Friday, 22nd November 2024

India Canada Row : ಭಾರತಕ್ಕೆ ಬೆದರಿದ ಕೆನಡಾ; ನಿಜ್ಜರ್‌ ಕೊಲೆಯಲ್ಲಿ ಭಾರತ ಭಾಗಿಯಾಗಿದ್ದಕ್ಕೆ ಸಾಕ್ಷಿಗಳೇ ಇಲ್ಲ ಎಂದ ಪ್ರಧಾನಿ ಟ್ರುಡೊ!

India Canada Row:

ಬೆಂಗಳೂರು: ಖಲಿಸ್ತಾನಿ ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸುವುದಕ್ಕೆ ತಮ್ಮ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಒಪ್ಪಿಕೊಂಡಿದ್ದಾರೆ. ಈ ಮೂಲಕ ಭಾರತದ ದಿಟ್ಟ ಕ್ರಮಗಳಿಗೆ ಬೆದರಿದ ಕೆನಡಾದ ಪ್ರಧಾನಿ ತಮ್ಮದೇ ತಪ್ಪು ಎಂಬುದನ್ನು (India Canada Row) ಒಪ್ಪಿಕೊಂಡಿದ್ದಾರೆ.

ಕೆನಡಾದ ನೆಲದಲ್ಲಿ ನಿಜ್ಜರ್‌ ಹತ್ಯೆಯನ್ನು ಭಾರತ ಆಯೋಜಿಸಿದೆ ಎಂದು ಈ ಹಿಂದೆ ಹೇಳುತ್ತಾ ಬಂದಿದ್ದ ಟ್ರುಡೊಗೆ ಪಾಠ ಕಲಿಸಲು ಭಾರತ ದಿಟ್ಟ ಕ್ರಮ ಕೈಗೊಂಡಿತ್ತು. ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ನಿಯೋಗವನ್ನು ವಾಪಸ್‌ ಕರೆಸಿಕೊಂಡಿದ್ದಲ್ಲದೆ ಭಾರತದಲ್ಲಿದ್ದ ಕೆನಡಾದ ರಾಯಭಾರ ಅಧಿಕಾರಿಗಳನ್ನು ಹೊರಕ್ಕೆ ಅಟ್ಟಿತ್ತು. ಇದರಿಂದ ಬೆಚ್ಚಿದ ಟ್ರುಡೊ ಇದೀಗ ಸಂದರ್ಶನವೊಂದರಲ್ಲಿ ಈ ಬಗ್ಗೆ ಸಾಕ್ಷಿಗಳು ಇಲ್ಲೆ ಎಂಬ ಹೇಳಿಕೆ ನೀಡಿದ್ದಾರೆ.

ಭಾರತ ಪುರಾವೆಗಳನ್ನು ಹಂಚಿಕೊಳ್ಳಲು ನಮ್ಮನ್ನು ಕೇಳಿದರು. ಆ ಸಮಯದಲ್ಲಿ ಗುಪ್ತಚರ ಮಾಹಿತಿಯಾಗಿತ್ತು. ಬಲಿಷ್ಠ ಪುರಾವೆಗಳು ಇರಲಿಲ್ಲ ಎಂದು ಟ್ರುಡೊ ಹೇಳಿದರು, ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾಲ್ಗೊಳ್ಳುವಿಕೆಯ ಆರೋಪಗಳನ್ನು ಪುರಾವೆಗಳೊಂದಿಗೆ ಬೆಂಬಲಸಲು ಸಾಧ್ಯವಿಲ್ಲ ಎಂದು ದೃಢಪಡಿಸಿದ್ದಾರೆ.

ಖಲಿಸ್ತಾನಿ ಭಯೋತ್ಪಾದಕ ಗುರ್ಪತ್ವಂತ್ ಸಿಂಗ್ ಪನ್ನುನ್ ಕಳೆದ ಮೂರು ವರ್ಷಗಳಿಂದ ಜಸ್ಟಿನ್ ಟ್ರುಡೊ ಅವರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೇನೆ ಮತ್ತು ಅವರೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದೇನೆ ಎಂದು ಒಪ್ಪಿಕೊಂಡ ಕೆಲವೇ ಗಂಟೆಗಳ ನಂತರ ಈ ಹೇಳಿಕೆ ಬಂದಿದೆ.

ಹದಗೆಟ್ಟ ಸಂಬಂಧ

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ತನಿಖೆಯಲ್ಲಿ ಭಾರತೀಯ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕರು “ಹಿತಾಸಕ್ತಿಯ ವ್ಯಕ್ತಿಗಳು” ಎಂದು ಕೆನಡಾ ಆರೋಪಿಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟವು. ಭಾರತವು ಈ ಆರೋಪಗಳನ್ನು ತಿರಸ್ಕರಿಸಿತು ಮತ್ತು ಅವುಗಳನ್ನು “ಅಸಂಬದ್ಧ ಆರೋಪಗಳು” ಮತ್ತು ಜಸ್ಟಿನ್ ಟ್ರುಡೊ ಸರ್ಕಾರದ ರಾಜಕೀಯ ಕಾರ್ಯಸೂಚಿಯ ಭಾಗವಾಗಿದೆ ಎಂದು ಕರೆದಿದೆ.

ಇದನ್ನೂ ಓದಿ : Zakir Naik : ಹೈದರಾಬಾದ್‌ನಲ್ಲಿ ದುರ್ಗೆ ಮೂರ್ತಿ ಧ್ವಂಸಗೊಳಿಸಿದ ವ್ಯಕ್ತಿಗೆ ದ್ವೇಷ ಬೋಧಕ ಜಾಕಿರ್ ನಾಯ್ಕ್ ವೀಡಿಯೊಗಳೇ ಪ್ರೇರಣೆ!

ಭಾರತವು ಕೆನಡಾದಲ್ಲಿನ ತನ್ನ ಹೈಕಮಿಷನರ್ ಅನ್ನು ಹಿಂತೆಗೆದುಕೊಂಡ ನಂತರ ಟ್ರುಡೊ ಸರ್ಕಾರವು 6 ಭಾರತೀಯ ರಾಜತಾಂತ್ರಿಕರನ್ನು ದೇಶವನ್ನು ತೊರೆಯುವಂತೆ ಕೇಳಿಕೊಂಡಿತು. ಅಲ್ಲದೆ ಕೆನಡಾದ 6 ರಾಜತಾಂತ್ರಿಕರನ್ನು ಹೊರಹಾಕಿತು, ಅಕ್ಟೋಬರ್ 20 ರೊಳಗೆ ದೇಶವನ್ನು ತೊರೆಯುವಂತೆ ಕೇಳಿಕೊಂಡಿತು.