ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳು, ದೀರ್ಘಕಾಲದ ಕಾಯಿಲೆಗಳು ಹೆಚ್ಚಿನ ಜನರನ್ನು ಕಾಡುತ್ತಿವೆ. ಅದರಲ್ಲೂ ಮುಖ್ಯವಾಗಿ ಕ್ಯಾನ್ಸರ್ (Cancer), ಹೃದ್ರೋಗ (heart disease), ಮಧುಮೇಹ (diabetes) ಸಣ್ಣ ವಯಸ್ಸಿನಲ್ಲೇ ಬಾಧಿಸತೊಡಗುತ್ತಿದೆ. ಇದರ ಅಪಾಯವನ್ನು ಕಡಿಮೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ (WHO Guidelines) ಕೆಲವೊಂದು ಕ್ರಮಗಳನ್ನು ಸೂಚಿಸಿದೆ.
ಸಾಂಕ್ರಾಮಿಕವಲ್ಲದ ಮತ್ತು ದೀರ್ಘಕಾಲದ ಕಾಯಿಲೆಗಳಲ್ಲಿ ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್,ಶ್ವಾಸಕೋಶದ ಕಾಯಿಲೆ, ಆಸ್ತಮಾ ಮತ್ತು ಮಧುಮೇಹ ಸೇರಿದೆ. ಈ ಕಾಯಿಲೆಗಳು ಸಾಮಾನ್ಯವಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿನ ಜನರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ.
ಸಾಂಕ್ರಾಮಿಕವಲ್ಲದ ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಸುಮಾರು 31.4 ಕೋಟಿ ಜನರು ಸಾವನ್ನಪ್ಪುತ್ತಿದ್ದಾರೆ.
ಸಾಂಕ್ರಾಮಿಕವಲ್ಲದ ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಸುಮಾರು 17 ಶತಕೋಟಿ ಜನರ ಸಾವು 70 ವರ್ಷಕ್ಕಿಂತ ಮುಂಚೆಯೇ ಉಂಟಾಗುತ್ತಿದೆ. ಈ ಅಕಾಲಿಕ ಮರಣಗಳ ಪ್ರಮಾಣ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಶೇ. 86ರಷ್ಟಿದೆ ಎಂದು ಅಂದಾಜಿಸಲಾಗಿದೆ.
ಅನಾರೋಗ್ಯಕರ ಆಹಾರ, ದೈಹಿಕ ನಿಷ್ಕ್ರಿಯತೆ, ತಂಬಾಕು ಹೊಗೆಗೆ ಒಡ್ಡಿಕೊಳ್ಳುವುದು, ಮದ್ಯಪಾನ ಅಥವಾ ವಾಯು ಮಾಲಿನ್ಯದ ಕಾರಣದಿಂದ ಮಕ್ಕಳು, ವಯಸ್ಕರು ಮತ್ತು ವೃದ್ಧರು ಅನಾರೋಗ್ಯಕ್ಕೆ ಕಾರಣವಾಗುವ ಅಪಾಯ ಹೆಚ್ಚಾಗಿದೆ. ಅನಾರೋಗ್ಯಕರ ಆಹಾರ, ದೈಹಿಕ ಚಟುವಟಿಕೆಯ ಕೊರತೆ ಜನರಲ್ಲಿ ರಕ್ತದೊತ್ತಡ, ಮಧುಮೇಹ, ಬೊಜ್ಜು ಮೊದಲಾದ ಕಾಯಿಲೆಗಳಿಗೆ ಕಾರಣವಾಗುತ್ತಿದೆ.
ಏನು ಕಾರಣ?
ತಂಬಾಕು ಸೇವನೆ, ದೈಹಿಕ ನಿಷ್ಕ್ರಿಯತೆ, ಅನಾರೋಗ್ಯಕರ ಆಹಾರ, ಮದ್ಯಪಾನ, ಧೂಮಪಾನದಿಂದ ಪ್ರತಿ ವರ್ಷ 8 ದಶಲಕ್ಷಕ್ಕೂ ಹೆಚ್ಚು ಸಾವು ಸಂಭವಿಸುತ್ತಿದೆ. ವರ್ಷಕ್ಕೆ ಸರಿಸುಮಾರು 1.8 ಕೋಟಿ ಸಾವಿಗೆ ರಕ್ತದೊತ್ತಡ ಕಾರಣವಾಗುತ್ತಿದೆ. ಆಲ್ಕೋಹಾಲ್ ಬಳಕೆಯಿಂದ ಸುಮಾರು 3 ಕೋಟಿ ಜನರು ಸಾವನ್ನಪ್ಪುತ್ತಿದ್ದರೆ, 50 ಲಕ್ಷಕ್ಕಿಂತ ಹೆಚ್ಚು ಮಂದಿ ಕ್ಯಾನ್ಸರ್ನಿಂದ ಮೃತಪಡುತ್ತಿದ್ದಾರೆ. ವಾರ್ಷಿಕವಾಗಿ 8,30,000 ಸಾವಿಗೆ ಸಾಕಷ್ಟು ದೈಹಿಕ ಚಟುವಟಿಕೆ ಇಲ್ಲದಿರುವುದೇ ಕಾರಣ ಎನ್ನಲಾಗಿದೆ.
ಜೀರ್ಣಕ್ರಿಯೆಗೆ ಸಂಬಂಧಿಸಿದ ಕಾಯಿಲೆಗಳಾದ ಅಧಿಕ ರಕ್ತದೊತ್ತಡ, ಬೊಜ್ಜು, ಮಧುಮೇಹವು ಜಾಗತಿಕವಾಗಿ ಶೇ. 19ರಷ್ಟು ಸಾವಿಗೆ ಕಾರಣವಾಗುತ್ತಿದೆ. ಪರಿಸರ ಮಾಲಿನ್ಯದಿಂದಾಗಿ ಜಾಗತಿಕವಾಗಿ 6.7 ಕೋಟಿ ಜನರು ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಪಾರ್ಶ್ವವಾಯು, ಹೃದ್ರೋಗ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಮತ್ತು ಶ್ವಾಸಕೋಶದ ಕ್ಯಾನ್ಸರ್ ಸೇರಿವೆ.
Yoga Role In Fertility: ಸಂತಾನ ಭಾಗ್ಯದಲ್ಲಿ ಯೋಗಾಭ್ಯಾಸದ ಪಾತ್ರ ಮಹತ್ವದ್ದು
Major risk factors that lead to noncommunicable diseases – such as heart disease, cancer, diabetes & respiratory disease:
— World Health Organization (WHO) (@WHO) October 16, 2024
🚬 tobacco
🍟 unhealthy diet
🍻 harmful use of alcohol
🛋️ physical inactivity
🏭 air pollution
More https://t.co/3YbwZWp9UK#BeatNCDs pic.twitter.com/3Up704stpC
ಏನು ಪರಿಹಾರ?
ಸಾಂಕ್ರಾಮಿಕವಲ್ಲದ ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಕೆಲವೊಂದು ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದೆ.
ಇದರಲ್ಲಿ ಕಾಯಿಲೆಗಳನ್ನು ಶೀಘ್ರದಲ್ಲಿ ಪತ್ತೆಹಚ್ಚುವುದು, ಸಕಾಲಿಕ ತಪಾಸಣೆ, ಚಿಕಿತ್ಸೆ ನೀಡುವುದು ಸೇರಿದೆ. ಇದಕ್ಕಾಗಿ ಆರೋಗ್ಯಕರ ಆಹಾರ ಸೇವನೆ ಮಾಡಬೇಕು, ಮದ್ಯಪಾನವನ್ನು ಕಡಿಮೆ ಮಾಡಬೇಕು, ಧೂಮಪಾನವನ್ನು ನಿಲ್ಲಿಸಬೇಕು, ನಿರಂತರ ದೈಹಿಕ ಚಟುವಟಿಕೆ ನಡೆಸಬೇಕು, ವಾಯುಮಾಲಿನ್ಯಕ್ಕೆ ನಮ್ಮನ್ನು ನಾವು ಒಡ್ಡದಂತೆ ಜಾಗರೂಕತೆ ವಹಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.