Monday, 18th November 2024

ISIS Terrorism: ನಮಾಜ್‌ ನಡುವೆ ಸಂಗೀತ ಕೇಳಿದ್ದಕ್ಕಾಗಿ ಬಾಲಕನ ಶಿರಚ್ಛೇದ ಮಾಡಿದ ಇಸ್ಲಾಮಿಕ್ ಉಗ್ರರು!

ISIS Terrorism

ಇರಾಕ್‍: ಇಸ್ಲಾಮಿಕ್‌ ಸ್ಟೇಟ್ಸ್‌ (ಐಸಿಸ್) ಉಗ್ರರ ಕಟುಕತನಕ್ಕೆ ಮಿತಿಯೇ ಇಲ್ಲ. ಧರ್ಮದ ಹೆಸರಲ್ಲಿ ಅಮಾಯಕರನ್ನು ಕೊಲ್ಲುವುದೇ ಅವರಿಗೆ ‘ಧರ್ಮ ಪಾಲನೆ’. ಅವರ ಮೊಂಡುತನಕ್ಕೆ ಕ್ರೂರತನಕ್ಕೆ ಮಿತಿಯೇ ಇಲ್ಲ. ಅಂಥದ್ದೇ ಮತ್ತೊಂದು ಪ್ರಕರಣ ಇದೀಗ ವರದಿಯಾಗಿದೆ. ನಮಾಜ್ ನಡೆಯುತ್ತಿದ್ದ ವೇಳೆ ಸಂಗೀತ ಕೇಳಿದ ಆರೋಪದ ಮೇಲೆ ಯುವಕನೊಬ್ಬನನ್ನು ಸಾರ್ವಜನಿಕವಾಗಿ ಶಿರಚ್ಛೇಧ ಮಾಡಲಾಗಿದೆ.

ಇರಾಕ್‍ನ ಮೊಸುಲ್‍ನ 15 ವರ್ಷದ ಬಾಲಕ ಅಹಾಮ್ ಹುಸೇನ್‍ ಧರ್ಮಾಂಧರಿಂದ ಹತ್ಯೆಯಾದ ಬಾಲಕ. 2016ರಲ್ಲಿ ಅತನಿಗೆ ಮರಣ ದಂಡನೆ ವಿಧಿಸಲಾಗಿತ್ತು. ಬಾಲಕ ಪೋರ್ಟಬಲ್ ಸಿಡಿ ಪ್ಲೇಯರ್‌ನೊಂದಿಗೆ ಸಿಕ್ಕಿಬಿದ್ದ ನಂತರ ಆತನನ್ನು ಐಸಿಸ್‍ನ ಉಗ್ರರು ವಶಕ್ಕೆ ತೆಗೆದುಕೊಂಡಿದ್ದರು. ಇಸ್ಲಾಮಿಕ್ ಸ್ಟೇಟ್ ನ್ಯಾಯಾಲಯವು ನಡೆಸಿದ ವಿಚಾರಣೆಯಲ್ಲಿ ಆತ ಧಾರ್ಮಿಕ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ತಪ್ಪಿತಸ್ಥನೆಂದು ಘೋಷಿಸಿದೆ.  ಹಾಗಾಗಿ ಐಸಿಸ್(ISIS Terrorism) ನಿಯಂತ್ರಣದಲ್ಲಿದ್ದ ಮೊಸುಲ್ ನಗರದಲ್ಲಿ ಜನಸಮೂಹದ ಮುಂದೆ ಶಿರಚ್ಛೇದ ಮಾಡಲಾಗಿದೆ.

ಬಾಲಕ ಸಂಗೀತ ಕೇಳುತ್ತಿದ್ದಕ್ಕಾಗಿ ಸಾರ್ವಜನಿಕವಾಗಿ ಆತನ ಶಿರಚ್ಛೇದಗೊಳಿಸುವ ಶಿಕ್ಷೆ ವಿಧಿಸಿದ್ದನ್ನು ನೋಡಿದರೆ ಐಸಿಸ್‍ನ ಉಗ್ರಗಾಮಿಗಳ ಕ್ರೂರತನವನ್ನು ಅರಿತುಕೊಳ್ಳಬಹುದು. ಐಸಿಸ್ ಆಳ್ವಿಕೆಯಲ್ಲಿ ಸಂಗೀತ ಕೇಳುವುದನ್ನು ನಿಷೇಧಿಸಲಾಗಿತ್ತು. ತನ್ನ ಸಿದ್ಧಾಂತಕ್ಕೆ ವಿರುದ್ಧವಾದ  ಯಾವುದೇ ರೀತಿಯ ಕೆಲಸಗಳನ್ನು ಮಾಡಿದರೂ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತು. ಅಲ್ಲಿ ಸಣ್ಣ ಪ್ರತಿಭಟನೆ ಮಾಡಿದರೂ ಅದಕ್ಕೆ  ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗಿತ್ತು.  ಈ ದುರಂತ ಘಟನೆಯನ್ನು ನೋಡಿದರೆ  ಐಸಿಸ್ ಆಕ್ರಮಣದಲ್ಲಿ ಜನರು, ವಿಶೇಷವಾಗಿ ಮಕ್ಕಳು ಮತ್ತು ಯುವಕರು ಎಷ್ಟು ಕಠಿಣ ಪರಿಸ್ಥಿತಿಯನ್ನು ಅನುಭವಿಸಿದ್ದರು ಎಂಬುದು ತಿಳಿಯುತ್ತದೆ.

ಇದನ್ನೂ ಓದಿ:ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಸ್ಟರ್‌ ಆಗಿದ್ದರ ಹಿಂದಿದೆ ದುರಂತ ಪ್ರೇಮ ಕತೆ

ಐಸಿಸ್‍ನ ಇಂತಹ ದೌರ್ಜನ್ಯದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದ್ದು,  ಐಸಿಸ್ ಆಡಳಿತದಲ್ಲಿ ನಡೆದ ಅಮಾನವೀಯತೆಯ ಕೃತ್ಯಗಳ ಬಯಲಿಗೆ ಬರುತ್ತಿದೆ. ಐಸಿಸ್‍ ಈ ರೀತಿ ನಿರಂತರವಾಗಿ ಸಾರ್ವಜನಿಕ ಮರಣದಂಡನೆಗಳು, ಭಯ ಮತ್ತು ಹಿಂಸಾಚಾರ ನಡೆಸುವ ಮೂಲಕ ಆಯಾ ಪ್ರದೇಶಗಳ ಮೇಲೆ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಯೋಜನೆ ಮಾಡಿದೆ ಎನ್ನಲಾಗಿದೆ. ಬಾಲಕ ಹುಸೇನ್ ಸಾವು ಉಗ್ರಗಾಮಿ ಆಡಳಿತಗಳ ಅಡಿಯಲ್ಲಿ ವಾಸಿಸುವ ನಾಗರಿಕರು ಎಷ್ಟೊಂದು ಅಪಾಯಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಹೇಳುತ್ತದೆ.