ಈ ಸಹಭಾಗಿತ್ವದ ಮೂಲಕ ಎಲ್ಎನ್ಜಿ ಮತ್ತು ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಎಲ್ಲಾ ವಾಣಿಜ್ಯ ವಾಹನಗಳಿಗೆ ಸೂಕ್ತವಾದ ಮತ್ತು ಸುಲಭವಾದ ಹಣಕಾಸು ಉತ್ಪನ್ನ ಒದಗಿಸಲಾಗುತ್ತದೆ
ಬೆಂಗಳೂರು: ಭಾರತದ ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿರುವ ಇಂಡಿಯನ್ ಬ್ಯಾಂಕ್ ಭಾರತದಲ್ಲಿರುವ ಟಾಟಾ ಮೋಟಾರ್ಸ್ ನ ವಾಣಿಜ್ಯ ವಾಹನ ಗ್ರಾಹಕರು ಮತ್ತು ಅಧಿಕೃತ ಡೀಲರ್ ಶಿಪ್ ಗಳಿಗೆ ಹಣಕಾಸು ಉತ್ಪನ್ನಗಳನ್ನು ಒದಗಿಸುವ ನಿಟ್ಟಿನಲ್ಲಿ ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಜೊತೆಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಓಯು) ಸಹಿ ಹಾಕಿದೆ.
ದೇಶ. ಈ ಸಹಭಾಗಿತ್ವದ ಮೂಲಕ ಇಂಡಿಯನ್ ಬ್ಯಾಂಕ್ ಉತ್ತಮ ಬಡ್ಡಿ ದರಗಳಲ್ಲಿ ಮತ್ತು ಸುಲಭವಾದ ಸಾಲ ಪ್ರಕ್ರಿಯೆಯ ಮೂಲಕ ಕಸ್ಟಮೈಸ್ ಮಾಡಿದ ಹಣಕಾಸು ಉತ್ಪನ್ನಗಳನ್ನು ನೀಡುತ್ತದೆ. ಈ ಪಾಲುದಾರಿಕೆಯ ಮೂಲಕ ಎಲ್ಎನ್ಜಿ (ದ್ರವೀಕೃತ ನೈಸರ್ಗಿಕ ಅನಿಲ) ಮತ್ತು ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳನ್ನು ಒಳಗೊಂಡಂತೆ ಟಾಟಾ ಮೋಟಾರ್ಸ್ ನ ಸಂಪೂರ್ಣ ವಾಣಿಜ್ಯ ವಾಹನ ಪೋರ್ಟ್ಫೋಲಿಯೋಗೆ ಸೂಕ್ತವಾದ ಸಾಲ ಉತ್ಪನ್ನ ಗಳನ್ನು ಒದಗಿಸುತ್ತದೆ. ಟಾಟಾ ಮೋಟಾರ್ಸ್ ಮತ್ತು ಇಂಡಿಯನ್ ಬ್ಯಾಂಕ್ ಸಂಸ್ಥೆಗಳು ಡೀಲರ್ ಫೈನಾನ್ಸಿಂಗ್ ಕಡೆಗೂ ಹೆಚ್ಚಿನ ಗಮನ ನೀಡುತ್ತಿವೆ.
ಈ ಕುರಿತು ಮಾತನಾಡಿರುವ ಇಂಡಿಯನ್ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಅಶುತೋಷ್ ಚೌಧರಿ ಅವರು, “ಟಾಟಾ ಮೋಟಾರ್ಸ್ ಗ್ರಾಹಕರು ಮತ್ತು ಡೀಲರ್ಶಿಪ್ಗಳಿಗೆ ಸೂಕ್ತವಾದ ಹಣಕಾಸು ಉತ್ಪನ್ನಗಳನ್ನು ನೀಡಲು ಟಾಟಾ ಮೋಟಾರ್ಸ್ ಜೊತೆಗೆ ಎಂಒಯುಗೆ ಸಹಿ ಹಾಕಿದ್ದು ನಮಗೆ ಸಂತೋಷ ತಂದಿದೆ. ನಮ್ಮ ಹಣ ಕಾಸು ಉತ್ಪನ್ನ ಪ್ಯಾಕೇಜ್ಗಳು ಗ್ರಾಹಕರು ಮತ್ತು ಡೀಲರ್ಗಳಿಗೆ ಆರ್ಥಿಕವಾಗಿ ಬೆಳೆಯಲು ಮತ್ತು ಉದ್ದಿಮೆಯಲ್ಲಿ ಯಶಸ್ಸು ಸಾಧಿಸಲು ಸಹಾಯ ಮಾಡುತ್ತವೆ. ನಾವು ಟಾಟಾ ಮೋಟಾರ್ಸ್ ಗ್ರಾಹಕರು ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಜೊತೆಗೆ ನಿಕಟವಾಗಿ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.
ಈ ಸಹಭಾಗಿತ್ವದ ಕುರಿತು ಮಾತನಾಡಿದ ಟಾಟಾ ಮೋಟಾರ್ಸ್ ನ ಟ್ರಕ್ಸ್ ವಿಭಾಗದ ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್ ಶ್ರೀ. ರಾಜೇಶ್ ಕೌಲ್ ಅವರು, “ನಾವು ಇಂಡಿಯನ್ ಬ್ಯಾಂಕ್ ಜೊತೆಗೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲು ಸಂತೋಷ ಹೊಂದಿದ್ದೇವೆ. ಈ ಪಾಲುದಾರಿಕೆಯು ನಮ್ಮ ಗ್ರಾಹಕರಿಗೆ ಸುಲಭವಾಗಿ ಹಣಕಾಸು ಉತ್ಪನ್ನಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಸಾಲ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸುವ ಮೂಲಕ ಮತ್ತು ಅತ್ಯುತ್ತಮ ಸಾಲ ಆಯ್ಕೆಗಳನ್ನು ನೀಡುವ ಮೂಲಕ ನಮ್ಮ ಡೀಲರ್ ನೆಟ್ ವರ್ಕ್ ಗಳ ಆರ್ಥಿಕ ವ್ಯವಸ್ಥೆಯನ್ನು ಗಟ್ಟಿಗೊಳ ಇಸುವ ಉದ್ದೇಶವನ್ನೂ ನಾವು ಹೊಂದಿದ್ದೇವೆ. ಈ ಪಾಲುದಾರಿಕೆ ನಮ್ಮ ಅಮೂಲ್ಯ ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುವ ಮೂಲಕ ಅವರ ವ್ಯವಹಾರವನ್ನು ಬೆಳೆಯಲು ಸಹಾಯ ಮಾಡುತ್ತದೆ” ಎಂದು ಹೇಳಿದರು.
ಟಾಟಾ ಮೋಟಾರ್ಸ್ ಸಬ್-1-ಟನ್ ನಿಂದ ಹಿಡಿದು 55-ಟನ್ ಸಾಮರ್ಥ್ಯದ ಸರಕು ವಾಹನಗಳವರೆಗಿನ ಮತ್ತು 10-ಆಸನಗಳಿಂದ ಹಿಡಿದು 51-ಆಸನಗಳ ವರೆಗಿನ ಸಮೂಹ ಸಾರಿಗೆ ಉತ್ಪನ್ನಗಳನ್ನು ಹೊಂದಿರುವ ವಿಶಾಲವಾದ ವಾಣಿಜ್ಯ ವಾಹನ ಪೋರ್ಟ್ಫೋಲಿಯೋವನ್ನು ಹೊಂದಿದೆ. ದೃಢವಾಗಿ ವಿನ್ಯಾಸಗೊಳಿಸಿದ ಈ ವಾಣಿಜ್ಯ ವಾಹನಗಳು ಸಂಪೂರ್ಣ ಸೇವಾ 2.0 ಯೋಜನೆಯ ಭಾಗವಾಗಿ ಸಮಗ್ರ ವಾಹನ ನಿರ್ವಹಣೆಗಾಗಿ ಮೌಲ್ಯವರ್ಧಿತ ಸೇವೆಗಳನ್ನು ಉಚಿತವಾಗಿ ಪಡೆಯುತ್ತವೆ.
ವಾಹನಗಳ ನಿರ್ವಹಣೆಗಾಗಿ ಇರುವ ಟಾಟಾ ಮೋಟಾರ್ಸ್ ನ ಅತ್ಯುತ್ತಮ ಕನೆಕ್ಟೆಡ್ ವೆಹಿಕಲ್ ಪ್ಲಾಟ್ ಫಾರ್ಮ್ ಆಧ ಫ್ಲೀಟ್ ಎಡ್ಜ್ ವಾಹನ ನಿರ್ವಾಹಕರು ತನ್ನ ವಾಹನಗಳ ಕಾರ್ಯನಿರ್ವ ಹಣೆಯ ಸಮಯವನ್ನು ಹೆಚ್ಚುವಂತೆ ನೋಡಿಕೊಳ್ಳುತ್ತದೆ ಮತ್ತು ಮಾಲೀಕತ್ವದ ಒಟ್ಟು ವೆಚ್ಚವನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ. ಜೊತೆಗೆ ಭಾರತದಾದ್ಯಂತ ಹರಡಿರುವ ವಿಶಾಲ ಸೇವಾ ಜಾಲದ ಮೂಲಕ 24×7 ನೆರವು ಒದಗಿಸುತ್ತದೆ. ಈ ಎಲ್ಲಾ ಪ್ರಯತ್ನಗಳ ಮೂಲಕ ಟಾಟಾ ಮೋಟಾರ್ಸ್ ಸಾರಿಗೆ ಉತ್ಪನ್ನ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವುದನ್ನು ಮುಂದುವರೆಸಿದೆ.
ಇನ್ನು ಇಂಡಿಯನ್ ಬ್ಯಾಂಕ್ ಭಾರತದಲ್ಲಿನ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದ್ದು, ಇದನ್ನು ಆಗಸ್ಟ್ 15, 1907 ರಂದು ಸ್ಥಾಪನೆ ಮಾಡಲಾಗಿದೆ. ಭಾರತ ಸರ್ಕಾರವು ಈ ಬ್ಯಾಂಕಿನ ಶೇ.73.84 ಷೇರುಗಳನ್ನು ಹೊಂದಿದೆ. (30 ಜೂನ್ 2024 ರ ಪ್ರಕಾರ ) 1989ರಲ್ಲಿ ಮದ್ರಾಸ್ನಲ್ಲಿ ಎಟಿಎಂ ಅನ್ನು ಸ್ಥಾಪಿಸಿದ ಮೊದಲ ಸಾರ್ವಜನಿಕ ವಲಯದ ಬ್ಯಾಂಕ್ ಎಂಬ ಹೆಗ್ಗಳಿಕೆಯನ್ನು ಇಂಡಿಯನ್ ಬ್ಯಾಂಕ್ ಪಡೆದುಕೊಂಡಿದೆ. 1,983 ಗ್ರಾಮೀಣ ಪ್ರದೇಶಗಳು, 1,531 ಅರೆ-ನಗರ, 1,173 ನಗರ ಮತ್ತು 1,159 ಮಹಾ ನಗರಗಳು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 5,846 ಶಾಖೆಗಳನ್ನು (3 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಒಳಗೊಂಡಂತೆ) ನಿರ್ವಹಿಸುತ್ತದೆ. ಬ್ಯಾಂಕ್ 3 ಸಾಗರೋತ್ತರ ಶಾಖೆಗಳನ್ನು ಮತ್ತು 1 ಅಂತರರಾಷ್ಟ್ರೀಯ ಬ್ಯಾಂಕಿಂಗ್ ಘಟಕವನ್ನು (ಐಬಿಯು) ಹೊಂದಿದೆ. ಪ್ರಾಜೆಕ್ಟ್ ವೇವ್ ಅಡಿಯಲ್ಲಿ ಇಂಡಿಯನ್ ಬ್ಯಾಂಕ್ ತನ್ನ ಡಿಜಿಟಲ್ ಟ್ರಾನ್ಸ್ ಫಾರ್ಮೇಶನ್ ಅಭಿಯಾನದ ಭಾಗವಾಗಿ ಗ್ರಾಹಕರಿಗೆ ಉತ್ತಮ ಅನುಭವಗಳನ್ನು ಒದಗಿಸುವ ಪ್ರಯತ್ನ ಮಾಡುತ್ತಿಗೆ ಮತ್ತು ಸೇವೆಗಳನ್ನು ಉತ್ತಮಗೊಳಿಸುತ್ತಿದೆ. ಆರ್ಥಿಕ ವರ್ಷ 25ರ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್ ಡಿಜಿಟಲ್ ಚಾನೆಲ್ ಗಳ ಮೂಲಕ ₹36,678 ಕೋಟಿಗಳನ್ನು ಗಳಿಸಿದೆ. ಆ ಅವಧಿಯಲ್ಲಿ ಮೊಬೈಲ್ ಬ್ಯಾಂಕಿಂಗ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಲ್ಲಿ ತೀವ್ರ ಏರಿಕೆಗೆ ಉಂಟಾಗಿದೆ. ಸಪ್ಲೈ ಚೈನ್ ಫೈನಾನ್ಸ್ ಅಡಿಯಲ್ಲಿ ವಿತರಕರು ಮತ್ತು ಮಾರಾಟಗಾರರ ಬಂಡವಾಳದ ಅವಶ್ಯಕತೆಗಳನ್ನು ಪೂರೈಸಲು ಆನ್ಲೈನ್ ಪ್ಲಾಟ್ ಫಾರ್ಮ್ ಮೂಲಕ ಬ್ಯಾಂಕ್ ಸಮಗ್ರ ಹಣಕಾಸು ಉತ್ಪನ್ನವನ್ನು ಒದಗಿಸುತ್ತದೆ. ಬ್ಯಾಂಕಿನ ಸಪ್ಲೈ ಚೈನ್ ಫೈನಾನ್ಸ್ ಉತ್ಪನ್ನವು ಇತ್ತೀಚಿನ ದಿನಗಳಲ್ಲಿ ಭಾರಿ ಅಭಿವೃದ್ಧಿ ಸಾಧಿಸಿದೆ ಮತ್ತು ಆಟೋಮೊಬೈಲ್ ಹಾಗೂ ಇತರ ವಲಯಗಳಲ್ಲಿನ ಅನೇಕ ಪ್ರಮುಖ ಕಂಪನಿಗಳಿಗೆ ಸಾಲ ಉತ್ಪನ್ನ ಒದಗಿಸುತ್ತಿದೆ.