ಶ್ರೀನಗರ: ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನ(Jammu and Kashmir statehood)ವನ್ನು ಪುನರ್‌ಸ್ಥಾಪಿಸಲು ಕೋರಿ ಸುಪ್ರೀಂ ಕೋರ್ಟ್(Supreme Court)ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿಗಳ ತುರ್ತು ವಿಚಾರಣೆ ನಡೆಸಲು ಕೋರ್ಟ್ ಸಮ್ಮತಿ ಸೂಚಿಸಿದೆ. ನ್ಯಾಯವಾದಿ ಗೋಪಾಲ್ ಶಂಕರನಾರಾಯಣ ಅವರು ಈ ಅರ್ಜಿಯನ್ನು ಸಲ್ಲಿಸಿದ್ದು, ಈ ವಿಷಯದ ಕುರಿತು ತ್ವರಿತ ಕ್ರಮದ ಅಗತ್ಯವನ್ನು ಉಲ್ಲೇಖಿಸಿ, ನಿಗದಿತ ಕಾಲಮಿತಿಯೊಳಗೆ ಪ್ರದೇಶದ ರಾಜ್ಯತ್ವವನ್ನು ಮರುಸ್ಥಾಪಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಗೋಪಾಲ್ ಶಂಕರನಾರಾಯಣ್ ಅವರ ಮನವಿಯನ್ನು ಪುಸ್ಕರಿಸಿದ ಕೋರ್ಟ್ ಶೀಘ್ರವೇ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ. ಶಂಕರನಾರಾಯಣನ್ ಮನವಿಯನ್ನು ಪರಿಗಣಿಸಲು ಸಿಜೆಐ ಚಂದ್ರಚೂಡ್ ಅವರು ಒಪ್ಪಿಕೊಂಡರು. ಜಮ್ಮು-ಕಾಶ್ಮೀರದಲ್ಲಿ ರಾಜ್ಯ ಸ್ಥಾನಮಾನ ಮರುಸ್ಥಾಪಿಸದಿರುವುದು ಸಂವಿಧಾನವನ್ನು ಉಲ್ಲಂಘನೆ ಎಂದು ಅರ್ಜಿದಾರರು ವಾದಿಸಿದರು. ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ರಾಜ್ಯ ಸ್ಥಾನಮಾನ ಮರುಸ್ಥಾಪನೆಗೆ ಯಾವುದೇ ಅಡ್ಡಿ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ.
Supreme Court agrees to list for hearing an application seeking direction for restoration of the statehood of Jammu and Kashmir within two months.
— ANI (@ANI) October 17, 2024
Advocate Gopal Shankarnarayan mentioned the application for urgent listing. pic.twitter.com/MIp1rx6SpH
2019ರ ಆಗಸ್ಟ್‌ನಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ ನಂತದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸ್ಥಾನಮಾನ ಕಳೆದುಕೊಂಡಿತ್ತು. ರಾಜ್ಯ ಪುನರ್ ವಿಂಗಡಣೆ ಮಾಡಿದ್ದ ಮೋದಿ ಸರ್ಕಾರ, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ, ಲಡಾಖ್ ಪ್ರಾಂತ್ಯವನ್ನು ವಿಭಜಿಸಿ ಅದಕ್ಕೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಿತ್ತು. ಈ ಮೂಲಕ ಒಂದು ರಾಜ್ಯ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಹೊಂದಿದ್ದವು.
ಸದ್ಯದ ಮಟ್ಟಿಗೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿದ್ದರೂ ವಿಧಾನಸಭೆ ಹೊಂದುವ ಅವಕಾಶ ಹೊಂದಿದೆ. ಆದರೆ, ಲಡಾಖ್‌ಗೆ ಆ ಸೌಲಭ್ಯ ಇಲ್ಲ. ಲಡಾಖ್‌ನಲ್ಲಿ ಸ್ಥಳೀಯ ಸ್ವಾಯತ್ತ ಸಂಸ್ಥೆಗಳು ಕೇಂದ್ರ ಸರ್ಕಾರದ ಕಣ್ಗಾವಲಿನಲ್ಲಿ ಕೆಲಸ ಮಾಡಬೇಕಿದೆ. 2019ರ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸ್ಥಾನಮಾನ ಕಳೆದುಕೊಂಡಿತ್ತು. ರಾಜ್ಯ ಪುನರ್ ವಿಂಗಡಣೆ ಮಾಡಿದ್ದ ಮೋದಿ ಸರ್ಕಾರ, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ, ಲಡಾಖ್ ಪ್ರಾಂತ್ಯವನ್ನು ವಿಭಜಿಸಿ ಅದಕ್ಕೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಿತ್ತು. ಈ ಮೂಲಕ ಒಂದು ರಾಜ್ಯ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಹೊಂದಿದ್ದವು.
ಸದ್ಯದ ಮಟ್ಟಿಗೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿದ್ದರೂ ವಿಧಾನಸಭೆ ಹೊಂದುವ ಅವಕಾಶ ಹೊಂದಿದೆ. ಆದರೆ, ಲಡಾಖ್‌ಗೆ ಆ ಸೌಲಭ್ಯ ಇಲ್ಲ. ಲಡಾಖ್‌ನಲ್ಲಿ ಸ್ಥಳೀಯ ಸ್ವಾಯತ್ತ ಸಂಸ್ಥೆಗಳು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರಲಿದೆ.
ನಿನ್ನೆಯಷ್ಟೇ ಈ ಬಗ್ಗೆ ರಾಹುಲ್ ಗಾಂಧಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನರಿಂದ ಪ್ರಜಾಪ್ರಭುತ್ವವನ್ನು ಕಸಿದುಕೊಳ್ಳಲಾಗಿದೆ. ರಾಜ್ಯ ಸ್ಥಾನಮಾನವನ್ನು ಸಂಪೂರ್ಣವಾಗಿ ಮರುಸ್ಥಾಪಿಸುವವರೆಗೆ ನಮ್ಮ ಹೋರಾಟವನ್ನು ಮುಂದುವರೆಸುವ ಪ್ರತಿಜ್ಞೆ ಮಾಡುತ್ತಿದ್ದೇವೆ ಎಂದು ರಾಹುಲ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Citizenship Act: ಪೌರತ್ವ ತಿದ್ದುಪಡಿ ಕಾಯ್ದೆ ಸೆಕ್ಷನ್ 6A ಸಾಂವಿಧಾನಿಕ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ