Friday, 22nd November 2024

Physical Abuse: ಲೈಂಗಿಕ ಕ್ರಿಯೆಗೆ ನಿರಾಕರಿಸಿದ 19 ಯಾಜಿದಿ ಹುಡುಗಿಯರನ್ನು ಸಜೀವ ದಹಿಸಿದ್ದ ಐಸಿಸ್‌ ರಕ್ಕಸರು!

Physical Abuse

ನವದೆಹಲಿ : 2015ರಲ್ಲಿ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕರಿಂದ ಕ್ರೂರವಾಗಿ ಹತ್ಯೆಗೀಡಾದ (Physical Abuse) 19 ಯಾಜಿದಿ ಹುಡುಗಿಯರ ದುರಂತ ಕಥೆಯನ್ನು ಕೇಳಿದರೆ  ಭಯೋತ್ಪಾದನೆಯ ಆಳ್ವಿಕೆಯಲ್ಲಿ ಯಾಜಿದಿ ಸಮುದಾಯವು ಎದುರಿಸಿದ ನೋವು ಕಲ್ಲೆದೆಯನ್ನೂ ಕರಗಿಸುತ್ತದೆ. ಮುಖ್ಯವಾಗಿ ಉತ್ತರ ಇರಾಕ್‍ನ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಾದ ಯಾಜಿದಿ ಜನರನ್ನು ಅವರ ನಂಬಿಕೆಗಳಿಂದಾಗಿ ಐಸಿಸ್ ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡಿದೆ. ಇದನ್ನು ಉಗ್ರಗಾಮಿಗಳು “ಧರ್ಮವಿರೋಧಿ” ಎಂದು ಪರಿಗಣಿಸಿದ್ದಾರೆ.

2014ರ ಆಗಸ್ಟ್‌ನಲ್ಲಿ ವಾಯವ್ಯ ಇರಾಕ್‍ನ ಸಿಂಜಾರ್ ಅನ್ನು ಐಸಿಸ್ ವಶಪಡಿಸಿಕೊಂಡಾಗ ಸಾವಿರಾರು ಯಾಜಿದಿ ಮಹಿಳೆಯರು, ಹುಡುಗಿಯರನ್ನು ಸೆರೆ ಹಿಡಿಯಲಾಗಿತ್ತು. ಆದರೆ ಮೊಸುಲ್ ನಗರದಲ್ಲಿ ಉಗ್ರರೊಂದಿಗೆ ಲೈಂಗಿಕ ಕ್ರಿಯೆ ಮಾಡಲು ನಿರಾಕರಿಸಿದ 19 ಯಾಜಿದಿ ಹುಡುಗಿಯರನ್ನು ಕಬ್ಬಿಣದ ಪಂಜರದಲ್ಲಿ ಕೂಡಿ ಹಾಕಿ ಜೀವಂತವಾಗಿ ಸುಟ್ಟುಹಾಕಲಾಗಿತ್ತು.

“ಐಸಿಸ್ ಉಗ್ರರೊಂದಿಗೆ ಲೈಂಗಿಕ ಸಂಬಂಧ ಹೊಂದಲು ನಿರಾಕರಿಸಿದ್ದಕ್ಕಾಗಿ ಅವರಿಗೆ ಕ್ರೂರ ಶಿಕ್ಷೆ ವಿಧಿಸಲಾಗಿತ್ತು. ನೂರಾರು ಜನರು ನೋಡುತ್ತಿರುವಾಗಲೇ 19 ಯಾಜಿದಿ ಹುಡುಗಿಯರು ಸುಟ್ಟು ಕರಕಲಾದರು. ಈ ಕ್ರೂರ ಶಿಕ್ಷೆಯಿಂದ ಅವರನ್ನು ರಕ್ಷಿಸಲು ಯಾರೂ ಕೂಡ ಮುಂದೆ ಬರಲಿಲ್ಲ” ಎಂದು ಅಲ್ಲಿನ ಸ್ಥಳೀಯರೊಬ್ಬರು ದುಃಖದಿಂದ ಹೇಳಿದ್ದಾರೆ.

ಸಾಮೂಹಿಕ ಹತ್ಯೆಗಳು, ಲೈಂಗಿಕ ಗುಲಾಮಗಿರಿ ಮತ್ತು ಬಲವಂತವಾಗಿ ಮತಾಂತರಗೊಳಿಸುವುದು ಸೇರಿದಂತೆ ಯಾಜಿದಿಗಳ ಹತ್ಯಾಕಾಂಡವನ್ನು ಅಂತಾರಾಷ್ಟ್ರೀಯ ಸಮುದಾಯವು ನರಮೇಧ (genocide )ಎಂದು ವ್ಯಾಪಕವಾಗಿ ಖಂಡಿಸಿದೆ. ಯಾಜಿದಿ ಜನರಿಗೆ ನ್ಯಾಯ ಒದಗಿಸುವ ಪ್ರಯತ್ನಗಳು ಇನ್ನೂ ಮುಂದುವರೆದಿದ್ದು, ಐಸಿಸ್ ನಡೆಸಿದ ಈ ಅಪರಾಧಗಳಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಬದುಕುಳಿದವರು ಬಯಸುತ್ತಿದ್ದಾರೆ ಮತ್ತು ಅನೇಕರು ಕಾಣೆಯಾದ ತಮ್ಮ ಕುಟುಂಬ ಸದಸ್ಯರನ್ನು ಇನ್ನೂ ಹುಡುಕುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ.

ಇದನ್ನೂ ಓದಿ:ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯ ಮೈ ಏರಿದ ಹೆಬ್ಬಾವು! ವಿಡಿಯೊ ನೋಡಿ

ಐಸಿಸ್ ಭದ್ರಕೋಟೆಯಾದ ಫಲ್ಲುಜಾ ಮೇಲೆ ದಾಳಿ ನಡೆಸಲು ಇರಾಕ್ ಸೇನೆ ಸಿದ್ಧತೆ ನಡೆಸುತ್ತಿದೆ. ಹಾಗಾಗಿ ಸೈನಿಕರು ನಗರದ ದಕ್ಷಿಣದಲ್ಲಿರುವ ನೆರೆಹೊರೆಯವರಿಗೆ  ಭದ್ರತೆಯನ್ನು ಒದಗಿಸಿದ್ದಾರೆ ಮತ್ತು ನಗರದ ಮಧ್ಯಭಾಗದ ಮೂಲಕ  ಪ್ರವೇಶಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.