Sunday, 24th November 2024

Ashes 2025-26: ಆ್ಯಶಸ್‌ ವೇಳಾಪಟ್ಟಿ ಪ್ರಕಟ

ಸಿಡ್ನಿ: ಆಸ್ಟ್ರೇಲಿಯಾದಲ್ಲಿ(Cricket Australia) ಮುಂದಿನ ವರ್ಷ(Ashes 2025-26) ನಡೆಯಲಿರುವ ಪ್ರತಿಷ್ಠಿತ ಆ್ಯಶಸ್‌ ಸರಣಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಆಸ್ಟ್ರೇಲಿಯ-ಇಂಗ್ಲೆಂಡ್‌(Australia vs England) ನಡುವೆ 5 ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ. ಸಾಂಪ್ರದಾಯಿಕ ವೇಳಾಪಟ್ಟಿಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. 2025 ರಲ್ಲಿ ಆರಂಭಗೊಂಡ ಈ ಟೆಸ್ಟ್‌ ಮುಕ್ತಾಯ ಕಾಣುವುದು 2026 ರಲ್ಲಿ. ಒಂದು ಪಿಂಕ್‌ ಬಾಲ್‌(ಹಗಲು-ರಾತ್ರಿ) ಪಂದ್ಯ ಒಳಗೊಂಡಿದೆ. ಸರಣಿ 2025ರ ನವೆಂಬರ್‌ 21ರಿಂದ ಮೊದಲ್ಗೊಂಡು ಜ. 8 ರ ತನಕ ನಡೆಯಲಿದೆ. ಪಂದ್ಯಗಳ ತಾಣಗಳೆಂದರೆ ಪರ್ತ್‌, ಗಾಬ್ಬಾ, ಅಡಿಲೇಡ್‌, ಮೆಲ್ಬರ್ನ್‌, ಸಿಡ್ನಿ.

ಆ್ಯಶಸ್‌ ವೇಳಾಪಟ್ಟಿಯಲ್ಲಿನ ಪ್ರಮುಖ ಬದಲಾವಣೆ ಎಂದರೆ,1982-83 ರಿಂದ ಆ್ಯಶಸ್‌ ಆರಂಭಿಕ ಪಂದ್ಯದ ಆತಿಥ್ಯ ವಹಿಸುತ್ತಿದ್ದ ಬ್ರಿಸ್ಬೇನ್ ಅಂಗಳದಲ್ಲಿ ಈ ಬಾರಿ ದ್ವಿತೀಯ ಟೆಸ್ಟ್‌ ಪಂದ್ಯ ನಡೆಯಲಿದೆ. ಮೊದಲ ಪಂದ್ಯ ಪರ್ತ್‌ನಲ್ಲಿ ನಡೆಯಲಿದೆ. ನಾಲ್ಕು ದಶಕಗಳಲ್ಲಿ ಬ್ರಿಸ್ಬೇನ್‌ನಲ್ಲಿ ಆ್ಯಶಸ್‌ ಸರಣಿಯನ್ನು ಆರಂಭಿಸದಿರುವುದು ಇದು ಮೊದಲ ನಿದರ್ಶನ.

ವೇಳಾಪಟ್ಟಿ
ಪಂದ್ಯದಿನಾಂಕತಾಣ
ಮೊದಲ ಟೆಸ್ಟ್ನ. 21-25ಪರ್ತ್‌
ದ್ವಿತೀಯ ಟೆಸ್ಟ್‌ಡಿ. 4-8ಗಬ್ಬಾ, ಬ್ರಿಸ್ಬೇನ್
ತೃತೀಯ ಟೆಸ್ಟ್‌ಡಿ. 17-21ಅಡಿಲೇಡ್ ಓವಲ್, ಅಡಿಲೇಡ್
ನಾಲ್ಕನೇ ಟೆಸ್ಟ್‌ಡಿ. 26-30ಎಂಸಿಎ , ಮೆಲ್ಬರ್ನ್‌
ಐದನೇ ಟೆಸ್ಟ್‌ಜ.4-8ಸಿಡ್ನಿ ಕ್ರಿಕೆಟ್ ಸ್ಟೇಡಿಯಂ, ಸಿಡ್ನಿ

ವರ್ಷಾಂತ್ಯದಲ್ಲಿ ಭಾರತ ತಂಡ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯನ್ನಾಡಲು ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳಲಿದೆ. 1991/92 ರ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ ಮತ್ತು ಭಾರತವು ಬಾರ್ಡರ್-ಗಾವಸ್ಕರ್ ಟ್ರೋಫಿಯ ಭಾಗವಾಗಿ ಐದು ಪಂದ್ಯಗಳ ಸರಣಿಯನ್ನು ಆಡಲಿದೆ. ನವೆಂಬರ್ 22ರಿಂದ ಜನವರಿ 7ರವರೆಗೆ ಐದು ಪಂದ್ಯಗಳು ನಡೆಯಲಿದೆ. ಪರ್ತ್, ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಪಂದ್ಯಗಳು ನಡೆಯಲಿದೆ. ಇದರಲ್ಲಿ ಅಡಿಲೇಡ್ ಪಂದ್ಯವು ಪಿಂಕ್ ಬಾಲ್ ಟೆಸ್ಟ್ ಆಗಿರಲಿದೆ.

ಇದನ್ನೂ ಓದಿ IND vs NZ: ಮಳೆ ನಿಂತ 7 ನಿಮಿಷದಲ್ಲಿ ಪಂದ್ಯ ಆರಂಭ; ಚಿನ್ನಸ್ವಾಮಿಯಲ್ಲಿ ಮಾತ್ರ ಇದು ಸಾಧ್ಯ

ವೇಳಾಪಟ್ಟಿ

ಮೊದಲ ಟೆಸ್ಟ್: ನವೆಂಬರ್ 22-26, ಪರ್ತ್

ಎರಡನೇ ಟೆಸ್ಟ್: ಡಿಸೆಂಬರ್ 6-10, ಅಡಿಲೇಡ್ (ಹಗಲು ರಾತ್ರಿ)

ಮೂರನೇ ಟೆಸ್ಟ್: ಡಿಸೆಂಬರ್ 14-18, ಬ್ರಿಸ್ಬೇನ್

ನಾಲ್ಕನೇ ಟೆಸ್ಟ್: ಡಿಸೆಂಬರ್ 26-30, ಮೆಲ್ಬೋರ್ನ್

ಐದನೇ ಟೆಸ್ಟ್: ಜನವರಿ 3-7, ಸಿಡ್ನಿ