Saturday, 23rd November 2024

Gurpatwant Singh Pannun: ಜಸ್ಟಿನ್‌ ಟ್ರುಡೋ ಜತೆ ಸಂಪರ್ಕ ಇರೋದಾಗಿ ಒಪ್ಪಿಕೊಂಡ ಖಲಿಸ್ತಾನಿ ಉಗ್ರ ಪನ್ನುನ್‌

Pro-Khalistani Pannun admits contact with Trudeau amid India-Canada tensions

ನವದೆಹಲಿ: ಖಲಿಸ್ತಾನಿ ಮುಖಂಡರಿಗೆ ಬೆಂಬಲ ನೀಡುತ್ತಿರುವ ವಿಚಾರವಾಗಿ ಕೆನಡಾ ಮತ್ತು ಭಾರತದ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆಯೇ ತಮಗೆ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ(Justin Trudeau) ಜತೆ ನಂಟು ಇರುವುದಾಗಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್(Gurpatwant Singh Pannun) ಒಪ್ಪಿಕೊಂಡಿದ್ದಾನೆ.

ಸಿಖ್ಸ್ ಫಾರ್ ಜಸ್ಟಿಸ್ (SFJ) ಗುಂಪಿನ ಸಾಮಾನ್ಯ ಸಲಹೆಗಾರ ಗುರುಪತ್ವಂತ್ ಸಿಂಗ್ ಪನ್ನುನ್‌ನನ್ನು ಈಗಾಗಲೇ ಭಾರತ ಸರ್ಕಾರ ಭಯೋತ್ಪಾದಕ ಎಂದು ಘೋಷಿಸಿದೆ. ಕೆಲವು ದಿನಗಳ ಹಿಂದೆ ಕೆನಡಾದ ನೆಲದಲ್ಲಿ ಭಾರತ ಬೇಹುಗಾರಿಕೆ ನಡೆಸುತ್ತಿದೆ ಎಂದು ಕೆನಡಾ ಆರೋಪವನ್ನು ಎತ್ತಿಹಿಡಿದಿರುವ ಪನ್ನುನ್‌, ಅವರು ಕಳೆದ ಹಲವಾರು ವರ್ಷಗಳಿಂದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಕಚೇರಿಯೊಂದಿಗೆ ಸಂವಹನ ನಡೆಸುವುದನ್ನು ಒಪ್ಪಿಕೊಂಡಿದ್ದಾನೆ.

ರಾಯಲ್ ಕೆನಡಿಯನ್ ಮೌಂಟೆಡ್ ಪೋಲಿಸ್ (RCMP) ಕಮಿಷನರ್ ಮೈಕ್ ಡುಹೆಮ್ ಅವರ ಇತ್ತೀಚಿನ ಆರೋಪಗಳಿಗೆ ಅವರ ಪ್ರತಿಕ್ರಿಯಿಸಿದ ಪನ್ನುನ್‌, ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯು ಕಳೆದ ಎರಡು ಮೂರು ವರ್ಷಗಳಿಂದ ಪ್ರಧಾನಿ ಕಾರ್ಯಾಲಯದೊಂದಿಗೆ ಸಂವಹನ ನಡೆಸುತ್ತಿದ್ದು, ಎಲ್ಲಾ ಗೂಢಚಾರಿಕೆ ಜಾಲಗಳ ವಿವರಗಳನ್ನು ನೀಡುತ್ತಿದೆ. ಕೆನಡಾದ ಸರ್ಕಾರಕ್ಕೆ ಮಾಹಿತಿ ನೀಡಿದ ವರ್ಷಗಳ ನಂತರ, PM ಟ್ರುಡೊ ಈ ಬಗ್ಗೆ ಧ್ವನಿ ಎತ್ತಿರುವುದು ಸಕಾರಾತ್ಮಕ ಮುನ್ಸೂಚನೆಯಾಗಿದೆ ಎಂದು ತಿಳಿಸಿದ್ದಾನೆ.

ಕೆನಡಾದಿಂದ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿರುವುದ ಕೇವಲ ಪ್ರಾರಂಭ ಅಷ್ಟೇ. ವ್ಯಾಂಕೋವರ್ ಮತ್ತು ಟೊರೊಂಟೊದಲ್ಲಿರುವ ಭಾರತೀಯ ದೂತಾವಾಸಗಳನ್ನು ಶಾಶ್ವತವಾಗಿ ಮುಚ್ಚುವ ಅಗತ್ಯವಿದೆ ಎಂದು ನಾವು ಭಾವಿಸುತ್ತೇವೆ. ಅವರ ಖಾಲಿ ಹುದ್ದೆಗಳನ್ನು ತುಂಬಲು ಭಾರತ ಇತರ ರಾಜತಾಂತ್ರಿಕರನ್ನು ಕಳುಹಿಸುವುದರಿಂದ ಗೂಢಚಾರಿಕೆ ಜಾಲವನ್ನು ಕೆಡವಲು ಹೋಗುತ್ತಿಲ್ಲ. ಇದು ಕೆನಡಾದ ಸಾರ್ವಭೌಮತ್ವಕ್ಕೆ ನೇರ ಸವಾಲಾಗಿದೆ.

ಈ ಸುದ್ದಿಯನ್ನೂ ಓದಿ: India Canada Row : ಭಾರತಕ್ಕೆ ಬೆದರಿದ ಕೆನಡಾ; ನಿಜ್ಜರ್‌ ಕೊಲೆಯಲ್ಲಿ ಭಾರತ ಭಾಗಿಯಾಗಿದ್ದಕ್ಕೆ ಸಾಕ್ಷಿಗಳೇ ಇಲ್ಲ ಎಂದ ಪ್ರಧಾನಿ ಟ್ರುಡೊ!