Wednesday, 23rd October 2024

Manyata Tech Park : ಬೆಂಗಳೂರು ಮಳೆಗೆ ದೇಶದ ಅತಿ ದೊಡ್ಡ ಐಟಿ ಕೇಂದ್ರ ಮಾನ್ಯತಾ ಟೆಕ್‌ ಪಾರ್ಕ್‌ ಜಲಾವೃತ

Manyata Tech Park

ಬೆಂಗಳೂರು: ಭಾರತದ ಅತಿದೊಡ್ಡ ಐಟಿ ಕಚೇರಿ ಸ್ಥಳಗಳಲ್ಲಿ ಒಂದಾದ ಮಾನ್ಯತಾ ಟೆಕ್ ಪಾರ್ಕ್ (Manyata Tech Park) ಮಂಗಳವಾರ ಬೆಂಗಳೂರಿನಲ್ಲಿ ಸುರಿದ ಬಾರಿ ಮಳೆಗೆ ಜಲಾವೃತವಾಗಿತ್ತು. ಹೀಗಾಗಿ ಟೆಕ್ಕಿಗಳು ಕಚೇರಿ ತಲುಪಲು ಸಾಧ್ಯವಾಗದೇ ಪರದಾಡಿದರು. ಮಂಗಳವಾರ ಮುಂಜಾನೆಯಿಂದ ನಗರದಲ್ಲಿ ಭಾರಿ ಮಳೆಯಾಗಿದ್ದು. 300 ಎಕರೆ ಬೃಹತ್ ಟೆಕ್ ವಿಲೇಜ್‌ನ ರಸ್ತೆಗಳು ನೀರಿನಲ್ಲಿ ಮುಳುಗಿವೆ.

ನಾರ್ತ್ ಬೆಂಗಳೂರು ಪೋಸ್ಟ್ ಎಂಬ ಎಕ್ಸ್ ಹ್ಯಾಂಡಲ್ ಮಾನ್ಯತಾ ಒಳಗಿನ ದೃಶ್ಯ ಹಂಚಿಕೊಂಡಿದ್ದು, “ಒಆರ್ಆರ್ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನ ರಸ್ತೆಗಳು ನೀರಿನಲ್ಲಿ ಮುಳುಗಿವೆ. ಮುಂಜಾನೆ 3 ಗಂಟೆಯಿಂದ ಬಿಡವಿಲ್ಲದೇ ಮಳೆ ಸುರಿದಿರುವ ಕಾರಣ ಈ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಪ್ರವಾಹ ಉಂಟಾಗಿದೆ ಎಂದು ಬರೆಯಲಾಗಿದೆ.

ಹೆಬ್ಬಾಳ ಫ್ಲೈಓವರ್‌ ಮೇಲೆಯೂ ಸಂಚಾರ ದಟ್ಟಣೆ ಉಂಟಾಗಿತ್ತು. ಸಂಜೆ ಸಮಯದಲ್ಲಿ ದಟ್ಟಣೆ ಇನ್ನಷ್ಟು ಹೆಚ್ಚಾಯಿತು. ಮಳೆ ಮುಂದುವರಿದ ಕಾರಣ ಟೆಕ್ಕಿಗಳು ಮನೆಗೆ ತಲುಪಲು ಬೇಗನೆ ಕಚೇರಿ ಬಿಟ್ಟರು. ಬೆಂಗಳೂರು ವೆದರ್ ಮ್ಯಾನ್ ಎಂಬ ಬ್ಲಾಗರ್ , “ಒಆರ್ ಆರ್ ಬೆಂಗಳೂರಿನಲ್ಲಿ ಕಚೇರಿಗೆ ಹೋಗುವವರ ಮಾಹಿತಿಗಾಗಿ, ಮುಂದಿನ 2-3 ಗಂಟೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ, ಅವಕಾಶ ಸಿಕ್ಕಾಗಲೆಲ್ಲಾ ಕಚೇರಿಯನ್ನು ಬಿಡುವುದು ಉತ್ತಮ” ಎಂದು ಬರೆದಿದ್ದಾರೆ.

ಮತ್ತೊಬ್ಬರು ಮಾನ್ಯತಾ ಟೆಕ್ ಪಾರ್ಕ್‌ನ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ ಮತ್ತು “ಮಾನ್ಯತಾ ಟೆಕ್ ಪಾರ್ಕ್ ಒಳಗೆ ಎಲ್ಲೆಡೆ ಕೆರೆ ಮತ್ತು ಜಲಪಾತಗಳು” ಎಂದು ಬರೆದಿದ್ದಾರೆ.

ಬೆಂಗಳೂರಿನ ಕುಸಿಯುತ್ತಿರುವ ಮೂಲಸೌಕರ್ಯಗಳ ಬಗ್ಗೆ ಟೆಕ್ಕಿಗಳು ಹತಾಶೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮಳೆ ಬಂದಾಗ ನೀರು ತುಂಬಿದ ಪ್ರದೇಶಗಳನ್ನು ಹಾದುಹೋಗುವಾಗ ದಯವಿಟ್ಟು ಜಾಗರೂಕರಾಗಿರಿ. ಸುರಕ್ಷಿತವಾಗಿರಿ.” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Bengaluru Rain: ಭಾರಿ ಮಳೆ ಹಿನ್ನೆಲೆ ಬೆಂಗಳೂರಿನ ಶಾಲೆಗಳಿಗೆ ನಾಳೆ ರಜೆ ಘೋಷಣೆ

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಬೆಂಗಳೂರಿನಲ್ಲಿ ಮುಂದಿನ ಒಂದು ವಾರ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 2-3 ದಿನಗಳವರೆಗೆ ಭಾರಿ ಮಳೆಯೊಂದಿಗೆ ಕತ್ತಲು ಕವಿದ ಆಕಾಶ ಮುಂದುವರಿಯುವ ಸಾಧ್ಯತೆಯಿದೆ. ಅಕ್ಟೋಬರ್ 14 ರಿಂದ 17 ರವರೆಗೆ ಬೆಂಗಳೂರಿನಲ್ಲಿ ಮಧ್ಯಮದಿಂದ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಈ ವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಗೂಗಲ್‌ನಲ್ಲಿ ಬೆಂಗಳೂರು ವೆದರ್‌ ಟಾಪ್ ಟ್ರೆಂಡ್


ಧಾರಾಕಾರ ಮಳೆ ಮತ್ತು ಟ್ರಾಫಿಕ್ ಅಪ್ಡೇಟ್‌ಗಳ ಬಗ್ಗೆ ಜನರು ಹುಡಕಿದ್ದ ಕಾರಣ ಬೆಂಗಳೂರಿನ ಮಳೆಯು ಗೂಗಲ್ ಟ್ರೆಂಡ್‌ ಆಗಿತ್ತು. ಗೂಗಲ್ ಟ್ರೆಂಡ್ಸ್‌ ಮಾಹಿತಿಯ ಪ್ರಕಾರ, “ಬೆಂಗಳೂರು ಹವಾಮಾನ” ಎಂಬ ಕೀವರ್ಡ್ ಗೂಗಲ್‌ನಲ್ಲಿ 50,000 ಕ್ಕೂ ಹೆಚ್ಚು ಹುಡುಕಾಟ ಕಂಡಿದೆ. ಬೆಳಿಗ್ಗೆ 9:54 ಕ್ಕೆ, ಬೆಳಿಗ್ಗೆ ಜನದಟ್ಟಣೆಯ ಸಮಯದಲ್ಲಿ, ಮಳೆಯಿಂದಾಗಿ ಪ್ರಯಾಣಿಕರು ಭಯಂಕರ ದಟ್ಟಣೆ ಸಿಲುಕಿಕೊಂಡಿದ್ದರು.