Sunday, 24th November 2024

Murder Case: ಪ್ರಿಯಕರನ ಜೊತೆಗಿನ ಸರಸಕ್ಕೆ ಅಡ್ಡ ಬಂದ ಮಗನನ್ನೇ ಕೊಂದ ತಾಯಿ!

Murder Case

ಪುಣೆ: ತಾಯಿ ಎಂದರೆ ಜೀವ ನೀಡಿದ ದೇವತೆ ಎಂದೇ ಜನ ಭಾವಿಸುತ್ತಾರೆ. ಯಾಕೆಂದರೆ ಎಂತಹ ಸಂಕಷ್ಟ ಎದುರಾದರೂ ತನ್ನ ಮಗುವಿನ ಜೀವ ಉಳಿಸಲು ತನ್ನ ಜೀವವನ್ನು ತ್ಯಾಗ ಮಾಡಲು ರೆಡಿಯಾಗಿರುತ್ತಾಳೆ. ಅಂತಹದರಲ್ಲಿ ಇಲ್ಲೊಬ್ಬ ಮಹಿಳೆ ಅಂತಹ ತಾಯಿ ಸ್ಥಾನಕ್ಕೆ ಕಳಂಕ ತಂದಿದ್ದಾಳೆ.  ತನ್ನ ಕಾಮದಾಸೆಗೆ ಪ್ರಿಯಕರನ ಜೊತೆ ಸೇರಿ ಹೆತ್ತ ಮಗನನ್ನೇ ಕೊಲೆ (Murder Case)ಮಾಡಿದ್ದಾಳೆ. ಪುಣೆಯ ಲೋನಿಕಂಡ್ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.  

ಮೃತನನ್ನು ಅನಿಲ್ ಲಾಲ್‌ ಸಿಂಗ್‌ ಠಾಕೂರ್ (30) ಎಂದು ಗುರುತಿಸಲಾಗಿದೆ. ಅವರ  ತಾಯಿ ಸುಮಿತ್ರಾ ಲಾಲ್‌ಸಿಂಗ್‌ ಠಾಕೂರ್ (55) ಹಾಗೂ ಆಕೆಯ ಪ್ರಿಯಕರ ಪ್ರಫುಲ್ ಪುಂಡಲೀಕ್ ತಾಥೋಡ್ (34) ಕೊಲೆ ಮಾಡಿದ ಆರೋಪಿಗಳು. ಪೊಲೀಸ್ ವರದಿಗಳ ಪ್ರಕಾರ, ಅನಿಲ್ ಅವರ ಸಹೋದರ ಸುನಿಲ್ ಠಾಕೂರ್ (32) ಲೋನಿಕಂಡ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣದ ಬಗ್ಗೆ ದೂರು ದಾಖಲಿಸಿದ್ದಾರೆ. ಠಾಕೂರ್ ಕುಟುಂಬವು ಮೂಲತಃ ಉತ್ತರ ಪ್ರದೇಶದವರಾಗಿದ್ದು, ಪೆರ್ನೆ ಫಾಟಾ ಪ್ರದೇಶದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಪ್ರಫುಲ್ ಜೊತೆ ಸುಮಿತ್ರಾ ಅಕ್ರಮ ಸಂಬಂಧ ಹೊಂದಿರುವುದು ತಿಳಿದ ನಂತರ ಅನಿಲ್ ಮತ್ತು ಅವರ ತಾಯಿ ಆಗಾಗ ಜಗಳವಾಡುತ್ತಿದ್ದರು.

ಘಟನೆ ನಡೆದ ರಾತ್ರಿ ಅನಿಲ್ ಜೊತೆ ತಾಯಿ ಸುಮಿತ್ರಾ ಮತ್ತು ಆಕೆಯ ಗೆಳೆಯ ಪ್ರಫುಲ್ ಗಲಾಟೆ ನಡೆಸಿದ್ದರು. ಪ್ರಫುಲ್ಲ ಮತ್ತು ಸುಮಿತ್ರಾ ಅನಿಲ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ದೊಡ್ಡ ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ. ತೀವ್ರವಾಗಿ ಗಾಯಗೊಂಡ ಅನಿಲ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ದಾರಿ ಮಧ್ಯದಲ್ಲಿ ನಿಧನರಾಗಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಪರಾಧ ಸ್ಥಳಕ್ಕೆ ಭೇಟಿ ನೀಡಿ ಸುಮಿತ್ರಾಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಪ್ರಫುಲ್ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಎಂಬಿಬಿಎಸ್ ಕನಸು ನನಸಾಗಿಸಲು 64ನೇ ವರ್ಷಕ್ಕೆ ನೀಟ್ ಪರೀಕ್ಷೆ ಪಾಸಾದ ಎಸ್‍ಬಿಐ ಉದ್ಯೋಗಿ

ಅಕ್ರಮ ಸಂಬಂಧಗಳಿಂದ ಕೊಲೆ ನಡೆದಿರುವುದು  ಕಳೆದ ತಿಂಗಳಲ್ಲಿ ಪುಣೆಯಲ್ಲಿ ನಡೆದ ಮೂರನೇ ಘಟನೆ ಇದಾಗಿದೆ. ಕರ್ವೆನಗರದಲ್ಲಿ ನಡೆದ ಒಂದು  ಪ್ರಕರಣದಲ್ಲಿ, ಮಹಿಳೆ ಮತ್ತು ಆಕೆಯ ಪ್ರಿಯಕರ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ. ಮಹಿಳೆ ತನ್ನ ಗಂಡನ ಆಹಾರದಲ್ಲಿ ಮತ್ತು ಬರುವ ಔಷಧ ಬೆರೆಸಿ ನಂತರ ಅವಳ ಪ್ರೇಮಿ ಹರಿತವಾದ ಆಯುಧದಿಂದ ಅವನ ಮೇಲೆ ಹಲ್ಲೆ ನಡೆಸಿದ್ದನು.