Sunday, 24th November 2024

Season Fashion: ಸೀಸನ್‌ ಲೇಯರ್‌ ಫ್ಯಾಷನ್‌‌‌ಗೆ ಜತೆಯಾದ ಚೀತಾ ಪ್ರಿಂಟ್‌ ಡ್ರೆಸ್

Season Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಚೀತಾ ಪ್ರಿಂಟ್‌ ಡ್ರೆಸ್‌ಗಳು ಈ ಋತುವಿನಲ್ಲಿ (Season Fashion) ಮರಳಿದ್ದು, ಲೇಯರ್‌ ಲುಕ್‌ನಲ್ಲಿ ಕಾಣಿಸಿಕೊಂಡಿವೆ. ಹೌದು, ಮಳೆಗಾಲ ಮುಗಿದು ಚಳಿಗಾಲದ ಗ್ರೀನ್‌ ಸಿಗ್ನಲ್‌ ಈಗಾಗಲೇ ದೊರೆತಿದ್ದರೂ, ಆಗಾಗ್ಗೆ ಸುರಿಯುವ ಮಳೆಯ ಹವಮಾನಕ್ಕೆ ತಕ್ಕಂತೆ, ಔಟ್‌ಫಿಟ್‌ಗಳನ್ನು ಧರಿಸುವ ಸ್ಟೈಲಿಂಗ್‌ ಕೂಡ ಬದಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ, ಚಾಲ್ತಿಯಲ್ಲಿರುವ ನಾನಾ ಬಗೆಯ ಔಟ್‌ಫಿಟ್‌ಗಳಿಗೂ ಲೇಯರ್‌ ಲುಕ್‌ ದೊರಕುತ್ತಿದೆ. ಈ ಸಾಲಿನಲ್ಲಿ ಚೀತಾ ಪ್ರಿಂಟ್‌ ಡ್ರೆಸ್‌ಗಳು ಸೇರಿಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಸ್ಟೈಲಿಂಗ್‌ಗೆ ತಕ್ಕಂತೆ ಬದಲಾದ ಚೀತಾ ಪ್ರಿಂಟ್‌ ಡ್ರೆಸ್

ಇನ್ನು, ಈ ಸೀಸನ್‌ನ ಟ್ರೆಂಡ್ ಲಿಸ್ಟ್‌ಗೆ ಮರಳಿರುವ ಬಗೆಬಗೆಯ ಚೀತಾ ಪ್ರಿಂಟ್‌ ಡ್ರೆಸ್‌ಗಳು ಸಾಕಷ್ಟು ಬಗೆಯಲ್ಲಿ ಕಾಣಿಸಿಕೊಂಡಿವೆ. ಜನರೇಷನ್‌ ಗ್ಯಾಪ್‌ನ ಸ್ಟೈಲಿಂಗ್‌ಗೆ ತಕ್ಕಂತೆ ಬದಲಾಗಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ನೇಹಾ ದುಪಿಯಾ, ಬಾಲಿವುಡ್‌ ನಟಿ

ಚೀತಾ ಪ್ರಿಂಟ್‌ ಡ್ರೆಸ್‌ ಲೇಯರ್‌ ಲುಕ್‌ನಲ್ಲಿ ನೇಹಾ ದುಪಿಯಾ

ರೋಡೀಸ್‌ ಇವೆಂಟ್‌ವೊಂದರಲ್ಲಿ ಈ ಚೀತಾ ಪ್ರಿಂಟ್‌ ಇರುವಂತಹ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದ, ನಟಿ ನೇಹಾ ದುಪಿಯಾ, ಈ ಡ್ರೆಸ್‌ಗೆ ಲೇಯರ್‌ ಲುಕ್‌ ನೀಡಿದ್ದರು. ಇದರೊಂದಿಗೆ ಪ್ಯಾಚ್‌ ವರ್ಕ್‌ ಇರುವಂತಹ ಡೆನಿಮ್‌ ಜಾಕೆಟ್‌ ಹಾಗೂ ಮೆಸ್ಸಿ ಜ್ಯುವೆಲರಿ ಧರಿಸಿ, ಜೆನ್‌ ಜಿ ಹುಡುಗಿಯರನ್ನೂ ಕೂಡ ಸೆಳೆದಿದ್ದರು. ಹೀಗೂ ಈ ಔಟ್‌ಫಿಟ್‌ ಧರಿಸಬಹುದು! ಎಂಬುದನ್ನೂ ತೋರಿಸಿಕೊಟ್ಟರು ಎನ್ನುತ್ತಾರೆ ಫ್ಯಾಷನ್‌ ಡಿಸೈನರ್‌ ರಿಯಾ.

ಏನಿದು ಚೀತಾ ಪ್ರಿಂಟ್‌ ಡ್ರೆಸ್‌?

ಅನಿಮಲ್‌ ಪ್ರಿಂಟ್‌ ಕೆಟಗರಿಯಲ್ಲಿ ಬಿಡುಗಡೆಗೊಳ್ಳುವ ಉಡುಗೆಗಳಲ್ಲಿ ಚೀತಾ ಪ್ರಿಂಟ್‌ ಕೂಡ ಒಂದು. ಚಿರತೆಯ ಮೈಚರ್ಮದಂತೆ ಕಾಣಿಸುವ ರಿಪ್ಲಿಕಾ ಡಿಜಿಟಲ್‌ ಪ್ರಿಂಟ್ಸ್ ಒಳಗೊಂಡ ಫ್ಯಾಬ್ರಿಕ್‌ನಲ್ಲಿ ಸಿದ್ಧಪಡಿಸಲಾಗುವ ಉಡುಪುಗಳಿವು. ಹಾಗೆಂದು ಇವು ಹೊಸ ಅವಿಷ್ಕಾರವೇನಲ್ಲ! ರೆಟ್ರೊ ಫ್ಯಾಷನ್‌ನಲ್ಲಿ ಇವು ಹಿಟ್‌ ಲಿಸ್ಟ್‌ನಲ್ಲಿದ್ದವು. ಬರಬರುತ್ತಾ ಪಾರ್ಟಿವೇರ್‌ಗೆ ಸೇರಿಕೊಂಡವು. ಈ ಮಧ್ಯೆ ತೆರೆಮರೆಗೆ ಸರಿದವು. ಇದೀಗ ಮತ್ತೊಮ್ಮೆ ನಯಾ ಸ್ಟೈಲಿಂಗ್‌ನಲ್ಲಿ ಫ್ಯಾಷನ್‌ಲೋಕಕ್ಕೆ ಕಾಲಿಟ್ಟಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ಜೆನ್‌.

ಈ ಸುದ್ದಿಯನ್ನೂ ಓದಿ | Star Holiday Fashion: ಸ್ಯಾಂಡಲ್‌‌‌ವುಡ್‌ ನಟಿ ಸಂಯುಕ್ತಾ ಹೆಗ್ಡೆ ಬಿಂದಾಸ್‌ ಹಾಲಿಡೇ ಲುಕ್!

ವೆರೈಟಿ ಡಿಸೈನ್‌ನಲ್ಲಿ ಚೀತಾ ಪ್ರಿಂಟ್‌ ಔಟ್‌ಫಿಟ್ಸ್

ಪೆಪ್ಲಮ್‌, ಸ್ಟ್ರೈಪ್ ಫ್ರಾಕ್‌, ಮ್ಯಾಕ್ಸಿ, ಕ್ರಾಪ್‌ ಟಾಪ್‌, ಕಾಮೊಲಿನ್‌, ಎ ಲೈನ್‌, ಮಿನಿ –ಮಿಡಿ, ಕಫ್ತಾನ್‌ ಹೀಗೆ ನಾನಾ ವೆರೈಟಿ ಡಿಸೈನ್‌ನಲ್ಲಿ ಇಂದಿಗೂ ಇವು ದೊರೆಯುತ್ತಿವೆ. ಈ ಸೀಸನ್‌ ಕಾನ್ಸೆಪ್ಟ್‌ಗೆ ತಕ್ಕಂತೆ ಲೇಯರ್‌ ಲುಕ್‌ ಪಡೆದುಕೊಂಡಿವೆ. ಯಾವುದೇ ಜಾಕೆಟ್‌ ಅಥವಾ ಕೇಪ್‌ನೊಂದಿಗೆ ಜತೆಯಾಗಿ ಜೆನ್‌ ಜಿ ಜನರೇಷನ್‌ನವರನ್ನು ಸೆಳೆಯುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್.

(ಲೇಖಕಿ ಫ್ಯಾಷನ್ ಪತ್ರಕರ್ತೆ)