Wednesday, 23rd October 2024

Breast Cancer: ಸ್ತನ ಕ್ಯಾನ್ಸರ್‌ ಲಕ್ಷಣಗಳೇನು? ಇದರಿಂದ ಪಾರಾಗುವುದು ಹೇಗೆ?

Breast Cancer

ಸ್ತನ ಕ್ಯಾನ್ಸರ್‌ಗೆ ವಿಶ್ವದಾದ್ಯಂತ  ಸಾವಿರಾರು ಮಂದಿ ಬಲಿಯಾಗುತ್ತಿದ್ದಾರೆ. ಆದರೆ ಇದು ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುವುದರಿಂದ ಅನೇಕ ಜನರು ಇದು ಬರೀ ಮಹಿಳೆಯರಿಗೆ ಬರುವಂತಹ ಕಾಯಿಲೆ ಎಂದಕೊಂಡಿರುತ್ತಾರೆ. ಆದರೆ ಅದು ಸುಳ್ಳು. ಮಹಿಳೆಯರು ಮಾತ್ರವಲ್ಲ ಪುರುಷರಲ್ಲಿಯೂ ಕೂಡ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಆದರೆ ಯಾವುದೇ ಕ್ಯಾನ್ಸರ್ ಆದರೂ ಅದನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡಿ ಅದಕ್ಕೆ ಸರಿಯಾದ ಚಿಕಿತ್ಸೆ ಪಡೆದರೆ ಅವರು ಸಾಮಾನ್ಯ ಜನರಂತೆ ಜೀವನ ನಡೆಸಬಹುದು. ಮಹಿಳೆಯರಲ್ಲಿ ಕಾಣಿಸುವ ಸ್ತನ ಕ್ಯಾನ್ಸರ್‌ನ ಲಕ್ಷಣಗಳು, ಕಾರಣಗಳು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿದುಕೊಳ್ಳಿ.

ಸ್ತನ ಕ್ಯಾನ್ಸರ್‌ನ ಲಕ್ಷಣಗಳು ಏನೇನು?

ಗಡ್ಡೆ ಅಥವಾ ಊತ: ಸ್ತನ ಅಥವಾ ಎದೆಯ ಭಾಗದಲ್ಲಿ ನೋವುರಹಿತ ಗಡ್ಡೆ ಅಥವಾ ಊತ ಕಾಣಿಸಿಕೊಳ್ಳುತ್ತದೆ.

ಸ್ತನದ ಆಕಾರ ಅಥವಾ ಗಾತ್ರದಲ್ಲಿ ಬದಲಾವಣೆಗಳು: ಇದರಿಂದ ಸ್ತನದ ಒಂದು ಬದಿಯಲ್ಲಿ ಊತ ಕಂಡುಬರುತ್ತದೆ. ಇದರಿಂದ ಸ್ತನದ ಗಾತ್ರ ದೊಡ್ಡದಾಗುತ್ತದೆ.

ಸ್ತನದ ತೊಟ್ಟಿನ ಅಸಹಜತೆಗಳು: ಸ್ತನದ ತೊಟ್ಟು ಕೆಂಪಾಗುವಿಕೆ, ಸ್ತನದ ತೊಟ್ಟು ಒಳಕ್ಕೆ ತಿರುಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಸ್ತನದ ತೊಟ್ಟಿನಿಂದ ವಿಸರ್ಜನೆ: ಸ್ತನದಿಂದ ಯಾವುದೇ ರೀತಿಯ ದ್ರವ ವಿಸರ್ಜನೆಯಾದರೆ ಮತ್ತು ಅದು ರಕ್ತವನ್ನು ಹೊಂದಿದ್ದರೆ, ವೈದ್ಯರಿಂದ ಪರೀಕ್ಷಿಸಿಕೊಳ್ಳುವುದು ಉತ್ತಮ.

ಚರ್ಮದ ಬದಲಾವಣೆಗಳು: ಸ್ತನದ ಭಾಗದ ಚರ್ಮವು ಮಸುಕಾಗುವುದು, ಕುಗ್ಗುವುದು ಅಥವಾ ಕೆಂಪಾಗುತ್ತದೆ.

Breast Cancer

ಸ್ತನ ಕ್ಯಾನ್ಸರ್‌ಗೆ ಕಾರಣಗಳು

ವಯಸ್ಸು: ವಯಸ್ಸಾದಂತೆ ಇದರ ಅಪಾಯವು ಹೆಚ್ಚಾಗುತ್ತದೆ.

ಕುಟುಂಬ ಇತಿಹಾಸ: ಕುಟುಂಬದಲ್ಲಿ ಯಾರಿಗಾದರೂ ಸ್ತನ ಕ್ಯಾನ್ಸರ್ ಇದ್ದರೆ ಅಂತವರು ಈ ಕಾಯಿಲೆಯ ಬಗ್ಗೆ  ತುಂಬಾ ಜಾಗೃತೆಯಿಂದ ಇರಬೇಕು.  

ಹಾರ್ಮೋನುಗಳ ಅಸಮತೋಲನ: ಯಕೃತ್ತಿನ ಕಾಯಿಲೆ ಅಥವಾ ಬೊಜ್ಜಿ ಸಮಸ್ಯೆಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.

ವಿಕಿರಣಕ್ಕೆ ಒಡ್ಡಿಕೊಳ್ಳುವುದು: ಇತರ ದೇಹದ ಭಾಗಗಳಿಗಿಂತ  ಎದೆಯ ಭಾಗವು ವಿಕಿರಣಕ್ಕೆ ಮೊದಲು ಒಡ್ಡಿಕೊಳ್ಳುವುದರಿಂದ  ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಹೆಚ್ಚಾಗಿರುತ್ತದೆ.

ಸ್ತನ ಕ್ಯಾನ್ಸರ್ ಬರದಂತೆ  ತಡೆಯಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ:

ಸ್ತನ ಅಂಗಾಂಶ ಅಥವಾ ಎದೆಯ ಪ್ರದೇಶದಲ್ಲಿ ಯಾವುದೇ ಸಮಸ್ಯೆ ಇರುವುದನ್ನು ಕಂಡುಹಿಡಿಯಲು ನಿಯಮಿತವಾಗಿ ಸ್ವತಃ ತಾವೇ ತಮ್ಮ ಸ್ತನದ ಭಾಗವನ್ನು ಪರೀಕ್ಷಿಸುತ್ತಿರಬೇಕು.

ನಿಮ್ಮ ಕುಟುಂಬದವರಲ್ಲಿ ಯಾರಿಗಾದರೂ ಕ್ಯಾನ್ಸರ್ ಇರುವುದು ನಿಮಗೆ ತಿಳಿದಿದ್ದರೆ  ವೈದ್ಯರೊಂದಿಗೆ ಚರ್ಚಿಸಿ ಅಗತ್ಯವಿದ್ದರೆ ಆಗಾಗ  ತಪಾಸಣೆ ಮಾಡಿಸಿಕೊಳ್ಳುತ್ತೀರಿ.

ಅತಿಯಾದ ಮದ್ಯಪಾನವು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಅವುಗಳನ್ನು ಸೇವಿಸುವುದನ್ನು ಬಿಟ್ಟುಬಿಡಿ.

ಪುರುಷರಲ್ಲಿ ಕಡಿಮೆ ಟೆಸ್ಟೋಸ್ಟೆರಾನ್ ಹೊಂದಿರುವ ಪುರುಷರು ಹಾರ್ಮೋನ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಏಕೆಂದರೆ ಇದು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ:ಗರ್ಭಪಾತಕ್ಕೆ ಏನು‌ ಕಾರಣ? ಇದನ್ನು ತಡೆಯುವುದು ಹೇಗೆ?

ಸ್ತನ ಕ್ಯಾನ್ಸರ್ ಅನ್ನು ಆರಂಭದಲ್ಲಿ ಪತ್ತೆ ಮಾಡಿದರೆ ಅದಕ್ಕೆ ಸರಿಯಾದ ಚಿಕಿತ್ಸೆ ಪಡೆಯುವ ಮೂಲಕ ಅದನ್ನು ನಿಯಂತ್ರಿಸಬಹುದು. ಹಾಗಾಗಿ ಈ ಸಲಹೆಗಳನ್ನು ಪಾಲಿಸುತ್ತೀರಿ. ಇದರಿಂದ ಸ್ತನ ಕ್ಯಾನ್ಸರ್‌ಗೆ ಒಳಗಾಗುವುದನ್ನು ತಡೆಯಬಹುದು. ಆರೋಗ್ಯಕರವಾದ ನೆಮ್ಮದಿಯ ಜೀವನ ಸಾಗಿಸಬಹುದು.