ಸಾವು (Death) ಯಾರಿಗೆ, ಯಾವಾಗ ಬೇಕಾದರೂ ಬರಬಹುದು. ಇದರ ರಹಸ್ಯವನ್ನು (after death secret) ಭೇದಿಸುವುದು ಈವರೆಗೆ ವಿಜ್ಞಾನಿಗಳಿಗೂ ಸಾಧ್ಯವಾಗಿಲ್ಲ.ಹೀಗಾಗಿ ಸತ್ತ ಅನಂತರ ಏನಾಗುತ್ತದೆ ಎಂಬ ಪ್ರಶ್ನೆಗೆ ಯಾರ ಬಳಿಯೂ ಸರಿಯಾದ ಉತ್ತರ ಸಿಗುವುದಿಲ್ಲ. ಸಾವಿನ ಕುರಿತಾಗಿ ಕೆಲವೊಬ್ಬರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಇದು ಸಾಕಷ್ಟು ವೈರಲ್ (Viral News) ಆಗುವುದು ಇದೆ. ಅಮೆರಿಕದ (US Women) ಮಹಿಳೆಯೊಬ್ಬರು ಇದೀಗ ತಾವು 11 ನಿಮಿಷಗಳ ಕಾಲ ಮೃತಪಟ್ಟು ಸ್ವರ್ಗಕ್ಕೆ (Heaven) ಹೋಗಿ ಬಂದೆ ಎಂದು ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕನ್ಸಾಸ್‌ನ ವಿಚಿತಾದ 68 ವರ್ಷದ ಷಾರ್ಲೆಟ್ ಹೋಮ್ಸ್ 2019ರಲ್ಲಿ ಈ ಅನುಭವವನ್ನು ಪಡೆದಿರುವುದಾಗಿ ಹೇಳಿದ್ದಾರೆ. ರಕ್ತದೊತ್ತಡದಲ್ಲಿ ಹಠಾತ್ ಕುಸಿತದಿಂದಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಪ್ರಯತ್ನಿಸಿದರೂ ಅವರು ಪ್ರಜ್ಞೆಯನ್ನು ಕಳೆದುಕೊಂಡಿದ್ದರು. ಸುಮಾರು 11 ನಿಮಿಷಗಳ ಕಾಲ ಅವರು ಸತ್ತು ಹೋಗಿದ್ದರು. ಸಾವನ್ನು ನಿರ್ಧರಿಸಲು ವೈದ್ಯರು ಸಾಮಾನ್ಯವಾಗಿ ಐದು ನಿಮಿಷ ಕಾಯುತ್ತಾರೆ. ಆದರೆ ಇದು ಅದಕ್ಕಿಂತ ಎರಡು ಪಟ್ಟು ಹೆಚ್ಚಾಗಿತ್ತು.
ಈ ಅವಧಿಯಲ್ಲಿ ತಾವು “ಸ್ವರ್ಗಕ್ಕೆ” ಹೋಗಿರುವುದಾಗಿ ಹೊಮ್ಸ್ ಹೇಳಿಕೊಂಡಿದ್ದಾರೆ. ಅಲ್ಲಿ ಅವರು ದೇವತೆಗಳು ಮತ್ತು ತಮ್ಮ ಕುಟುಂಬ ಸದಸ್ಯರನ್ನು ಭೇಟಿಯಾಗಿರುವುದಾಗಿ ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ತಮ್ಮ ಅನುಭವವನ್ನು ಹೇಳಿಕೊಂಡಿರುವ ಅವರು, ನಾನು ನನ್ನ ದೇಹಕ್ಕಿಂತ ಮೇಲಿದ್ದೆ. ಎದೆಯಲ್ಲಿ ಸಂಕುಚಿತ ಭಾವನೆ ಉಂಟಾಗಿತ್ತು. ನಾನು ಅಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದೆ. ಬಳಿಕ ಸುಂದರವಾದ ಹೂವುಗಳ ಸುವಾಸನೆ ತಿಳಿಯಿತು. ಸಂಗೀತವನ್ನು ಕೇಳಿದೆ. ನಾನು ಕಣ್ಣು ತೆರೆದಾಗ ನಾನು ಸ್ವರ್ಗದಲ್ಲಿದ್ದೇನೆ ಎನ್ನುವ ಭಾವನೆ ಉಂಟಾಗಿತ್ತು ಎಂದು ಅವರು ಹೇಳಿದ್ದಾರೆ.
ಮರಗಳು, ಹುಲ್ಲುಗಳು ಸಂಗೀತದ ನಾದಕ್ಕೆ ತೂಗಾಡುತ್ತಿತ್ತು ಎಂದು ಅವರು ಹೇಳಿದ್ದಾರೆ. ನಾನು ನನ್ನ ತಾಯಿ, ತಂದೆ, ತಂಗಿಯನ್ನು ನೋಡಿದೆ. ನನ್ನ ಹಿಂದೆ ಕುಟುಂಬ ಸದಸ್ಯರು ನಿಂತಿದ್ದರು. ಸಂತರನ್ನು ನೋಡಿದೆ. ಯಾರಿಗೂ ವಯಸ್ಸಾದಂತೆ ಕಾಣಲಿಲ್ಲ. ಎಲ್ಲರೂ ಆರೋಗ್ಯವಾಗಿದ್ದರು, ಯಾರೂ ಕನ್ನಡಕ ಧರಿಸಿರಲಿಲ್ಲ ಎಂಬುದಾಗಿ ಅವರು ನೆನಪಿಸಿಕೊಂಡಿದ್ದಾರೆ.
ಐದೂವರೆ ತಿಂಗಳ ಗರ್ಭಿಣಿಯಾಗಿದ್ದಾಗ ಕಳೆದುಹೋದ ಮಗುವನ್ನು ನೋಡಿದೆ. ಈ ವೇಳೆ ದೇವರು ನನ್ನನ್ನು ನರಕಕ್ಕೆ ಕೊಂಡೊಯ್ದಿದ್ದರು ಎಂದು ಅವರು ಹೇಳಿದ್ದಾರೆ. ನಾನು ಕೆಳಗೆ ನೋಡಿದೆ. ವಾಸನೆ, ಕೊಳೆತ ಮಾಂಸ ಕಾಣುತ್ತಿತ್ತು. ಸ್ವರ್ಗದ ಸೌಂದರ್ಯ ನೋಡಿದ ಅನಂತರ ಇದು ಅಸಹನೀಯವಾಗಿತ್ತು ಎಂದು ಹೋಮ್ಸ್ ಹೇಳಿದರು.
ಬಳಿಕ ನನ್ನನ್ನು ಯಾರೋ ತೀವ್ರವಾಗಿ ಎಳೆದಂತೆ ಆಯಿತು. ಮತ್ತೆ ಆಸ್ಪತ್ರೆಯ ಹಾಸಿಗೆಯಲ್ಲಿ ಎಚ್ಚರಗೊಂಡೆ. ಕೇವಲ ಎರಡು ವಾರಗಳ ಚಿಕಿತ್ಸೆಯ ಬಳಿಕ ಮನೆಗೆ ಮರಳಿದೆ ಎಂದು ಅವರು ತಿಳಿಸಿದ್ದಾರೆ.
ಈ ಘಟನೆ ತಮ್ಮ ಬದುಕಿನಲ್ಲಿ ಅತ್ಯಂತ ಮಹತ್ವದ್ದು ಎಂದು ಹೇಳಿರುವ ಷಾರ್ಲೆಟ್, ಜನರಿಗೆ ಬದುಕಲು ಭರವಸೆ ಬೇಕು. ಸಾವಿನ ನಂತರ ಏನಾಗುತ್ತದೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಲು ಬಯಸುತ್ತಾರೆ. ಅಲ್ಲದೇ ನಾವು ಬದುಕಿರುವ ಜಗತ್ತಿನಲ್ಲಿ ಎಲ್ಲವೂ ಸರಿಯಾಗಿದೆ ಎಂದು ತಿಳಿದುಕೊಳ್ಳಲು ಬಯಸುತ್ತಾರೆ. ಇದು ನಮ್ಮ ಊಹೆಗೂ ಮೀರಿದ್ದು. ‘ಸ್ವರ್ಗ ಎಂಬುದು ನಿಜ’ ಎಂದು ಈಗ ನಾನು ಖಚಿತವಾಗಿ ಹೇಳಬಲ್ಲೆ ಎನ್ನುತ್ತಾರೆ.
Physical Abuse: ಲೈಂಗಿಕ ಕ್ರಿಯೆಗೆ ನಿರಾಕರಿಸಿದ 19 ಯಾಜಿದಿ ಹುಡುಗಿಯರನ್ನು ಸಜೀವ ದಹಿಸಿದ್ದ ಐಸಿಸ್ ರಕ್ಕಸರು!
ಈ ಅನುಭವದ ಉದ್ದಕ್ಕೂ ಷಾರ್ಲೆಟ್ ಪತಿ ಡ್ಯಾನಿ ಜೊತೆಗಿದ್ದರು. ಪ್ರಜ್ಞಾಹೀನಳಾದ ಷಾರ್ಲೆಟ್ ಹೂವುಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದ ಕ್ಷಣವನ್ನು ಅವರು ನೆನಪಿಸಿಕೊಂಡಿದ್ದಾರೆ. ಆಗ ನಾನು ಸುತ್ತಲೂ ನೋಡಿದೆ. ಆ ಕೋಣೆಯಲ್ಲಿ ಯಾವುದೇ ಹೂವುಗಳಿರಲಿಲ್ಲ. ಆಗ ಅವಳು ಈ ಜಗತ್ತಿನಲ್ಲಿಲ್ಲ ಎಂದು ನನಗೆ ತಿಳಿಯಿತು ಎಂದಿದ್ದಾರೆ ಡ್ಯಾನಿ.