Sunday, 24th November 2024

Chikkaballapur News: ಮಹರ್ಷಿ ವಾಲ್ಮೀಕಿ ವಿದ್ವತ್ತುಳ್ಳ ಮಹಾಕವಿ ಎನ್ನಲು ರಾಮಾಯಣ ಮಹಾಕಾವ್ಯವೇ ಸಾಕ್ಷಿ : ಶಾಸಕ ಕೆ.ಹೆಚ್. ಪುಟ್ಟಸ್ವಾಮಿಗೌಡ

ಗೌರಿಬಿದನೂರು :ನಾಯಕ ಸಮುದಾಯಕ್ಕೆ ಸೇರಿದ ಮಹರ್ಷಿ ವಾಲ್ಮೀಕಿ ಅಲಕ್ಷಿತ ವರ್ಗದ ಪ್ರತಿಭಾವಂತ ಮಹಾಕವಿ.ರಾಮಾಯಣ ಮಹಾಕಾವ್ಯವೇ ಇವರ ವಿದ್ವತ್ತಿಗೆ ಹಿಡಿದ ಸಾಕ್ಷಿ ರೂಪದ ಕೃತಿಯಾಗಿದೆ ಎಂದು ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ತಿಳಿಸಿದರು.  

ನಗರದ ಹೆಚ್.ಎನ್ ಕಲಾಭವನದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಮಹರ್ಷಿ ಶ್ರೀ ವಾಲ್ಮೀಕಿ ಜಯಂತ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದು ಭಾರತದ ಆದಿಕವಿ ಎಂದು ಗುರುತಿಸಲ್ಪಟ್ಟ ವಾಲ್ಮೀಕಿ ಹುಟ್ಟಿದ ದಿನ. ಭಾರತೀಯರು ಅತ್ಯಂತ ಗೌರವಿಸುವ ಮಹಾಕಾವ್ಯ ರಾಮಾಯಣವನ್ನು ಬರೆದ ಕವಿ ವಾಲ್ಮೀಕಿಯ ಹುಟ್ಟಿದ ದಿನವನ್ನು ಒಂದು ರಾಷ್ಟಿçÃಯ ದಿನವಾಗಿ ಆಚರಿಸುತ್ತಿರುವುದು, ಕವಿಗೆ ಸಂದ ಗೌರವವೆನ್ನಬಹುದು. 24000 ಸಂಸ್ಕೃತ ಶ್ಲೋಕಗಳಿರುವ ಒಂದು ಬೃಹತ್ ಗ್ರಂಥವನ್ನು ಯಾವುದೇ ಹಿಂದಿನ ಮಾದರಿಯ ಆಸರೆಯಿಲ್ಲದೆ ತಾನೇ ಸೃಷ್ಟಿಸಿದ ಕಾವ್ಯ ಪ್ರಕಾರದಲ್ಲಿ ಬರೆದ ವಾಲ್ಮೀಕಿಯ ವಿದ್ವತ್ತಿಗೆ ಖಂಡಿತವಾಗಿ ನಮಿಸಬೇಕಾಗಿದೆ ಎಂದರು.

ವಾಲ್ಮೀಕಿ ಜನಾಂಗಕ್ಕೆ ಸೇರಿದ ದಲಿತರು ಉತ್ತರ ಭಾರತದ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಆದರೆ, ಇವರು, ವಾಲ್ಮೀಕಿ ಕುರಿತಂತೆ ಹೆಣೆದಿರುವ ಈ ಮೇಲಿನ ಕಥೆಗಳನ್ನು ಅಕ್ಷರಶಃ ನಿರಾಕರಿಸುತ್ತಾರೆ. ಅಂದರೆ, ಒಬ್ಬ ದುರ್ಬಲ ಜಾತಿಯ ವ್ಯಕ್ತಿ ತನ್ನ ಶ್ರಮ ಮತ್ತು ಸ್ವಸಾಮರ್ಥ್ಯದಿಂದ ಒಂದು ಶ್ರೇಷ್ಠ ಗ್ರಂಥವನ್ನು ರಚಿಸಿದ ಎಂದು ಒಪ್ಪಿಕೊಳ್ಳಲು ನಮಗೆ ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ಅವರ ಪ್ರಶ್ನೆ. ಒಬ್ಬ ಮನುಷ್ಯನ ಅಪ್ರತಿಮ ಸಾಧನೆಯನ್ನು, ಅವನ ಹಿನ್ನೆಲೆಯನ್ನು ಕೆದಕದೇ, ಅದರ ಮೇಲೆ ಕಥೆಗಳನ್ನು ಹೆಣೆಯದೇ, ಬಾಹ್ಯ ಕಾರಣಗಳನ್ನು ಹಿಗ್ಗಿಸಿ ಮತ್ತು, ಅವನ ಸಾಧನೆಯನ್ನು ಕುಗ್ಗಿಸದೇ, ವಸ್ತುಶಃ ಸ್ವೀಕರಿಸುವ ಮಾನಸಿಕ ವಿಕಸತೆ ನಮ್ಮಲ್ಲಿ ಇನ್ನೂ ಅರಳಿಲ್ಲ ಎನ್ನುವುದು ವಾಸ್ತವ ಎಂದರು.

ಬಹಳ ಮುಖ್ಯ ವಿಚಾರವೆಂದರೆ, ವಾಲ್ಮೀಕಿಯ ಹಿನ್ನೆಲೆಯ ಕುರಿತಂತೆ ಇರುವ ಕಥೆಗಳು ಬೇರೆಯವರು ಸೃಷ್ಟಿಸಿರು ವುದೇ ಹೊರತು, ಸ್ವತಃ ವಾಲ್ಮೀಕಿ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಆದರೆ, ವಾಲ್ಮೀಕಿಯ ಮಾತೃ ವಾತ್ಸಲ್ಯದ ಕುರಿತು ರಾಮಾಯಣದಲ್ಲಿಯೇ ಸಾಕಷ್ಟು ಮಾಹಿತಿ ಸಿಗುತ್ತದೆ. ರಾಮ ಸೀತೆಯನ್ನು ತ್ಯಜಿಸಿದಾಗ, ಅಯೋಧ್ಯೆಯ ಪುರುಷ ಸಾಮ್ರಾಜ್ಯವು ಅವಳ ಚಾರಿತ್ರ‍್ಯವನ್ನು ಸಂಶಯದಿAದ ನೋಡುವಾಗ ಅವಳಿಗೆ ಆಶ್ರಯ ನೀಡಿದ್ದು ವಾಲ್ಮೀಕಿ ಎಂಬ ಮಹಾತಪಸ್ವಿ. ಅವಳನ್ನು ಮತ್ತು ಅವಳ ಅವಳಿ ಮಕ್ಕಳನ್ನು ಪಾಲನೆ ಪೋಷಣೆ ಮಾಡಿದ್ದೂ ಇದೇ ಮಹರ್ಷಿ. ಇಂತಹ ಹೃದಯ ವೈಶಾಲ್ಯತೆ ಒಬ್ಬ ಶ್ರೇಷ್ಠ ಸಾಧಕನಿಗೆ ಮಾತ್ರ ಸಾಧ್ಯ. ಆದ್ದರಿಂದ, ವಾಲ್ಮೀಕಿಯನ್ನು, ಮೊದಲ ಮಹಾಕಾವ್ಯ ಬರೆದ ಆದಿಕವಿ, ಶ್ರೇಷ್ಠ ಕವಿಯಾಗಿಯೇ ಸ್ವೀಕರಿಸೋಣ ಎಂದು ಕರೆ ನೀಡಿದರು.

ಬಸವಯ್ಯ ಹೊಸಕೋಟೆ ವಾಲ್ಮೀಕಿ ಮಹರ್ಷಿಯ ಕುರಿತು ಉಪನ್ಯಾಸ ನೀಡಿದರು.

ಇದೇ ವೇಳೆ ತಹಶೀಲ್ದಾರ್ ಮಹೇಶ್ ಎಸ್ ಪತ್ರಿ ತಾಲೂಕು ಪಂಚಾಯಿತಿ ಹೊನ್ನಯ್ಯ. ನಗರ ಸಭೆ ಪೌರಾಯುಕ್ತ ಡಿ.ಎಂ. ಗೀತಾ. ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗೌಡ ನಾಯ್ಕರ್ ಚೆನ್ನಪ್ಪ ಸೋಮಪ್ಪ. ಆರಕ್ಷಕ ವೃತ್ತ ನಿರೀಕ್ಷಕರು ಕೆ.ಪಿ. ಸತ್ಯನಾರಾಯಣ ನಗರಸಭೆ ಅಧ್ಯಕ್ಷರು ಲಕ್ಷಿö್ಮÃನಾರಾಯಣ್ .ಉಪಾಧ್ಯಕ್ಷರು ಫರೀದ್. ಗೌರಿಬಿದನೂರು ತಾಲೂಕು ವಾಲ್ಮೀಕಿ ಅಧ್ಯಕ್ಷರು ಆರ್. ಅಶೋಕ್ ಕುಮಾರ್ ಇನ್ನೂ ಮುಂತಾದ ಉಪಸ್ಥಿತರಿದ್ದರು.