Sunday, 24th November 2024

Ranji Trophy: ಕೇರಳ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ

ಬೆಂಗಳೂರು: ಇಲ್ಲಿನ ಆಲೂರು ಕ್ರೀಡಾಂಗಣದಲ್ಲಿ ನಾಳೆಯಿಂದ ಆರಂಭವಾಗುವ 2024-25ರ ರಣಜಿ ಟ್ರೋಫಿಯ(Ranji Trophy), ಕೇರಳ ವಿರುದ್ಧ(Karnataka vs Kerala) ಎಲೈಟ್ ‘ಸಿ’ ಗುಂಪಿನ ಪಂದ್ಯಕ್ಕೆ ರಾಜ್ಯ ಕ್ರಿಕೆಟ್‌ ಸಂಸ್ಥೆ 15 ಸದಸ್ಯರ ತಂಡವನ್ನು(karnataka team) ಪ್ರಕಟಿಸಿದೆ. ಮಧ್ಯಪ್ರದೇಶ ವಿರುದ್ಧ ಆಡಿದ ಮೊದಲ ಪಂದ್ಯ ಡ್ರಾ ಗೊಂಡಿತ್ತು. ಕೇರಳ ವಿರುದ್ಧ ಗೆಲುವಿನ ಗೆಲುವಿನ ನಿರಿಕ್ಷೆಯೊಂದಿಗೆ ಕಣಕ್ಕಿಳಿಯುವುದು ಮಯಾಂಕ್ ಅಗರ್ವಾಲ್‌ ಯೋಜನೆ.

ಕೇರಳ ವಿರುದ್ಧದ ಪಂದ್ಯಕ್ಕೆ ಪ್ರಕಟಗೊಂಡ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಮೊದಲ ಪಂದ್ಯಕ್ಕೆ ತಂಡದಲ್ಲಿದ್ದ ಆಟಗಾರರೇ ಮುಂದುವರಿದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ ಆಡುವ ಬಯಕೆ ವ್ಯಕ್ತಪಡಿಸಿದ್ದ ಸಂಜು ಸ್ಯಾಮ್ಸನ್‌ ಕೇರಳ ತಂಡದ ಪರ ಆಡಲಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಶತಕ ಸಿಡಿಸಿದ್ದರು.

ತಂಡ: ಮಯಾಂಕ್ ಅಗರ್‌ವಾಲ್ (ನಾಯಕ), ನಿಕಿನ್ ಜೋಸ್, ದೇವದತ್ ಪಡಿಕ್ಕಲ್, ಸ್ಮರಣ್ ಪಾಂಡೆ, ಶ್ರೇಯಸ್ ಗೋಪಾಲ್, ಸುಜಯ್, ಹಾರ್ದಿಕ್ ರಾಜ್, ವೈಶಾಖ್ ವಿಜಯ್‌ಕುಮಾರ್, ಕೌಶಿಕ್, ಲುತ್, ಮೊಹಿನ್, ವಿದ್ಯಾಧರ್, ಕಿಶನ್, ಅಭಿಲಾಷ್.

ಡೆಲ್ಲಿಗೆ ಬದಾನಿ ಮುಖ್ಯ ಕೋಚ್‌

ನವದೆಹಲಿ: ಭಾರತದ ಮಾಜಿ ಎಡಗೈ ಬ್ಯಾಟರ್ ಹೇಮಂಗ್ ಬದಾನಿ(Hemang Badani) ಅವರನ್ನು ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡ ಮುಂದಿನ ಆವೃತ್ತಿಯ ಐಪಿಎಲ್‌ಗೆ(IPL 2025) ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಕೆಲ ದಿನಗಳ ಹಿಂದೆಯೇ ಬದಾನಿ ಕೋಚ್‌ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅಧಿಕೃತಗೊಂಡಿದೆ. ಗುರುವಾರ ಫ್ರಾಂಚೈಸಿ ಬದಾನಿ ಅವರನ್ನು ಕೋಚ್‌ ಮಾಡಿದ ಸಂಗತಿಯನ್ನು ಅಧಿಕೃತಗೊಳಿಸಿದೆ. ಭಾರತದ ಮಾಜಿ ಬ್ಯಾಟರ್ ವೇಣುಗೋಪಾಲ್ ರಾವ್(Venugopal Rao) ಅವರನ್ನು ತಂಡದ ಹೊಸ ಕ್ರಿಕೆಟ್ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ಬದಾನಿ ಈ ಹಿಂದೆ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಬ್ರಿಯಾನ್ ಲಾರಾರೊಂದಿಗೆ ಕೆಲಸ ಮಾಡಿದ್ದರು. ತಮಿಳುನಾಡಿನ ಮಾಜಿ ಬ್ಯಾಟರ್ ಬದಾನಿ 2001-2004ರ ನಡುವೆ 4 ಟೆಸ್ಟ್ ಹಾಗೂ 40 ಏಕದಿನ ಪಂದ್ಯವನ್ನಾಡಿದ್ದಾರೆ. ಕಳೆದ ಆವೃತ್ತಿ ತನಕ ಆಸೀಸ್‌ ತಂಡದ ಮಾಜಿ ದಿಗ್ಗಜ ರಿಕಿ ಪಾಂಟಿಂಗ್‌ ಡೆಲ್ಲಿ ತಂಡದ ಕೋಚ್‌ ಆಗಿದ್ದರು. ಇವರ ಮಾರ್ಗದರ್ಶನದಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಇದೇ ಕಾರಣಕ್ಕೆ ಅವರನ್ನು ಕೋಚ್‌ ಹುದ್ದೆಯಿಂದ ಕೆಳಗಿಳಿಸಲಾಗಿತ್ತು.