Thursday, 12th December 2024

Q-rite: USV ಹೃದಯ ರೋಗಿಗಳಲ್ಲಿ ಅಪರೂಪದ ಆರ್ಹೆಥ್ಮಿಯಾವನ್ನು ಗುಣಪಡಿಸಲು ಕ್ವಿನಿಡಿನ್ ಸಲ್ಫೇಟ್ (Q-rite) ಮಾತ್ರೆಗಳ ಬಿಡುಗಡೆ

ಅಪರೂಪದ ಅನಿಯಮಿತ ಹೃದಯ ಬಡಿತದ ಪರಿಸ್ಥಿತಿಗಳನ್ನು ನಿರ್ವಹಿಸುವಲ್ಲಿ ಕ್ವಿನಿಡಿನ್ ಸಲ್ಫೇಟ್ ಸಹಾಯ ಮಾಡುತ್ತದೆ

ಭಾರತ, ಅಪರೂಪದ ಅನಿಯಮಿತ ಹೃದಯ ಬಡಿತದ ಪರಿಸ್ಥಿತಿಯನ್ನು ಹೊಂದಿರುವ ರೋಗಿಗಳಿಗಾಗಿ 200 ಮಿಲಿಗ್ರಾಂ (mg) ಕ್ವಿನಿಡಿನ್ ಸಲ್ಫೇಟ್ ಹೊಂದಿರುವ Q rite ಮಾತ್ರೆಗಳನ್ನು USV ಪ್ರೈವೇಟ್ ಲಿಮಿಟೆಡ್ ಇತ್ತೀಚೆಗೆ ಬಿಡುಗಡೆ ಮಾಡಿದೆ. ಭಾರತದಲ್ಲಿ ಹೆಚ್ಚಿನ-ಅಗತ್ಯತೆಯಿರುವ ಕ್ವಿನಿಡಿನ್ ಸಲ್ಫೇಟ್ ಮಾತ್ರೆಗಳು ಖರೀದಿಗೆ ಲಭ್ಯವಿದೆ ಎನ್ನುವುದನ್ನು ಈ ಬಿಡುಗಡೆಯು ಸೂಚಿಸುತ್ತದೆ. ವಿಶ್ವಾಸಾರ್ಹ ಆರೋಗ್ಯ ಪಾಲುದಾರರಾಗಿ ಗುಣಮಟ್ಟದ ರೋಗಿಗಳ ಆರೈಕೆಯನ್ನು ಮುಂದುವರಿಸುವಲ್ಲಿನ USV ಯ ಬದ್ಧತೆಯನ್ನು ಈ ಮಹತ್ವದ ಮೈಲಿಗಲ್ಲು ಒತ್ತಿ ಹೇಳುತ್ತದೆ.

ಜಾಗತಿಕವಾಗಿ ಹೃದಯರಕ್ತನಾಳದ ಕಾಯಿಲೆಗಳ (CVD) ಅತೀವ ಹೆಚ್ಚಿನ ಹೊರೆಗಳನ್ನು ಎದುರಿಸುತ್ತಿರುವ ದೇಶ ಗಳಲ್ಲಿ ಭಾರತವೂ ಒಂದು. ಸರಿಸುಮಾರು 40% ರಷ್ಟು ಹೃದಯ ರೋಗಿಗಳಲ್ಲಿ ಹೃದಯದ-ಬಡಿತದ ಲಯದಲ್ಲಿನ ತೊಂದರೆಗಳ ಲಕ್ಷಣಗಳು ಕಂಡುಬರುತ್ತಿದ್ದು, ಅದರಲ್ಲಿನ 22% ರಷ್ಟು ಜನರಲ್ಲಿ ಆರ್ಹೆತ್ಮಿಯಾದಿಂದ ಹಠಾತ್ ಹೃದಯ ಸ್ತಂಭನದ ಅಪಾಯವು ಇರುತ್ತದೆ. ಆತಂಕಕಾರಿಯೆನ್ನುವಂತೆ, ಈ ರೋಗಿಗಳಲ್ಲಿ ಹೆಚ್ಚಿನವರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಈ ನಿರ್ಲಕ್ಷ್ಯ ಮಾಡುತ್ತಿರುವ ಈ ಜನರನ್ನು ಗಮನದಲ್ಲಿಟ್ಟುಕೊಂಡು, ರೋಗಿಗಳ ಫಲಿತಾಂಶಗಳನ್ನು ಸುಧಾರಿಸಲು USV ಭಾರತದಲ್ಲಿ Q rite ಮಾತ್ರೆಗಳನ್ನು ವಾಣಿಜ್ಯಿಕವಾಗಿ ಬಿಡುಗಡೆ ಮಾಡುವತ್ತ ಹೆಜ್ಜೆ ಹಾಕಿದೆ.

USV ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ಪ್ರಶಾಂತ್ ತಿವಾರಿ ಹೇಳುತ್ತಾರೆ, “ನಾವು ರೋಗಿಗಳ, ಅದರಲ್ಲೂ ವಿಶೇಷವಾಗಿ, ಹೃದಯ ಸಂಬಂಧಿ ತೊಂದರೆಗಳಿರುವ ಮತ್ತು ಅದನ್ನು ನಿರ್ವಹಿಸಲು ಆಯ್ಕೆಗಳಿಲ್ಲದ ವ್ಯಕ್ತಿಗಳ ಅಗತ್ಯತೆಗಳ ಕುರಿತು ಸಹಾನುಭೂತಿ ಹೊಂದಿದ್ದೇವೆ, ಮತ್ತು ಭಾರತದಲ್ಲಿ Q rite ಟ್ಯಾಬ್ಲೆಟ್‌ಗಳ ಪ್ರವೇಶವನ್ನು ಹೆಚ್ಚಿಸುವ ನಮ್ಮ ದೃಷ್ಟಿಯನ್ನು ಈ ಬಿಡುಗಡೆಯು ಒತ್ತಿಹೇಳುತ್ತದೆ. ಸ್ಥಾಪಿತ ಔಷಧಿಗಳೆಡೆಗಿನ ನಮ್ಮ ಬದ್ಧತೆಯು ರೋಗಿಯ ಫಲಿತಾಂಶಗಳನ್ನು ಗಣನೀಯವಾಗಿ ಸುಧಾರಿಸುವ ಉದ್ದೇಶಿತ ಪರಿಹಾರಗಳನ್ನು ನೀಡುತ್ತದೆ ಎಂದು ನಾವು ನಂಬುತ್ತೇವೆ. ”

ಬಿಡುಗಡೆಯ ಪ್ರಾಮುಖ್ಯತೆಯನ್ನು ವಿವರಿಸುತ್ತಾ, ಇಂಡಿಯನ್ ಸೊಸೈಟಿ ಆಫ್ ಎಲೆಕ್ಟ್ರೋಕಾರ್ಡಿಯಾಲಜಿಯ (ISE) ಅಧ್ಯಕ್ಷರಾದ ಡಾ. ಆದಿತ್ಯ ಕಪೂರ್ ಮತ್ತು ಗೌರವ ಪ್ರಧಾನ ಕಾರ್ಯದರ್ಶಿ (ISE) ಡಾ. ಕೇತನ್ ಮೆಹ್ತಾ ತಮ್ಮ ಜಂಟಿ ಹೇಳಿಕೆಯಲ್ಲಿ ಹೀಗೆ ಉಲ್ಲೇಖಿಸಿದರು, “ಕ್ವಿನಿಡಿನ್ ಹಳೆಯ ಆದರೆ ಬಹುಮುಖ ವಿವಿಧೋಪಯೋಗಿ ಆಂಟಿ-ಅರ್ಹೆಥ್ಮಿಕ್ ಔಷಧವಾಗಿದ್ದು, ಭಾರತದಲ್ಲಿ ಅದರ ಲಭ್ಯತೆಯು ರೋಗಿಗಳ ಒಂದು ಸಣ್ಣ ಗುಂಪಿನ ಅಗತ್ಯವನ್ನು ಸಮರ್ಪಕವಾಗಿ ಪರಿಹರಿಸುತ್ತದೆ.

ಪ್ರಸ್ತುತ, Q rite ಮಾತ್ರೆಗಳು ಆಯ್ದ ಆಸ್ಪತ್ರೆಗಳಲ್ಲಿನ ಔಷಧಾಲಯಗಳಲ್ಲಿ ಮತ್ತು ಆನ್‌ಲೈನ್ ಔಷಧೀಯ ಚಿಲ್ಲರೆ ಮರಾಟಗಾರರಾದ ಟಾಟಾ 1mg ಗಳಲ್ಲಿ ಲಭ್ಯವಿದೆ.