Monday, 25th November 2024

Chandika Hathurusingha: ಆಟಗಾರನಿಗೆ ಕಪಾಳಮೋಕ್ಷ: ಕೋಚ್ ಸ್ಥಾನದಿಂದ ಹತುರಸಿಂಘ ಅಮಾನತು

ಢಾಕಾ: ಬಾಂಗ್ಲಾದೇಶ ಕ್ರಿಕೆಟಿಗನಿಗೆ ಕಪಾಳಮೋಕ್ಷ ಮಾಡಿರುವ ಪ್ರಕರಣದಲ್ಲಿ ತಂಡದ ಮುಖ್ಯ ಕೋಚ್(Bangladesh coach) ಚಂಡಿಕ ಹತುರಸಿಂಘ(Chandika Hathurusingha) ಅವರನ್ನು ಮುಖ್ಯ ತರಬೇತುದಾರ ಸ್ಥಾನದಿಂದ ಅಮಾನತುಗೊಳಿಸಲಾಗಿದೆ. ಅವರ ಸ್ಥಾನಕ್ಕೆ ವೆಸ್ಟ್ ಇಂಡೀಸ್‌ನ ಫಿಲ್ ಸಿಮನ್ಸ್(Phil Simmons) ಅವರನ್ನು ನೂತನ ಮುಖ್ಯ ತರಬೇತುದಾರನ್ನಾಗಿ ನೇಮಕ ಮಾಡಿದೆ.

ಶ್ರೀಲಂಕಾ ಮಾಜಿ ಆಟಗಾರ ಹತುರಸಿಂಘ ಅವರು ಭಾರತದ ಆತಿಥ್ಯದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಬಾಂಗ್ಲಾದೇಶ ಆಟಗಾರನ ಕಪಾಳಕ್ಕೆ ಬಾರಿಸಿದ ಆರೋಪ ಎದುರಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಬಿಸಿಬಿ, ಮುಖ್ಯ ಕೋಚ್ ಸ್ಥಾನದಿಂದ ಚಂಡಿಕ ಹತುರಸಿಂಘ ಅವರನ್ನು ಅಮಾನತುಗೊಳಿಸಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಹತುರಸಿಂಘ ಎರಡನೇ ಅವಧಿಗೆ ಬಾಂಗ್ಲಾ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಅವರ ಕೋಚಿಂಗ್‌ ಅವಧಿ ಮುಂದಿನ ವರ್ಷ(2025) ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿವರೆಗೆ ಇತ್ತು. ಆದರೆ ಇದೀಗ ಅನುಚಿತ ವರ್ತನೆ ತೋರಿದ್ದಕ್ಕಾಗಿ ಅವರ ತಲೆದಂಡವಾಗಿದೆ. ಹತುರಸಿಂಘ ಮಾರ್ಗದರ್ಶನದಲ್ಲಿಯೇ ಬಾಂಗ್ಲಾದೇಶ ತಂಡ ಇತ್ತೀಚೆಗೆ ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಜಯಿಸಿತ್ತು. ಆದರೆ ಭಾರತ ಪ್ರವಾಸದಲ್ಲಿ ವೈಟ್‌ವಾಶ್‌ ಮುಖಭಂಗ ಎದುರಿಸಿತ್ತು. ನೂತನ ಕೋಚ್‌ ಫಿಲ್ ಸಿಮನ್ಸ್ ಮುಂದಿನ ವರ್ಷದ ಚಾಂಪಿಯನ್ಸ್ ಟ್ರೋಫಿವರೆಗೂ ಬಾಂಗ್ಲಾ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ಇದನ್ನೂ ಓದಿ IND vs NZ: ಮಳೆ ಕಣ್ಣಾಮುಚ್ಚಾಲೆ; ಮೊದಲ ದಿನದಾಟ ರದ್ದು ಸಾಧ್ಯತೆ

ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ; ನಾಯಕಿ ಕೌರ್‌ ತಲೆದಂಡ ಸಾಧ್ಯತೆ?

ಮುಂಬಯಿ: ಪ್ರಸಕ್ತ ಸಾಗುತ್ತಿರುವ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ(Womens T20 World Cup) ಕಳಪೆ ಪ್ರದರ್ಶನ ತೋರುವ ಮೂಲಕ ಲೀಗ್‌ನಿಂದಲೇ ಭಾರತ ತಂಡ ಹೊರಬಿದ್ದಿತ್ತು. ಇದೀಗ ನಾಯಕಿ ಹರ್ಮನ್‌ಪ್ರೀತ್‌ ಕೌರ್‌(Harmanpreet Kaur) ತಲೆದಂಡವಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಬಿಸಿಸಿಐ(BCCI) ಆಯ್ಕೆ ಸಮಿತಿ ಜತೆ ಸಭೆ ಕೆರೆದಿದ್ದು ಕೌರ್‌ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಮತ್ತು ಟೀಮ್‌ ಇಂಡಿಯಾದಲ್ಲಿ ಅವರ ಸ್ಥಾನದ ಬಗ್ಗೆ ಚರ್ಚಿಸಲಿದೆ ಎಂದು ವರದಿಯಾಗಿದೆ.

ಕ್ರಿಕ್‌ಬಜ್‌ ವರದಿ ಪ್ರಕಾರ ಟಿ20 ವಿಶ್ವಕಪ್‌ ಟೂರ್ನಿಯಿಂದ ಭಾರತ ಹೊರಬಿದ್ದ ಕಾರಣ ತಂಡದ ಮುಖ್ಯ ಕೋಚ್ ಅಮೋಲ್ ಮಜುಂದಾರ್ ಮತ್ತು ಆಯ್ಕೆದಾರರೊಂದಿಗೆ ಮಂಡಳಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವದ ಬಗ್ಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

ಅಕ್ಟೋಬರ್ 24‌ ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಪಂದ್ಯಕ್ಕೆ ತಂಡವನ್ನು ಆಯ್ಕೆ ಮಾಡುವ ಮೊದಲು ಈ ಸಭೆ ನಡೆಯಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಸ್ಮೃತಿ ಮಂಧಾನ ಅವರಿಗೆ ನಾಯಕತ್ವ ನೀಡಲಾಗುವುದು ಎನ್ನಲಾಗಿದೆ. ಅವರು ಈಗಾಗಲೇ ತಂಡದ ಉಪನಾಯಕಿಯಾಗಿದ್ದಾರೆ.