ಹೈದಾರಾಬಾದ್: 11ನೇ ಆವೃತ್ತಿಯ ಪ್ರೊ ಕಬಡ್ಡಿ(PKL Season 11) ಲೀಗ್(ಪಿಕೆಎಲ್) ಇಂದಿನಿಂದ (ಶುಕ್ರವಾರ) ಆರಂಭಗೊಳ್ಳಲಿದೆ. ಹೈದರಾಬಾದ್ನಲ್ಲಿ ನಡೆಯುವ ಉದ್ಘಾಟನ ಪಂದ್ಯಗಳಲ್ಲಿ ತೆಲುಗು ಟೈಟಾನ್ಸ್ ಹಾಗೂ ಬೆಂಗಳೂರು ಬುಲ್ಸ್ ಮುಖಾಮುಖಿಯಾಗಲಿದೆ.
ಟೈಟಾನ್ಸ್ ತಂಡದಲ್ಲಿ ಬುಲ್ಸ್ ತಂಡದ ಮಾಜಿ ನಾಯಕ ಹಾಗೂ ಆಟಗಾರ ಪವನ್ ಕುಮಾರ್ ಶೆಹ್ರಾವತ್ ನೆಚ್ಚಿನ ಆಟಗಾರನಾದರೆ, ಬುಲ್ಸ್ನಲ್ಲಿ ರೆಕಾರ್ಡ್ ಬ್ರೇಕರ್ ಪ್ರದೀಪ್ ನರ್ವಾಲ್ ಇದ್ದಾರೆ. ಉಭಯ ಆಟಗಾರರು ಕೂಡ ಬಲಿಷ್ಠವಾಗಿರುವ ಕಾರಣ ಪಂದ್ಯ ರೋಚಕವಾಗಿ ಸಾಗುವ ನಿರೀಕ್ಷೆ ಇದೆ. ಕಳೆದ ಸೀಸನ್ನಲ್ಲಿ ಬೆಂಗಳೂರು 8ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿತ್ತು. ತೆಲುಗು ಟೈಟಾನ್ಸ್ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಇತ್ತಂಡಗಳ ಈವರೆಗಿನ 23 ಮುಖಾಮುಖೀ ಗಳಲ್ಲಿ ಬೆಂಗಳೂರು 16ರಲ್ಲಿ ಜಯಿಸಿದ್ದರೆ, ಟೈಟಾನ್ಸ್ ಕೇವಲ 3ರಲ್ಲಿ ಮೇಲುಗೈ ಸಾಧಿಸಿದೆ. 4 ಪಂದ್ಯಗಳು ಟೈ ಆಗಿವೆ.
ಈ ಬಾರಿಯ ಆವೃತ್ತಿಯಲ್ಲಿ ಎಲ್ಲಾ ವಿಭಾಗಗಳನ್ನೂ ಬಲಿಷ್ಠಗೊಳಿಸಲಾಗಿದೆ. ಗುಣಮಟ್ಟದ ಆಟವನ್ನಾಡುವ ಮೂಲಕ ಮತ್ತೊಂದು ಟ್ರೋಫಿ ಗೆಲ್ಲುವ ವಿಶ್ವಾಸವಿದೆʼ ಎಂದು ಕೋಚ್ ರಣ್ದೀರ್ ಸಿಂಗ್ ಹೇಳಿದ್ದಾರೆ. ಕಳೆದ 2 ವರ್ಷಗಳಲ್ಲಿ ಜೈಪುರ ತಂಡದ ಪರ ಗಮನಾರ್ಹ ಪ್ರದರ್ಶನ ತೋರಿದ್ದ ಅಜಿತ್ ಈ ಬಾರಿ ಬುಲ್ಸ್ ಸೇರಿದ್ದಾರೆ. ಜತೆಗೆ ಜೈ ಭಗವಾನ್ ತಂಡ ಸೇರಿದ್ದು ತಂಡದ ಬಲ ಹೆಚ್ಚಿದೆ. ಎಂ. ಚಂದ್ರನಾಯ್ಕ್ ಈ ಬಾರಿಯ ಪ್ರೊ ಕಬಡ್ಡಿ ಲೀಗ್ನಲ್ಲಿರುವ ಏಕೈಕ ಕನ್ನಡಿಗ.
ಇದನ್ನೂ ಓದಿ IND vs NZ: 46 ರನ್ಗೆ ಭಾರತ ಸರ್ವಪತನ
ಬೆಂಗಳೂರು ಬುಲ್ಸ್
ಅಜಿಂಕ್ಯ ಪವಾರ್, ಪ್ರದೀಪ್ ನರ್ವಾಲ್, ಲಕ್ಕಿ ಕುಮಾರ್, ಮಂಜೀತ್, ಚಂದ್ರನಾಯ್ಕ ಎಂ., ಹಾಸುನ್ ತೊಂಕ್ರುಯಿಯ, ಪ್ರಮೋದ್ ಸಾಯಿಸಿಂಗ್, ನಿತಿನ್ ರಾವಲ್, ಜೈ ಭಗವಾನ್, ಜತಿನ್, ಪೊನ್ಪರ್ತಿಬನ್ ಸುಬ್ರಮಣಿಯನ್, ಸುಶೀಲ್, ರೋಹಿತ್ ಕುಮಾರ್, ಸೌರಭ್ ನಂದಲ್, ಆದಿತ್ಯ ಪವಾರ್, ಅಕ್ಷಿತ್, ಅರುಲ್ನಂತಬಾಬು, ಪ್ರತೀಕ್.
ತೆಲುಗು ಟೈಟಾನ್ಸ್
ಪವನ್ ಸೆಹ್ರಾವತ್, ಚೇತನ್ ಸಾಹು, ರೋಹಿತ್, ಪ್ರಫುಲ್ ಜವಾರೆ, ಓಂಕಾರ್ ಪಾಟೀಲ್, ನಿತಿನ್, ಮಂಜೀತ್, ಆಶಿಶ್ ನರ್ವಾಲ್, ಅಂಕಿತ್, ಅಜಿತ್ ಪವಾರ್, ಸಾಗರ್, ಕ್ರಿಶನ್ ಧುಲ್, ಮಿಲಾದ್ ಜಬ್ಬಾರಿ, ಮೊಹಮ್ಮದ್ ಮಲಕ್, ಸುಂದರ್, ಸಂಜೀವಿ ಎಸ್, ಶಂಕರ್ ಗಡಾಯಿ, ವಿಜಯ್ ಮಲಿಕ್, ಅಮಿತ್ ಕುಮಾರ್.