Friday, 22nd November 2024

Sanju Samson : ಸಂಜು ಸ್ಯಾಮ್ಸನ್‌ಗೆ ಶಾಲು ಹೊದಿಸಿ ಸ್ವಾಗತ ನೀಡಿದ ತಿರುವನಂತಪುರ ಎಂಪಿ ಶಶಿ ತರೂರ್‌

Sanju Samson

ನವದೆಹಲಿ: ಶನಿವಾರ ಹೈದರಾಬಾದ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತದ ದಾಖಲೆಯ ಟಿ20 ಐ ವಿಜಯದಲ್ಲಿ  ಭರ್ಜರಿ ಪ್ರದರ್ಶನ ನೀಡಿದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್‌ಗೆ (Sanju Samson) ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಅವರು ತಿರುವನಂತಪುರದಲ್ಲಿ ಭರ್ಜರಿ ಸ್ವಾಗತಿ ನೀಡಿದ್ದಾರೆ. ಅವರನ್ನೂ ಭೇಟಿಯಾಗಿ ದೊಡ್ಡ ಸಾಧನೆಗಾಗಿ ಅಭಿನಂದಿಸಿದ್ದಾರೆ.

ತರೂರ್ ಅವರು ತಮ್ಮ ಮನೆಯಲ್ಲಿ ನಡೆದ ಅಭಿನಂದನಾ ಸಮಾರಂಭದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಸೋಮವಾರ ನಡೆದ ಸಭೆಯಲ್ಲಿ ಶಶಿ ತರೂರ್ ಅವರು ಸ್ಯಾಮ್ಸನ್‌ಗೆ ನೀಲಿ ಪೊನ್ನಡ (ಶಾಲು) ಹೊದಿಸಿ ಸನ್ಮಾನಿಸಿದರು. ಬಾಂಗ್ಲಾದೇಶದ ವಿರುದ್ಧ ಅದ್ಭುತ ಶತಕ ಗಳಿಸಿದ ನಂತರ ಸಂಜು ಸ್ಯಾಮ್ಸನ್‌ ತಿರುವನಂತಪುರಕ್ಕೆ ಮರಳಿದ್ದಾರೆ. ಶತಕ ಹೀರೋ ಸಂಜುಗೆ ಸ್ವಾಗತ ನೀಡಲು ಸಂತೋಷವಾಗುತ್ತಿದೆ. ಅವರನ್ನು ಗೌರವಿಸಲು ಭಾರತದ ಬಣ್ಣದ (ನೀಲಿ ಬಣ್ಣ) ‘ಪೊನ್ನಡ’ ಶಾಲು ಬಳಸಿದೆ ಎಂದು ತರೂರ್ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಶತಕದ ದಾಖಲೆ

ಬಾಂಗ್ಲಾದೇಶದ ವಿರುದ್ಧ ಭಾರತದ ದಾಖಲೆಯ ಮೊತ್ತ 297 ರಲ್ಲಿ ಭಾರತದ ವಿಕೆಟ್ ಕೀಪರ್-ಬ್ಯಾಟರ್‌ ತಮ್ಮ ಮೊದಲ ಟಿ 20 ಶತಕವನ್ನು ಗಳಿಸಿದ ನಂತರ ತರೂರ್ ಸ್ಯಾಮ್ಸನ್ ಅವರನ್ನು ಭೇಟಿಯಾಗಿರುವುದಕ್ಕೆ ಸಂತೋಷ ಪಟ್ಟಿದ್ದಾರೆ. ದೀರ್ಘಕಾಲದಿಂದ ಸ್ಯಾಮ್ಸನ್ ಅವರ ಬೆಂಬಲಕ್ಕೆ ನಿಂತಿದ್ದ ತರೂರು, ಕೇರಳದ ಸೂಪರ್‌ಸ್ಟಾರ್‌ಗೆ ಅವಕಾಶಗಳ ಕೊರತೆ ಆಗುತ್ತಿದೆ. ಟೀಮ್ ಮ್ಯಾನೇಜ್ಮೆಂಟ್ ಅನ್ನು ನಿರಂತರವಾಗಿ ಅವರನ್ನು ಸೋಷಣೆ ಮಾಡುತ್ತಿದೆ ಎಂದು ಆರೋಪಿಸಿದ್ದರು. 

ಇದನ್ನೂ ಓದಿ : Rishabh Pant : ನ್ಯೂಜಿಲ್ಯಾಂಡ್‌ ಸರಣಿಗೆ ಮೊದಲು ಗಲ್ಲಿ ಕ್ರಿಕೆಟ್‌ ಆಡಿದ ರಿಷಭ್ ಪಂತ್‌

ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಸ್ಯಾಮ್ಸನ್ ಕೇವಲ 47 ಎಸೆತಗಳಲ್ಲಿ 111 ರನ್ ಬಾರಿಸಿದ್ದರು. ಸ್ಯಾಮ್ಸನ್ ಕೇವಲ 40 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಭಾರತದ ಎರಡನೇ ಅತಿ ವೇಗದ ಟಿ 20 ಶತಕ ಗಳಿಸಿದ್ದರು. ಸ್ಯಾಮ್ಸನ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಎರಡನೇ ವಿಕೆಟ್‌ಗೆ ಕೇವಲ 70 ಎಸೆತಗಳಲ್ಲಿ 173 ರನ್‌ಗಳ ಜೊತೆಯಾಟದ ಮೂಲಕ ಭಾರತವು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 297 ರನ್ ಗಳಿಸಿತ್ತು.

ನವೆಂಬರ್‌ನಲ್ಲಿ ಭಾರತವು ಟಿ 20 ಐ ಸರಣಿಗಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳುವ ಮೊದಲು ಸ್ಯಾಮ್ಸನ್ ಕೇರಳ ಪರ ಒಂದೆರಡು ರಣಜಿ ಟ್ರೋಫಿ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.