಹಾರ್ಡಿ, ಜೋಸ್ ಹ್ಯಾಜಲ್ವುಡ್, ಜೋಶ್ ಇಂಗ್ಲಿಸ್ ಮಾರ್ನಸ್ ಲ್ಯಾಬುಶ್ಗನ್ನೆ, ಗ್ಲೆನ್ ಮ್ಯಾಕ್ಸ್ವೆಲ್, ಮ್ಯಾಥ್ಯೂ ಶಾರ್ಟ್, ಸ್ಟೀವ್ ಸ್ಮಿತ್ ಮಿಚೆಲಗ ಸ್ಟಾರ್ಕ್, ಮಾರ್ನಸ್ ಸ್ಟೋಯಿನಿಸ್, ಆಡಮ್ ಜಂಪಾ.
ಇದನ್ನೂ ಓದಿ: ENG vs PAK: ತವರಿನಲ್ಲಿ ಪಾಕ್ಗೆ ಮತ್ತೆ ಸೋಲಿನ ಮುಖಭಂಗ