Sunday, 24th November 2024

Viral Video: ಹುಲಿಯ ಬಾಯಿಗೆ ಕೈ ಹಾಕಿದ ಪಶುವೈದ್ಯರು; ಮುಂದೇನಾಯ್ತು ನೋಡಿ!

Viral Video

ಹುಲಿಯ ಹೆಸರು ಕೇಳುತ್ತಲೇ ಎಲ್ಲರೂ ಬೆಚ್ಚಿ ಬೀಳುತ್ತಾರೆ. ಆದರೆ ಇಲ್ಲೊಂದು ಹುಲಿ, ಮಾಂಸವನ್ನು ತಿನ್ನುವಾಗ ಹಲ್ಲಿಗೆ ಮೂಳೆಯ ತುಂಡೊಂದು ಸಿಕ್ಕಿ ಹಾಕಿಕೊಂಡ ಘಟನೆಯೊಂದು ನಡೆದಿದೆ. ಹುಲಿಯ ಹಲ್ಲಿನಲ್ಲಿ ಸಿಕ್ಕಿಹಾಕಿಕೊಂಡಿರುವ ಮೂಳೆಯಲು ತೆಗೆಯಲು ಪಶುವೈದ್ಯರು ಹರಸಾಹಸವನ್ನೇ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿದ್ದು, ಸಖತ್ ವೈರಲ್ (Viral Video)ಆಗಿದೆ. ಪಶುವೈದ್ಯರ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈರಲ್ ವಿಡಿಯೊದಲ್ಲಿ ಹುಲಿಯ ಚೂಪಾದ ಹಲ್ಲಿನಲ್ಲಿ ಸಿಲುಕಿಕೊಂಡಿರುವ ಮೂಳೆಯನ್ನು ತೆಗೆಯಲು ಪಶುವೈದ್ಯರ ತಂಡ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಹುಲಿಯನ್ನು ಒಂದಷ್ಟು ಜನ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಕೊನೆಗೆ ಪಶುವೈದ್ಯರು ಸುತ್ತಿಗೆಯಿಂದ ಮೂಳೆಯ ಮೇಲೆ ಬಡಿದು ಅದನ್ನು ಹೊರ ತೆಗೆದಿದ್ದಾರೆ.

ಹುಲಿಯನ್ನು ರಕ್ಷಣೆ ಮಾಡಿದ ಈ ವಿಡಿಯೊಗೆ  ಬಳಕೆದಾರರು ಸಾಕಷ್ಟು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಆದರೆ ವೀಡಿಯೊ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬುದು ತಿಳಿದುಬಂದಿಲ್ಲ. ಇದು  ಸುಮಾರು 16 ಸೆಕೆಂಡುಗಳ ವಿಡಿಯೊ ಆಗಿದ್ದು, ಈ ಪೋಸ್ಟ್ 22 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 17 ಸಾವಿರಕ್ಕೂ ಹೆಚ್ಚು ಲೈಕ್‍ಗಳು ಬಂದಿವೆ. ಈ ವಿಡಿಯೊಗೆ 400ಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ.

ಅದರಲ್ಲಿ ಒಬ್ಬ ಬಳಕೆದಾರರು ಈ ಆಘಾತಕಾರಿ ಕಾರ್ಯವನ್ನು ಹೆಚ್ಚು ನುರಿತ ತಂಡದಿಂದ ಮಾತ್ರ ಮಾಡಬಹುದು ಎಂದು ಹೇಳಿದ್ದಾರೆ. ವೈದ್ಯರು ಹುಚ್ಚು ಕೆಲಸ ಮಾಡುತ್ತಿದ್ದಾರೆ ಎಂದು ಕೆಲವರು ಹೇಳಿದರೆ, ಇತರರು ಹುಲಿಯ ಬಾಯಿಗೆ ಕೈ ಹಾಕುವುದು ಸಹ ದೊಡ್ಡ ಕೆಲಸವೆಂದು ಹುಲಿಗೆ ಸಹಾಯ ಮಾಡಿದ ಪಶುವೈದ್ಯರನ್ನು ಹೆಚ್ಚಿನ ಬಳಕೆದಾರರು ಹೊಗಳಿದ್ದಾರೆ.