Friday, 22nd November 2024

BBK 11: ಚುಚ್ಚು ಮಾತುಗಳಿಂದ ಬೇಸತ್ತ ಧನರಾಜ್: ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಕಾಮಿಡಿ ಸ್ಟಾರ್

Dhanraj Achar

ಬಿಗ್ ಬಾಸ್ ಕನ್ನಡ ಸೀಸನ್ 11 ಮೂರನೇ ವಾರಕ್ಕೆ ಕಾಲಿಟ್ಟಿದೆ. ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದ್ದು, ಬಿಗ್ ಬಾಸ್ ಸ್ಪರ್ಧಿಗಳೊಂದಿಗೆ ಫೋನ್ ಮೂಲಕ ಮಾತ್ರ ಮಾತನಾಡುತ್ತಿದ್ದಾರೆ. ಮನೆಯ ನಿಯಮವನ್ನು ಪಾಲಿಸಬೇಕೆಂದು ಖಡಕ್ ಆಗಿ ಬಿಗ್ ಬಾಸ್ ಹೇಳಿದ್ದು ತಪ್ಪಿದರೆ ಮನೆ ಮಂದಿ ಎಲ್ಲ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದಿದ್ದಾರೆ. ಇದರ ನಡುವೆ ವಿಶೇಷವಾಗಿ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆಯುತ್ತಿದೆ.

ನಿನ್ನೆ (ಅ. 14) ಅನುಷಾ ರೈ ಕ್ಯಾಪ್ಟನ್ ಕಡೆಯಿಂದ ನೇರವಾಗಿ ನಾಮಿನೇಟ್ ಆಗಿದ್ದರು. ಇಂದು ಕೂಡ ಕ್ಯಾಪ್ಟನ್​ಗೆನೇ ಮತ್ತೋರ್ವ ಸ್ಪರ್ಧಿಯನ್ನು ನೇರವಾಗಿ ನಾಮಿನೇಟ್ ಮಾಡುವ ಸವಾಲು ನೀಡಲಾಗಿದೆ. ಅದರಂತೆ ಶಿಶಿರ್ ಶಾಸ್ತ್ರಿ ಈ ಬಾರಿ ಧನರಾಜ್ ಆಚಾರ್ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ, ನಾಮಿನೇಟ್ ಮಾಡಲು ಶಿಶಿರ್ ನೀಡಿರುವ ಕಾರಣ ಧನರಾಜ್​ಗೆ ಬೇಸರ ತರಿಸಿದೆ.

ಧನರಾಜ್ ಮನೆಯಲ್ಲಿ ಅತಿಥಿಯೋ, ಆಟಗಾರನೋ, ಫಲ್ ಕನ್‌ಪ್ಯೂಶನ್ ಇದೆ. ನೀವು ಎಲ್ಲೋ ಕಳೆದು ಹೋಗಿದ್ದೀರಾ ಎಂಬುದು ನನ್ನ ಅನಿಸಿಕೆ. ಈ ಒಂದು ಕಾರಣಕ್ಕೆ ನಿಮ್ಮನ್ನು ನಾನು ನಾಮಿನೇಟ್ ಮಾಡುತ್ತಿದ್ದೇನೆ ಎಂದು ಶಿಶಿರ್ ಹೇಳಿದ್ದಾರೆ. ಇದನ್ನ ಕೇಳಿದ ಧನರಾಜ್ ಹಾಗಲಕಾಯಿ ಜೂಸ್ ಕುಡಿದು ನಾಮಿನೇಷನ್ ಸ್ವೀಕರಿಸಿದ್ದಾರೆ. ಆದರೆ, ಈ ಎಲ್ಲ ಬೆಳವಣಿಗೆ ಆದಮೇಲೆ ಧನರಾಜ್ ಕಣ್ಣೀರು ಹಾಕಿದ್ದಾರೆ.

ಶಿಶಿರ್​ ಮಾಡಿರುವ ನಾಮಿನೇಟ್​ ಪ್ರಕ್ರಿಯೆಯಿಂದ ಬೇಸರಕ್ಕೆ ಒಳಗಾದ ಧನ​ರಾಜ್​ ಒಬ್ಬರೇ ಕುಳಿತು ಕಣ್ಣೀರು ಹಾಕಿದ್ದಾರೆ. ನಾನೇ ಅನ್​ಫಿಟ್​ ಅನಿಸೋಕೆ ಶುರುವಾಗಿ ಹೋಗಿದೆ ಎಂದು ಹೇಳಿದ್ದಾರೆ. ಈ ವೇಳೆ ಹಂಸಾ ಮತ್ತು ಐಶ್ವರ್ಯಾರವರು ಧನ​ರಾಜ್​ ಕಣ್ಣೀರು ಹಾಕೋದನ್ನು ನೋಡಿ ಸಮಾಧಾನ ಪಡಿಸಿದ್ದಾರೆ.

ಬಿಗ್ ಬಾಸ್ ಮನೆಗೆ ಕಾಲಿಟ್ಟ ಧನರಾಜ್ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಕಾಮಿಡಿ ಪಂಚ್​ನಿಂದ ಮಿಂಚಿದ್ದ ಧನರಾಜ್ ಡೊಡ್ಮನೆಲಿ ತುಂಬಾನೆ ಸೈಲೆಂಟ್ ಆಗಿದ್ದಾರೆ. ಆರಂಭದಿಂದಲೇ ಧನರಾಜ್ ಕೊಂಚ ವೀಕ್, ಕಾಣಿಸುವುದಿಲ್ಲ ಎಂದು ಪದೇ ಪದೇ ಮನೆಯವರು ಹೇಳುತ್ತಿದ್ದರು. ಈಗ ಶಿಶಿರ್ ಕೂಡ ಪುನಃ ಅದೇ ಕಾರಣ ನೀಡಿ ನಾಮಿನೇಟ್ ಮಾಡಿರುವುದು ಧನರಾಜ್​ಗೆ ಮತ್ತಷ್ಟು ಬೇಸರ ತರಿಸಿದೆ.

BBK 11: ಚಿನ್ನಿ ಐ ಲವ್ ಯೂ: ಬಿಗ್ ಬಾಸ್ ಮನೆಗೆ ಕಾಲ್ ಮಾಡಿ ಭವ್ಯಾಗೆ ಪ್ರಪೋಸ್ ಮಾಡಿದ ತುಕಾಲಿ