Monday, 18th November 2024

Pralhad Joshi: ಕಿತ್ತೂರು ರಾಣಿ ಚೆನ್ನಮ್ಮ ಅಂಚೆ ಚೀಟಿ ಬಿಡುಗಡೆಗೆ ಜೋಶಿ ಮನವಿ

Pralhad Joshi

ನವದೆಹಲಿ: ಬ್ರಿಟಿಷ್ ಸಂಗ್ರಾಮದ ಮೊದಲ ವಿಜಯಕ್ಕೆ ಅ.23ಕ್ಕೆ 200 ವರ್ಷ ಸಂದಿದ್ದು, ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ (Kittur Rani Chennamma) ಅಂಚೆ ಚೀಟಿ ಬಿಡುಗಡೆಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಮನವಿ ಮಾಡಿದ್ದಾರೆ. ಕಿತ್ತೂರು ಕರ್ನಾಟಕದ ಪ್ರಮುಖರು ಇಂದು ನವದೆಹಲಿಯಲ್ಲಿ ಸಚಿವ ಪ್ರಲ್ಹಾದ್‌ ಜೋಶಿ ಅವರ ನೇತೃತ್ವದಲ್ಲಿ ನಿಯೋಗ ತೆರಳಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈ ಸುದ್ದಿಯನ್ನೂ ಓದಿ | Pralhad Joshi: ಮೋದಿ ಸರ್ಕಾರದಿಂದ ರೈತರಿಗೆ ಗುಡ್‌ ನ್ಯೂಸ್‌; ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ

ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕಿತ್ತೂರು ಸಂಸ್ಥಾನದ ಮಹಾರಾಣಿ, ವೀರ ವನಿತೆ ರಾಣಿ ಚೆನ್ನಮ್ಮ 1824 ರ ಮೊಟ್ಟ ಮೊದಲ ಬ್ರಿಟಿಷರ ವಿರುದ್ಧ ಸಂಗ್ರಾಮದ ವಿಜಯಕ್ಕೆ ಇದೇ ಈಗ 200 ವರ್ಷ ಸಂದಲಿದೆ. ಈ ಐತಿಹಾಸಿಕ ವಿಜಯದ ಸವಿ ನೆನಪಿಗಾಗಿ ವೀರ ರಾಣಿ ಚೆನ್ನಮ್ಮ ಅವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವಂತೆ ಮನವರಿಕೆ ಮಾಡಿಕೊಟ್ಟು, ಸಚಿವ ಸಿಂಧಿಯಾ ಅವರಲ್ಲಿ ಮನವಿ ಮಾಡಿದರು.

ಈ ಸುದ್ದಿಯನ್ನೂ ಓದಿ | World Anesthesia Day: ಇಂದು ವಿಶ್ವ ಅನಸ್ತೇಶಿಯ ದಿನ; ಅರಿವಳಿಕೆಯ ಬಗೆಗೆ ನಮಗೆಷ್ಟು ಅರಿವಿದೆ?

ಈ ಸಂದರ್ಭದಲ್ಲಿ ಕಿತ್ತೂರು ಕರ್ನಾಟಕ ನಿಯೋಗದ ಪ್ರಮುಖರು, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಅರವಿಂದ ಬೆಲ್ಲದ, ಮಾಜಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಹಾಗೂ ಮುಖಂಡರು ಉಪಸ್ಥಿತರಿದ್ದರು.