-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಿಂದಾಸ್ ಲುಕ್ನಲ್ಲಿ ಸ್ಯಾಂಡಲ್ವುಡ್ ನಟಿ ಸಂಯುಕ್ತಾ ಹೆಗ್ಡೆ (Samyukta Hegde) ಕಾಣಿಸಿಕೊಂಡಿದ್ದು, ಹಾಲಿ ಡೇ ಫ್ಯಾಷನ್ಗೆ ಸೈ ಎಂದಿದ್ದಾರೆ. ಹೌದು, ಸದಾ ಒಂದಲ್ಲ ಒಂದು ಹಾಲಿಡೇ ಸ್ಪಾಟ್ಗಳಿಗೆ ತೆರಳುವ ನಟಿ ಸಂಯುಕ್ತಾ, ಆಯಾ ಸ್ಥಳಗಳಿಗೆ ಹೊಂದುವಂತೆ, ತಮ್ಮದೇ ಆದ ಹಾಲಿ ಡೇ ಫ್ಯಾಷನ್ನಲ್ಲಿ (Star Holiday Fashion) ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಬಾರಿ, ಅವರು ಬಾಲಿಯಲ್ಲಿ, ನಾನಾ ಬಗೆಯ ಔಟ್ಫಿಟ್ಗಳಲ್ಲಿ ಕಾಣಿಸಿಕೊಂಡಿದ್ದು, ಅವುಗಳಲ್ಲಿ ಅವರು ಧರಿಸಿದ್ದ ಫ್ಲೋರಲ್ ಬಿಕಿನಿ ಬ್ಯಾಕ್ಲೆಸ್ ಟಾಪ್ & ಕೇಸರಿ ವರ್ಣದ ಕಟೌಟ್ ಸ್ಲಿಟ್ ಮಿನಿ ಸ್ಕರ್ಟ್ ಎಲ್ಲರ ಗಮನ ಸೆಳೆದಿದೆ. ಇನ್ನು, ಇದಕ್ಕೆ ಅವರ ಎರಡು ಜಡೆಯ ಕಲರ್ ಟೇಪ್ ಬ್ರೈಡ್ ಹೇರ್ಸ್ಟೈಲ್ ಸಾಥ್ ನೀಡಿದೆ.
ಬಿಂದಾಸ್ ಫ್ಯಾಷನ್ ಪ್ರೇಮಿ
ನಟಿ ಸಂಯುಕ್ತಾ ಹೆಗ್ಡೆ ಬಿಂದಾಸ್ ನಟಿ ಎಂದರೂ ಅತಿಶಯೋಕ್ತಿಯಾಗದು! ಕಿರಿಕ್ ಪಾರ್ಟಿ ಹಿಟ್ ಸಿನಿಮಾದ ನಂತರ, ಇನ್ನೊಂದಿಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಸಾಕಷ್ಟು ಫ್ಯಾಷನ್ ಇವೆಂಟ್ಗಳಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿ ವಾಕ್ ಮಾಡಿದರು. ಅಲ್ಲದೇ, ಆಗಾಗ್ಗೆ ಪ್ರಯೋಗಾತ್ಮಕ ಔಟ್ಫಿಟ್ಸ್ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅಷ್ಟೇಕೆ! ತಾವು ತೆರಳುವ ಹಾಲಿಡೇ ಸ್ಪಾಟ್ಗಳಿಗೆ ತಕ್ಕಂತೆ ಸಖತ್ ಹಾಟ್ ಆಗಿಯೂ, ನೆಟ್ಟಿಗರ ಹುಬ್ಬೇರಿಸುವಂತಹ ಔಟ್ಫಿಟ್ಗಳಲ್ಲಿ ಕಾಣಿಸಿಕೊಂಡು ಸುದ್ದಿಯಾಗುತ್ತಿರುತ್ತಾರೆ. ಆದರೆ, ಅವರ ಈ ಬಿಂದಾಸ್ ಲುಕ್, ಅಲ್ಟ್ರಾ ಮಾಡರ್ನ್ ಜೆನ್ ಜಿ ಹುಡುಗಿಯರನ್ನು ಸೆಳೆಯಲು ಯಶಸ್ವಿಯಾಗಿವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ರಿಚಾ.
ಮಾಡೆಲ್ನಂತೆ ಬಿಂಬಿಸುವ ಔಟ್ಫಿಟ್ಸ್
ಯಾವುದೇ ಮುಜುಗರವಿಲ್ಲದೇ, ಬಿಂದಾಸ್ ಲುಕ್ನಲ್ಲಿ ಕಾಣಿಸಿಕೊಳ್ಳುವ ಕೆಲವೇ ಕೆಲವು ಕನ್ನಡ ನಟಿಯರ ಸಾಲಿಗೆ ಇವರು ಕೂಡ ಸೇರುತ್ತಾರೆ. ಅವರ ಬಾಡಿ ಮಾಸ್ ಇಂಡೆಕ್ಸ್ ಕೂಡ ಅವರನ್ನು ಮಾಡೆಲ್ನಂತೆಯೇ ಬಿಂಬಿಸುತ್ತದೆ ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರಾದ ಜಾನ್. ಅವರ ಪ್ರಕಾರ, ಸಂಯುಕ್ತಾ ಹಾಲಿ ಡೇ ಲುಕ್ ಪರ್ಫೆಕ್ಟ್ ಆಗಿರುವುದು ಮಾತ್ರವಲ್ಲ, ನೋಡಲು ಆಕರ್ಷಕವಾಗಿದೆಯಂತೆ.
ಈ ಸುದ್ದಿಯನ್ನೂ ಓದಿ | Stock Market: ಷೇರುಪೇಟೆಯಲ್ಲಿ ಕರಡಿ ಕುಣಿತ; ಸೆನ್ಸೆಕ್ಸ್ 400 ಪಾಯಿಂಟ್ಸ್ ಕುಸಿತ
ಸಂಯುಕ್ತಾ ಫ್ಯಾಷನ್ ಲವ್
ನನಗಂತೂ ಪ್ರಯೋಗಾತ್ಮಕ ಫ್ಯಾಷನ್ವೇರ್ಗಳಲ್ಲಿ ಕಾಣಿಸಿಕೊಳ್ಳುವುದು ನನಗಿಷ್ಟ. ಅಲ್ಲದೇ, ಆಯಾ ಸಂದರ್ಭಕ್ಕೆ ತಕ್ಕಂತೆ ಔಟ್ಫಿಟ್ಸ್ ಆಯ್ಕೆ ಮಾಡುವುದು ನನ್ನ ಫ್ಯಾಷನ್ ಅಭಿರುಚಿಯಲ್ಲಿ ಸೇರಿದೆ ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ಸಂಯುಕ್ತಾ ತಿಳಿಸಿದ್ದು, ಅವರ ಪ್ರಯೋಗಾತ್ಮಕ ಫ್ಯಾಷನ್ ಪ್ರೇಮವನ್ನು ಎತ್ತಿ ತೋರಿಸುತ್ತದೆ ಎನ್ನಲಡ್ಡಿಯಿಲ್ಲ!
(ಲೇಖಕಿ ಫ್ಯಾಷನ್ ಪತ್ರಕರ್ತೆ)