Monday, 18th November 2024

Lakme Fashion Week 2024: ಫೆಸ್ಟಿವ್‌ ಸೀಸನ್‌ನಲ್ಲಿ ಮನಸೂರೆಗೊಂಡ ಲ್ಯಾಕ್ಮೆ ಫ್ಯಾಷನ್‌ ವೀಕ್‌

Lakme fashion week 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬಾರಿಯ ಲ್ಯಾಕ್ಮೆ ಫ್ಯಾಷನ್‌ ವೀಕ್‌ (Lakme Fashion Week 2024), ಅತ್ಯಾಕರ್ಷಕ ಡಿಸೈನರ್‌ವೇರ್‌ಗಳನ್ನು ಅನಾವರಣ ಮಾಡುವುದರ ಮೂಲಕ ಫ್ಯಾಷನ್‌ ಪ್ರಿಯರ ಗಮನ ಸೆಳೆಯಿತು. ಈ ಹಬ್ಬದ ಸೀಸನ್‌ನಲ್ಲಿ ನಡೆದ ಎಫ್‌ಡಿಸಿಐ ಹಾಗೂ ಲ್ಯಾಕ್ಮೆ ಫ್ಯಾಷನ್‌ ವೀಕ್‌ ಸಂಯುಕ್ತಾಶ್ರಯದಲ್ಲಿ ನಡೆದ ಫ್ಯಾಷನ್‌ ವೀಕ್‌ನಲ್ಲಿ ಕೇವಲ ಸೆಲೆಬ್ರಿಟಿಗಳ ಎಕ್ಸ್‌ಕ್ಲೂಸೀವ್‌ ಡಿಸೈನರ್‌ವೇರ್‌ಗಳು ಪ್ರದರ್ಶನಗೊಂಡದ್ದು ಮಾತ್ರವಲ್ಲ, ಜತೆಗೆ ಇವರ ಜತೆ ಹೆಜ್ಜೆ ಹಾಕಿದ ಮಾಡೆಲ್‌ಗಳ ಭಿನ್ನ-ವಿಭಿನ್ನ ಔಟ್‌ಫಿಟ್‌ಗಳು ಕೂಡ ಎಲ್ಲರನ್ನು ಆಕರ್ಷಿಸಿದವು. ಟ್ರೆಂಡ್‌ ಸೆಟ್‌ ಮಾಡಿದವು.

ಚಿತ್ರಗಳು: ಎಫ್‌ಡಿಸಿಐ ಲ್ಯಾಕ್ಮೆ ಫ್ಯಾಷನ್‌ ವೀಕ್‌

ಬಾಲಿವುಡ್‌ ಸೆಲೆಬ್ರೆಟಿಗಳ ರ‍್ಯಾಂಪ್‌ ವಾಕ್‌

ನವದೆಹಲಿಯಲ್ಲಿ ನಡೆದ ಈ ಫ್ಯಾಷನ್‌ ವೀಕ್‌ನಲ್ಲಿ ಬಾಲಿವುಡ್‌ ನಟಿಯರಾದ ಅನನ್ಯಾ ಪಾಂಡೇ, ಶ್ರದ್ದಾ ಕಪೂರ್‌, ಶಿಲ್ಪಾ ಶೆಟ್ಟಿ, ಶೋಭಿತಾ, ಸೋಹಾ ಅಲಿ ಖಾನ್‌, ಸಂಗೀತಾ ಬಿಜಲಾನಿ, ಡಯಾನಾ ಪೆಂಟಿ, ಫಾತಿಮಾ ಸನಾ ಶೇಖ್‌, ಶಿಫಾಲಿ ಶಾ, ಭೂಮಿ ಪೆಡ್ನೆಕರ್‌, ಶ್ರಿಯಾ ಸರಣ್‌, ನಟ ಗುರ್‌ಫತೇ, ಒಲಂಪಿಕ್‌ ಮೆಡಲ್‌ ವಿನ್ನರ್‌ ಮನು ಬಾರ್ಕರ್ ಸೇರಿದಂತೆ ಬಾಲಿವುಡ್‌ ಹಾಗೂ ಇತರೆ ಕ್ಷೇತ್ರದ ಸೆಲೆಬ್ರೆಟಿಗಳು ಡಿಸೈನರ್‌ಗಳ ಆಕರ್ಷಕ ಡಿಸೈನರ್‌ವೇರ್‌ಗಳನ್ನು ಧರಿಸಿ, ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ರ‍್ಯಾಂಪ್‌ ವಾಕ್‌ ಮಾಡಿ ನೋಡುಗರ ಮನ ಗೆದ್ದರು.

ಡಿಸೈನರ್‌ಗಳ ಸಮಾಗಮ

ಕಳೆದ ಅಕ್ಟೋಬರ್‌ 9 ರಿಂದ ಅ. 13 ರವರೆಗೆ ನಡೆದ ಈ ಫ್ಯಾಷನ್‌ ವೀಕ್‌ನಲ್ಲಿ ವರ್ಷಾ, ರೀತು, ರಾಶಿ ಕಪೂರ್‌, ಸಿಮ್ಮಿ ಸಾಬೂ, ಸಂಜುಕ್ತಾ ದತ್ತಾ,ಕಲ್ಕಿ ಸೇರಿದಂತೆ ನಾನಾ ಡಿಸೈನರ್‌ಗಳು ಪಾಲ್ಗೊಂಡಿದ್ದರು. ವಿಶೇಷವೆಂದರೆ, ಈ ಬಾರಿ ಇವರೆಲ್ಲರೂ ಧರಿಸಿದ್ದ ಡಿಸೈನರ್‌ವೇರ್‌ಗಳು ಗ್ರ್ಯಾಂಡ್‌ ಎಥ್ನಿಕ್‌ವೇರ್‌ಗಳಾಗಿದ್ದವು. ಮನಮೋಹಕ ವಿನ್ಯಾಸ ಹೊಂದಿದ್ದವು.

ಲ್ಯಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ ಗುರು ಪ್ರಸಾದ್‌ ಬಿದ್ದಪ್ಪ

ಅಂದಹಾಗೆ, ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ ಕೂಡ ಈ ಸಾಲಿನ ಲ್ಯಾಕ್ಮೆ ಫ್ಯಾಷನ್‌ ವೀಕ್‌ನ ಶೋಗಳಲ್ಲಿ ಫ್ರಂಟ್‌ ಲೈನ್‌ ಗೆಸ್ಟ್ ಲಿಸ್ಟ್‌ನಲ್ಲಿ ಕಾಣಿಸಿಕೊಂಡರು. ತಮ್ಮ ಸ್ನೇಹಿತ ಅಬ್ರಾಹಂ ಅವರ ಲೆಬೆಲ್‌ ರ‍್ಯಾಂಪ್‌ ಶೋವನ್ನು ನೋಡಲು ಬೆಂಗಳೂರಿನಿಂದ ದಿಲ್ಲಿಗೆ ತೆರಳಿದ್ದರು.

ಈ ಸುದ್ದಿಯನ್ನೂ ಓದಿ | UI Movie: ಬಹುನಿರೀಕ್ಷಿತ ʼಯುಐʼ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ; ಉಪೇಂದ್ರ ಸಿನಿಮಾ ಯಾವಾಗ ರಿಲೀಸ್‌?

ಪ್ರಸಾದ್‌ ಬಿದ್ದಪ್ಪ ಫ್ಯಾಷನ್‌ ಟಾಕ್‌

“ಲ್ಯಾಕ್ಮೆ ಫ್ಯಾಷನ್‌ ವೀಕ್‌ ಒಂದು ಪ್ರತಿಷ್ಠಿತ ಫ್ಯಾಷನ್‌ ವೇದಿಕೆ. ಇಲ್ಲಿ ಅನಾವರಣಗೊಳ್ಳುವ ಪ್ರತಿ ಡಿಸೈನರ್‌ವೇರ್‌ಗಳು, ನಯಾ ಡಿಸೈನರ್‌ಗಳ ಹೊಸ ಔಟ್‌ಫಿಟ್‌ಗಳಿಗೆ ಐಡಿಯಾ ನೀಡುತ್ತವೆ. ಅಲ್ಲದೇ, ಫ್ಯಾಷನ್‌ ಪ್ರಿಯರಿಗೆ ವಿನೂತನ ಫ್ಯಾಷನ್‌ನ ರಸದೌತಣವನ್ನು ನೀಡುತ್ತವೆ. ಆಸಕ್ತರಿಗೆ ಪ್ರಯೋಗಾತ್ಮಕ ಫ್ಯಾಷನ್‌ವೇರ್‌ಗಳ ಬಗ್ಗೆ ಇರುವ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇದೇ ಈ ಫ್ಯಾಷನ್‌ ವೀಕ್‌ನ ಸ್ಪೆಷಾಲಿಟಿ” ಎನ್ನುತ್ತಾರೆ ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)