ಸಾರ್ವಜನಿಕ ಸಾರಿಗೆ, ಶಾಲೆ, ಕಾಲೇಜು ಸೇರಿದಂತೆ ಇತ್ತೀಚೆಗೆ ಬಾಂಬ್ ಬೆದರಿಕೆ (Bomb Threat) ಕರೆ, ಸಂದೇಶಗಳು ಹೆಚ್ಚಾಗುತ್ತಿವೆ. ಅದರಲ್ಲೂ ಸಾರ್ವಜನಿಕ ಸಾರಿಗೆಯಾದ (Public transport) ಭಾರತೀಯ ವಿಮಾನಕ್ಕೆ (Indian Airlines) ಬಾಂಬ್ ಬೆದರಿಕೆ ಬಂದಿರುವ ಹಿನ್ನಲೆಯಲ್ಲಿ ಕಳೆದ ಮೂರು ದಿನಗಳಿಂದ 10ಕ್ಕೂ ಹೆಚ್ಚು ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ.
ವಿಮಾನಗಳ ಮೇಲೆ ಬಾಂಬ್ ಬೆದರಿಕೆ ಪ್ರಯಾಣಿಕರಲ್ಲಿ ಆತಂಕವನ್ನು ಹೆಚ್ಚಿಸುತ್ತಿದೆ. ಸರ್ಕಾರ, ವಿಮಾನಯಾನ ಸಂಸ್ಥೆಗಳು ಈ ನಿಟ್ಟಿನಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಕೂಡ ಪ್ರಯಾಣಿಕರಲ್ಲಿ ಆತಂಕ ಇದ್ದೇ ಇರುತ್ತದೆ. ಹೀಗಾಗಿ ಪ್ರಯಾಣಿಕರು ಈ ಸಂದರ್ಭಗಳಲ್ಲಿ ಏನು ಮಾಡಬಹುದು ಎನ್ನುವ ಕುರಿತು ಮಾಹಿತಿ ಇಲ್ಲಿದೆ.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಬಿಗಿಯಾಗಿದೆ. ಸರ್ಕಾರ ಕೂಡ ಕಠಿಣ ನಿಗಾ ವಹಿಸಿದೆ. ಈ ಬೆದರಿಕೆಗಳು ಎಲ್ಲಿಂದ ಬರುತ್ತಿವೆ, ಭವಿಷ್ಯದಲ್ಲಿ ಇದನ್ನು ತಪ್ಪಿಸಲು ಏನು ಮಾಡಬೇಕು ಎನ್ನುವ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಭಾರತದಲ್ಲೂ ಭದ್ರತೆಗಾಗಿ ಕಠಿಣ ಕ್ರಮ ಕೈಗೊಳ್ಳುತ್ತಿರುವುದಾಗಿ ನೋಡಲ್ ಸಂಸ್ಥೆ ತನಿಖೆ ನಡೆಸುತ್ತಿರುವುದಾಗಿ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ (BCAS) ಮುಖ್ಯಸ್ಥರು ತಿಳಿಸಿದ್ದಾರೆ.
ಬಾಂಬ್ ಬೆದರಿಕೆ ಎಲ್ಲ ವಿಮಾನಯಾನ ಸಂಸ್ಥೆಗಳು ಚಟುವಟಿಕೆಯ ಮೇಲೂ ಪರಿಣಾಮ ಬೀರಿವೆ. ಇಂಡಿಗೋ, ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ಪ್ರೆಸ್, ಆಕಾಶ ಏರ್, ಸ್ಪೈಸ್ಜೆಟ್ ಮತ್ತು ಅಲಯನ್ಸ್ ಏರ್ ಗೆ ಇಂತಹ ಬಾಂಬ್ ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ಹೊಟೇಲ್ ಸೌಲಭ್ಯಗಳಿಲ್ಲದೆ ಸಣ್ಣ ಪ್ರದೇಶಗಳಲ್ಲಿ ಸಿಕ್ಕಿ ಹಾಕಿಕೊಳ್ಳುವ, ವಿಮಾನಗಳ ಬಳಿಯೇ ಯುದ್ಧ ವಿಮಾನಗಳು ಕಾಣಿಸಿಕೊಳ್ಳುವ, ಕೊಲ್ಲಿ ಪ್ರದೇಶಗಳಲ್ಲಿ ನಿಲುಗಡೆಯಾಗಬೇಕಿರುವ ಸನ್ನಿವೇಶ. ಹೆಚ್ಚಾಗಿ ಕೆಲವು ಪ್ರಯಾಣಿಕರು, ಹಿರಿಯ ನಾಗರಿಕರು, ಶಿಶುಗಳಿಗೆ ವಿಶೇಷ ಆರೈಕೆ, ಆಹಾರ ಮತ್ತು ಔಷಧಗಳ ಅಗತ್ಯವಿದ್ದಾಗ ಸಾಕಷ್ಟು ತೊಂದರೆ ಅನುಭವಿಸುತ್ತಾರೆ.
ಪ್ರತಿ ಬಾರಿಯೂ ಬೆದರಿಕೆಗಳು ಬಂದಾಗ ವಿಮಾನಯಾನ ಸಂಸ್ಥೆಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸಂಪೂರ್ಣ ನಿಯಮಾವಳಿಗಳನ್ನು ಅನುಸರಿಸಲಾಗುತ್ತದೆ.
ಬೆದರಿಕೆ ವೇಳೆ ಹೇಗೆ ನಿರ್ವಹಿಸಲಾಗುತ್ತದೆ?
ಸಾರ್ವಜನಿಕರಿಂದ ಪಡೆದ ನಿರ್ದಿಷ್ಟ ಕರೆ, ಇ-ಮೇಲ್ ಸಂದೇಶಗಳನ್ನು ಬೆದರಿಕೆ ಎಂದು ಪರಿಗಣಿಸಲಾಗುತ್ತದೆ. ಇದನ್ನು ನಿರ್ವಹಿಸಲು ಏರ್ಲೈನ್ ಸಿಬ್ಬಂದಿಗೆ ತರಬೇತಿ ನೀಡಲಾಗಿರುತ್ತದೆ. ಇದು ಬೆದರಿಕೆಯನ್ನು ಗುರುತಿಸಿ ಭದ್ರತಾ ಏಜೆನ್ಸಿಗಳಿಗೆ ಮಾಹಿತಿಯನ್ನು ನೀಡುತ್ತವೆ. ಅವರು ನೀಡುವ ಮಾರ್ಗದರ್ಶನದ ಅನ್ವಯ ಪ್ರಯಾಣಿಕರೊಂದಿಗೆ ವ್ಯವಹರಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತವೆ.
ಪ್ರಯಾಣಿಕರು ಏನು ಮಾಡಬಹುದು?
ಪ್ರಯಾಣಿಕರಿಗೆ ಇದು ಆತಂಕದ ವಾತಾವರಣ ಉಂಟು ಮಾಡಬಹುದು. ಆದರೆ ಈ ಸಂದರ್ಭದಲ್ಲಿ ಪ್ರಯಾಣಿಕರು ವಿಮಾನಯಾನ ಸಂಸ್ಥೆ ಸಿಬ್ಬಂದಿ ಮತ್ತು ಭದ್ರತಾ ಏಜೆನ್ಸಿಗಳೊಂದಿಗೆ ಸಹಕರಿಸಬೇಕು. ಶಿಶುಗಳು, ಮಕ್ಕಳು, ಗರ್ಭಿಣಿಯಾರು ಮತ್ತು ಹಿರಿಯ ನಾಗರಿಕರಿಗೆ ಆದ್ಯತೆ ನೀಡುವುದನ್ನು ಇತರ ಪ್ರಯಾಣಿಕರು ಪಾಲಿಸಬೇಕು. ತಮ್ಮ ಸಾಮಗ್ರಿಗಳ ಮೇಲೆ ಹೆಚ್ಚು ಗಮನವಿರಿಸಬೇಕಾಗುತ್ತದೆ.
ಸಹ ಪ್ರಯಾಣಿಕರ ಅನುಮಾನಾಸ್ಪದ ನಡವಳಿಕೆ, ಅನುಮಾನಾಸ್ಪದ ವಸ್ತುಗಳು ಕಂಡು ಬಂದರೆ ಕೂಡಲೇ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಇಂತಹ ಸಂದರ್ಭಗಳಲ್ಲಿ ಪ್ರತಿಯೊಬ್ಬರೂ ತನಿಖೆಗೆ ಸಹಕರಿಸಬೇಕಾಗುತ್ತದೆ. ಇದಕ್ಕಾಗಿ ಶಾಂತಿಯನ್ನು ಕಾಪಾಡಿಕೊಳ್ಳಬೇಕು. ಸುಳ್ಳು, ಆಧಾರ ರಹಿತ ಮಾಹಿತಿಯನ್ನು ಹರಡದಿರಿ. ಭದ್ರತಾ ಏಜೆನ್ಸಿಗಳು ಕೆಲಸ ಮಾಡುವಾಗ ಸಂಪೂರ್ಣ ಸಹಕರಿಸಿ. ಇದು ವಿಮಾನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.
ಪ್ರಯಾಣಿಕರಿಗೆ ಯಾವ ಹಕ್ಕುಗಳಿವೆ?
ಈ ರೀತಿಯ ಘಟನೆಗಳನ್ನು “ಫೋರ್ಸ್ ಮೇಜರ್” ಎನ್ನಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ವಿಮಾನದ ನಿಯಂತ್ರಣವನ್ನು ಹೊಂದಿರುವ ಭದ್ರತಾ ತಂಡ ಎರಡನೇ ಹಂತದ ತಪಾಸಣೆ ಮಾಡುವವರೆಗೆ ಚೆಕ್-ಇನ್ ಲಗೇಜ್ ಗೆ ಅನುಮತಿ ಇರುವುದಿಲ್ಲ. ಈ ಸಂದರ್ಭಗಳಲ್ಲಿ, ವಿಮಾನಯಾನ ಅಥವಾ ವಿಮಾನ ನಿಲ್ದಾಣವನ್ನು ದೂಷಿಸುವುದು ಸರಿಯಲ್ಲ.
Citizenship Act: ಪೌರತ್ವ ತಿದ್ದುಪಡಿ ಕಾಯ್ದೆ ಸೆಕ್ಷನ್ 6A ಸಾಂವಿಧಾನಿಕ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ
ಶಿಶು ಅಥವಾ ಮಕ್ಕಳಿಗಾಗಿ ಔಷಧ ಮತ್ತು ಆಹಾರಕ್ಕಾಗಿ ವಿನಂತಿ ಮಾಡಬಹುದು. ಆದ್ಯತೆಯ ಮೇಲೆ ಇದನ್ನು ಪೂರೈಸಲಾಗುತ್ತದೆ. ಹೊಟೇಲ್ ಕೊಠಡಿ ಅಥವಾ ಹೆಚ್ಚುವರಿ ಊಟವನ್ನು ಒದಗಿಸುವುದು ಬೆದರಿಕೆಯ ಮಟ್ಟ, ವಿಮಾನ ಇರುವ ವಿಮಾನ ನಿಲ್ದಾಣ ಮತ್ತು ಭದ್ರತಾ ನಿರ್ದೇಶನದ ಮೇಲೆ ಅವಲಂಬಿತವಾಗಿರುತ್ತದೆ.