Friday, 22nd November 2024

BBK 11: ಜಗದೀಶ್ vs ಮಂಜು, ತಿವಿಕ್ರಮ್: ಜಗಳಗಳ ಮಧ್ಯೆ ಕಳೆದು ಹೋದ ಮನೆ, ತಾಳ್ಮೆ ಕಳೆದುಕೊಂಡ ಬಿಗ್ ಬಾಸ್

Jagadish vs Manju and Trivikram

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada) ಶುರುವಾದಾಗಿನಿಂದ ದೊಡ್ಮನೆಯೊಳಗೆ ಒಂದು ದಿನವೂ ನೆಮ್ಮದಿ ಇಲ್ಲದಂತಾಗಿದೆ. ಈ ಎರಡೂವರೆ ವಾರಗಳಲ್ಲಿ ಪ್ರತಿ ದಿನ ಜಗಳಗಳು ನಡೆಯುತ್ತಲೇ ಇದೆ. ಜಗಳ ನಡೆಯಲಿಲ್ಲ ಎಂದು ಹೇಳಬಹುದಾದ ಒಂದು ದಿನ ಕೂಡ ಇಲ್ಲ. ಕಳೆದ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದರೂ ಒಂದು ಪೈಸೆ ಪ್ರಯೋಜನವಾಗುತ್ತಿಲ್ಲ. ಮನೆಯ ವಾತಾವರಣ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇದೆ.

ಇಂದಿನ ಎಪಿಸೋಡ್​ನಲ್ಲಿ ಕೂಡ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಜಗಳ ನಡೆದಿದೆ. ಈ ಬಾರಿ ಸ್ವತಃ ಬಿಗ್ ಬಾಸ್ ತಾಳ್ಮೆ ಕಳೆದುಕೊಂಡು ಇಡೀ ಮನೆಯ ಮೇಲೆ ರೇಗಾಡಿದ್ದಾರೆ. ಮುಖ್ಯವಾಗಿ ಜಗದೀಶ್ ಅವರ ವರ್ತನೆ ಮಿತಿ ಮೀರುತ್ತಿದೆ. ಬೇಕಂತಲೇ ಎಲ್ಲರನ್ನೂ ಕೆರಳಿಸುತ್ತಿದ್ದಾರೆ. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ. ಈ ಮಧ್ಯೆ ಅವರು ಬಿಗ್ ಬಾಸ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಯಾರೊಬ್ಬರೂ ಇದನ್ನು ಸಹಿಸಿಲ್ಲ. ಇಲ್ಲಿಂದ ಹೊತ್ತಿಕೊಂಡ ಬೆಂಕಿ ಇನ್ನೂ ಆರುತ್ತಿಲ್ಲ. ಇಡೀ ಮನೆ ಜಗದೀಶ್ ವಿರುದ್ಧ ತಿರುಗಿ ನಿಂತಿದೆ.

ಇತಿ-ಮಿತಿ ಎಲ್ಲವೂ ಮರೆತ ಸ್ಪರ್ಧಿಗಳು ಎಂದು ಕಲರ್ಸ್ ಕನ್ನಡ ಇಂದಿನ ಎಪಿಸೋಡ್​ನ ಪ್ರೋಮೋ ರಿಲೀಸ್ ಮಾಡಿದೆ. ಇದರಲ್ಲಿ ಕ್ಯಾಪ್ಟನ್ ಶಿಶಿರ್ ಅವರು ತಮ್ಮ ಮೊದಲ ನಾಮಿನೇಷನ್ ಧರ್ಮ ಅವರು ಎಂದು ಹೇಳುತ್ತಾರೆ. ಇದಕ್ಕೆ ಲಾಯರ್ ಜಗದೀಶ್ ಅವರು ನೀವು ಅವರನ್ನು ಟಾರ್ಗೆಟ್ ಮಾಡುತ್ತಿದ್ದೀರಿ ಎಂದು ನನಗನಿಸುತ್ತಿದೆ ಎಂದಿದ್ದಾರೆ. ಈ ವೇಳೆ ಮಾನಸ ಎಲ್ಲದಕ್ಕೂ ಬಾಯಿ ಹಾಕುತ್ತಿರಲ್ಲ ಎಂದು ಜಗದೀಶ್​ ಅವರಿಗೆ ಆವಾಜ್ ಹಾಕಿದ್ದಾರೆ. ಆಗ ಮನೆ ಮಂದಿಯೆಲ್ಲ ಎದ್ದು ಜಗಳಕ್ಕೆ ನಿಂತಿದ್ದಾರೆ.

ನಾಮಿನೇಟ್ ಆದವರೇ ಸುಮ್ಮನೆ ಇದ್ದಾರೆ, ನಿಂದೇನು ಲೇ, ಹೋಗಲೇ, ನಿಮ್ಮನೇ ಮುಂದೆ ನಿಂತಿದ್ದೇನಾ? ಎಂದು ಜಗದೀಶ್​ಗೆ ತ್ರಿವಿಕ್ರಮ್ ಏಕವಚನದಲ್ಲೇ ಹೇಳಿದ್ದಾರೆ. ಇದೇ ವೇಳೆ ಮಂಜು ಬಂದು ಥೂ ನಿನ್ನ ಯೋಗ್ಯತೆಗೆ, ಹೋಗಲೇ.. ಹೋಗಲೇ.. ಎಂದು ಜಗದೀಶ್​ಗೆ ಹೇಳಿದ್ದಾರೆ. ಇನ್ನು ಈ ರೀತಿ ಹೇಳುವಾಗ ಜಗದೀಶ್ ಹಾಗೂ ಮಂಜು ಇಬ್ಬರು ಫೇಸ್​ ಟು ಫೇಸ್ ಇದ್ದರು.

ಮನೆ ಮತ್ತೊಮ್ಮೆ ರಣರಂಗ ಆಗಿರುವುದನ್ನು ಕಂಡ ಬಿಗ್ ಬಾಸ್ ಮಧ್ಯೆ ಪ್ರವೇಶಿಸಿದ್ದಾರೆ. ಎಲ್ಲರೂ ಸುಮ್ನೆ ಇರಬೇಕು.. ಎಲ್ಲರೂ ಸೋಪಾದಲ್ಲಿ ಕುಳಿತುಕೊಳ್ಳಿ, ಯಾರೂ ಸದ್ದು ಮಾಡೋ ಹಂಗಿಲ್ಲ ಅಂತಲೇ ಬಿಗ್ ಬಾಸ್ ಸಿಟ್ಟಿಗೆದ್ದೇ ಹೇಳಿದ್ದಾರೆ.

BBK 11: ಶೋ ಬಗ್ಗೆ ಮತ್ತೊಮ್ಮೆ ಕೆಟ್ಟ ಮಾತು: ಜಗದೀಶ್​ಗೆ ಹೊಡೆಯಲು ಮುಂದಾದ ಉಗ್ರಂ ಮಂಜು-ರಂಜಿತ್, ಬಿಗ್ ಬಾಸ್ ಮನೆ ಧಗ ಧಗ