Sunday, 24th November 2024

Wonders of the Human Body : ಈ ವ್ಯಕ್ತಿಗಿತ್ತು ಮೂರು ಶಿಶ್ನಗಳು; ವಿಷಯ ಗೊತ್ತಾಗಿದ್ದು ಸತ್ತ ಮೇಲೆ!

Wonders of the Human Body

ಬೆಂಗಳೂರು: ಮನುಷ್ಯನಿಗೆ ಒಂದು ಜನನಾಂಗ ಇರುತ್ತದೆ. ಅಪರೂಪದ ಪ್ರಕರಣಗಳಲ್ಲಿ 2 ಅಂಗವೂ ಇದ್ದದ್ದಿದೆ. ಆದರೆ, ಬ್ರಿಟನ್‌ನ ವ್ಯಕ್ತಿಯೊಬ್ಬರಿಗೆ ಒಂದಲ್ಲ, ಎರಡಲ್ಲ ಮೂರು ಶಿಶ್ನಗಳಿದ್ದವು. (Wonders of the Human Body) ಅಚ್ಚರಿ ಎಂದರೆ ಆ ವ್ಯಕ್ತಿಗೆ ಅದು ಗೊತ್ತೇ ಇರಲಿಲ್ಲ. ಸತ್ತ ಮೇಲೆ ಆ ವ್ಯಕ್ತಿಯ ದೇಹವನ್ನು ವೈದ್ಯಕೀಯ ಸಂಶೋಧನೆಗೆ ಬಳಸಿದಾಗಲೇ ವಿಷಯ ಬಹಿರಂಗೊಂಡಿರುವುದು.

ಸಂಶೋಧನಾ ಕಾರ್ಯಕ್ಕಾಗಿ ವಿಜ್ಞಾನಕ್ಕೆ ದೇಹವನ್ನು ದಾನ ಮಾಡಿದ ವ್ಯಕ್ತಿಯ ಬಳಿ ಮೂರು ಶಿಶ್ನಗಳಿವೆ ಎಂದು ಕಂಡು ಯುಕೆಯ ವೈದ್ಯರು ನಿಜವಾಗಿಯೂ ಅಚ್ಚರಿಗೆ ಒಳಗಾಗಿದ್ದಾರೆ. ಆದರೆ ಹೊರಗಡೆ ಕಾಣಿಸುತ್ತಿದ್ದದ್ದು ಒಂದೇ ಆಗಿದ್ದ ಕಾರಣ ವ್ಯಕ್ತಿಗೆ ವಿಷಯ ಗೊತ್ತಾಗಿರಲಿಲ್ಲ. ಮೂರು ಶಿಶ್ನಗಳು ಅತ್ಯಂತ ಅಪರೂಪದ ಸ್ಥಿತಿಯಾಗಿದ್ದು, ಇದನ್ನು ಟ್ರೈಫಾಲಿಯಾ ಎಂದು ಕರೆಯಲಾಗುತ್ತದೆ. ಮಾನವರಲ್ಲಿ ಮೊದಲ ಪ್ರಕರಣ ನಾಲ್ಕು ವರ್ಷಗಳ ಹಿಂದೆ ಇರಾಕ್‌ನ ಮೂರು ತಿಂಗಳ ಗಂಡು ಮಗುವಿನಲ್ಲಿ ಪತ್ತೆಯಾಗಿತ್ತು.

ಈ ಸಂಶೋಧನೆಯನ್ನು ಜರ್ನಲ್ ಆಫ್ ಮೆಡಿಕಲ್ ಕೇಸ್ ರಿಪೋರ್ಟ್ಸ್‌ನಲ್ಲಿ ಪ್ರಕಟಿಸಲಾಗಿದ್ದು ಇದು ಮಾನವರಲ್ಲಿ ದಾಖಲಾದ ಟ್ರೈಫಾಲಿಯಾದ ಎರಡನೇ ಪ್ರಕರಣ ಮತ್ತು ವಯಸ್ಕರಲ್ಲಿ ಮೊದಲನೆಯದು ಎಂದು ಬರೆಯಲಾಗಿದೆ.

ಮೃತ ವ್ಯಕ್ತಿಗೆ 78 ವರ್ಷ ಆರು ಅಡಿ ಎತ್ತರ ಮತ್ತು ಸಂಪೂರ್ಣವಾಗಿ ವಿಭಿನ್ನವಾಗಿ ಕಾಣುವ ಶಿಶ್ನವಿತ್ತು. ಸಂಶೋಧಕರು ಅವನ ಮೃತ ದೇಹವನ್ನು ಆಪರೇಷನ್ ಮಾಡಿದಾಗ ಒಳಗೆ ಇನ್ನೂ ಎರಡು ವಿಭಿನ್ನ ಶಿಶ್ನಗಳು ಇದ್ದವು. ಅವರು ಅಂಗಗಳನ್ನು ಪರಿಶೀಲಿಸಿದಾಗ ಮೂತ್ರನಾಳವು ಪ್ರಾಥಮಿಕ ಮತ್ತು ದ್ವಿತೀಯ ಶಿಶ್ನದ ಮೂಲಕ ಹಾದುಹೋಗಿತ್ತು. ಎರಡನೇ ಶಿಶ್ನ ಚಿಕ್ಕದಾಗಿತ್ತು ಆದರೆ ಶಿಶ್ನದ ಎಲ್ಲಾ ಮೂರು ಮುಖ್ಯ ಅಂಗಾಂಶ ಇದ್ದವು. ಅವುಗಳೆಂದರೆ ಕಾರ್ಪಸ್ ಕ್ಯಾವರ್ನೋಸಮ್, ಕಾರ್ಪಸ್ ಸ್ಪಾಂಜಿಯೋಸಮ್ ಮತ್ತು ಗ್ಲಾನ್ಸ್ (ತಲೆ).

ಮೂರನೆಯ ಶಿಶ್ನವು ಎರಡನೆಯ ಶಿಶ್ನದ ಹಿಂಭಾಗದಲ್ಲಿತ್ತು ಆದರೆ ಮೂತ್ರನಾಳಕ್ಕೆ ಸಂಪರ್ಕ ಹೊಂದಿರಲಿಲ್ಲ ಮತ್ತು ಕಾರ್ಪಸ್ ಸ್ಪಾಂಜಿಯೋಸಮ್ ಅನ್ನು ಹೊಂದಿರಲಿಲ್ಲ. ಮೊದಲ ಶಿಶ್ನವು ಸುಮಾರು ಮೂರು ಇಂಚು ಉದ್ದವಿದ್ದರೆ. ಇತರ ಎರಡು ಶಿಶ್ನವು ಸುಮಾರು 1.5 ಇಂಚುಗಳಷ್ಟಿತ್ತು.

ಬಹು ಶಿಶ್ನಗಳಿಗೆ ಕಾರಣ

ಹೆಚ್ಚುವರಿ ಅಂಗಗಳನ್ನು ಹೊಂದಿರುವ ಜನರು ಬದುಕುಳಿಯುತ್ತಾರೆ ಮತ್ತು ಸಾಮಾನ್ಯವಾಗಿ ಜೀವನವನ್ನು ನಡೆಸುತ್ತಾರೆ ಎಂದು ವೈದ್ಯಕೀಯ ದಾಖಲೆಗಳು ಹೇಳುತ್ತವೆ. ಹೆಚ್ಚುವರಿ ಶಿಶ್ನಗಳು ಆನುವಂಶಿಕವಾಗಿ ಉಂಟಾಗುತ್ತವೆ ಎಂದು ಹೇಳಲಾಗಿದೆ. ಶಿಶ್ನವು ಜನನಾಂಗದ ಟ್ಯೂಬರ್ಕಲ್ ಎಂದು ಕರೆಯಲ್ಪಡುವ ಅಂಗಾಂಶದಿಂದ ಬೆಳೆಯುತ್ತದೆ.

ಇದನ್ನೂ ಓದಿ: Nawaz Sharif : ಪಾಕ್‌ಗೆ ಮೋದಿ ಬಂದಿದ್ದರೆ ಖುಷಿಯಾಗುತ್ತಿತ್ತು; ಪ್ರಧಾನಿ ನವಾಜ್ ಷರಿಫ್‌

ವೈದ್ಯಕೀಯ ಪರಿಶೀಲನೆ ವೇಳೆ ಅವರ ಮೂತ್ರನಾಳವು ದ್ವಿತೀಯ ಶಿಶ್ನದಿಂದ ಅಭಿವೃದ್ಧಿಗೊಂಡಿತ್ತು. ಆದರೆ ಎರಡನೇ ಶಿಶ್ನವು ಸಂಪೂರ್ಣವಾಗಿ ಬೆಳೆಯದಿದ್ದಾಗ, ಮೂತ್ರನಾಳವು ಅವನ ಮೊದಲ ಶಿಶ್ನಕ್ಕೆ ಸೇರಿಕೊಂಡಿತ್ತು. ಆದರೆ, ಮೃತದೇಹ ದಾನದ ನಿಯಮಗಳ ಹಿನ್ನೆಲೆಯಲ್ಲಿ ಆ ವ್ಯಕ್ತಿಯ ಹಿನ್ನೆಲೆಯನ್ನು ಪತ್ತೆ ಹಚ್ಚಲು ವೈದ್ಯರಿಗೆ ಸಾಧ್ಯವಾಗಿಲ್ಲ.