ಬೆಂಗಳೂರು: ಭಾರತ ಮತ್ತು ನ್ಯೂಜಿಲ್ಯಾಂಡ್(IND vs NZ) ನಡುವಿನ ಬೆಂಗಳೂರು ಟೆಸ್ಟ್ ಪಂದ್ಯದ ಮೊದಲ ದಿನ ಮಳೆಯಿಂದ ರದ್ದುಗೊಂಡಿತ್ತು. ದ್ವಿತೀಯ ದಿನವಾದ(IND vs NZ 1st Test Day 2) ಇಂದು (ಅ.17, ಗುರುವಾರ) ಪಂದ್ಯ ಆರಂಭವಾಗುವ ನಿರೀಕ್ಷೆ ಇದೆ. ಸದ್ಯ ಮೋಡ ಕವಿದ ವಾತಾವರಣವಿದ್ದರೂ ಮಳೆ ಇಲ್ಲ. ಮೊದಲ ದಿನದಾಟ ರದ್ದಾಗಿರುವ ಕಾರಣ ಉಳಿದ ದಿನದಾಟಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು ನಷ್ಟವಾದ ಆಟದ ಅವದಿಯನ್ನು ಇಲ್ಲಿ ಸರಿದೂಗಿಸಲಾಗುತ್ತದೆ. ಪಂದ್ಯದ ನಿಯಮಾವಳಿಯಂತೆ ಬೆಳಗ್ಗೆ 8.45ಕ್ಕೆ ಟಾಸ್ ಹಾಗೂ 9.15ಕ್ಕೆ ದಿನದಾಟದ ಆರಂಭವನ್ನು ನಿಗದಿಗೊಳಿಸಲಾಗಿದೆ.
ದಿನದಾಟಗಳ ಸೆಷನ್ ಸಮಯ
ಬೆಳಗಿನ ಅವಧಿ: 9:15 -11:30
ಮಧ್ಯಾಹ್ನದ ಅವಧಿ: 12:10 – 2:25
ಸಂಜೆ ಅವಧಿ: 2:45 – 4:45
ಬುಧವಾರ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮೊದಲ ದಿನದಾಟ ಅಸಾಧ್ಯ ಎನ್ನುವುದು ಬೆಳಗ್ಗೆಯೇ ಅರಿವಿಗೆ ಬಂದಿತ್ತು. ಆದರೂ ಮಧ್ಯಾಹ್ನದ ತನಕ ಕಾಯಲಾಗಿತ್ತು. ಅಂತಿಮವಾಗಿ 2.30ರ ಸುಮಾರಿಗೆ ಅಂಪೈರ್ಗಳು ದಿನದಾಟ ರದ್ದು ಎಂದು ಘೋಷಿಸಿದ್ದರು. ಎಷ್ಟೇ ಮಳೆಯಾದರೂ ಕೂಡ ಪಂದ್ಯ ವೀಕ್ಷಿಸಲು ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಾಕಷ್ಟು ವೀಕ್ಷಕರು ಹಾಜರಿದ್ದರು. ಇದು ಬೆಂಗಳೂರಿನ ಕ್ರೀಡಾಭಿಮಾನಕ್ಕೆ ಸಾಕ್ಷಿಯಾಗಿತು.
ಮುಖಾಮುಖಿ
ಭಾರತ ಮತ್ತು ನ್ಯೂಜಿಲ್ಯಾಂಡ್ ಇದುವರೆಗೆ 62 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ಗರಿಷ್ಠ 22 ಪಂದ್ಯಗಳನ್ನು ಗೆದ್ದಿದೆ. ನ್ಯೂಜಿಲ್ಯಾಂಡ್ 13 ಪಂದ್ಯದಲ್ಲಿ ಗೆಲುವು ಸಾಧಿಸಿದೆ. 27 ಪಂದ್ಯಗಳು ಡ್ರಾ ಗೊಂಡಿದೆ. ಇತ್ತಂಡಗಳು ಕೊನೆಯ ಬಾರಿಗೆ ಟೆಸ್ಟ್ ಪಂದ್ಯ ಆಡಿದ್ದು 2021ರಲ್ಲಿ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯವನ್ನು ಭಾರತ 372 ರನ್ ಅಂತರದಿಂದ ಗೆದ್ದು ಬೀಗಿತ್ತು. ಕೊನೆಯ 5 ಪಂದ್ಯಗಳ ಫಲಿತಾಂಶ ನೋಡುವುದಾದರೆ ಕಿವೀಸ್ ಮೂರು ಪಂದ್ಯ ಗೆದ್ದರೆ, ಭಾರತ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. ಒಂದು ಪಂದ್ರ ಡ್ರಾಗೊಂಡಿದೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ / ಸರ್ಫರಾಜ್ ಖಾನ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆ ಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್ /ಕುಲೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ನ್ಯೂಜಿಲೆಂಡ್: ಡೆವೋನ್ ಕಾನ್ವೇ, ಟಾಮ್ ಲೇಥಮ್ (ನಾಯಕ), ವಿಲ್ ಯಂಗ್, ರಚಿನ್ ರವೀಂದ್ರ, ಡೇರಲ್ ಮಿಚೆಲ್, ಟಾಮ್ ಬಂಡೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟರ್ /ಬ್ರೇಸ್ವೆಲ್, ಸೌಥಿ, ಅಜಾಜ್, ಒರ್ಕ