Monday, 18th November 2024

Government Jobs: ಇನ್ನು ಮುಂದೆ ಅನುಕಂಪದ ಆಧಾರದ ನೇಮಕಾತಿಯೂ ಆನ್‌ಲೈನ್:‌ ಸರ್ಕಾರ ಮಹತ್ವದ ಆದೇಶ

7th Pay Commission

ಬೆಂಗಳೂರು: ಅನುಕಂಪದ ಆಧಾರದ ಮೇಲೆ ನೌಕರಿ (Government jobs) ಪ್ರಸ್ತಾವನೆಗಳನ್ನು ಇನ್ನು ಮುಂದೆ ಆನ್‌ಲೈನ್ ತಂತ್ರಾಂಶದಲ್ಲಿಯೇ ನಿರ್ವಹಿಸಬೇಕು ಎಂದು ರಾಜ್ಯ ಸರ್ಕಾರ (Karnataka Government) ಮಹತ್ವದ ಆದೇಶ ಹೊರಡಿಸಿದೆ.

ಅನುಕಂಪದ ನೇಮಕಾತಿ ಅರ್ಜಿಗಳನ್ನು ವಿಷಯದನ್ವಯ ಸಂಪೂರ್ಣವಾಗಿ ಆನ್ಲೈನ್ ತಂತ್ರಾಂಶದ ಮುಖಾಂತರ ಇಇಡಿಎಸ್‌ನಲ್ಲಿ ನಿರ್ವಹಿಸಲು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇಲಾಖಾ ವೆಬ್ಸೈಟ್ https://schooleducation.karnataka.gov.in ಭೌತಿಕವಾಗಿ ಸ್ವೀಕೃತಿಯಾಗಿ ನಿರ್ವಹಣೆ ಕ್ರಮಗಳು ಆಗುತ್ತಿದ್ದು ಇದರಿಂದ ಹಲವು ಪ್ರಕರಣಗಳಲ್ಲಿ ಅರ್ಜಿದಾರರಿಗೆ ಅನಗತ್ಯ ತೊಂದರೆಗಳಾಗುತ್ತಿರುವುದು ಗಮನಕ್ಕೆ ಬಂದಿದೆ. ಅಸಾಧಾರಣ ವಿಳಂಬವನ್ನೂ ಸಹ ಗಮನಿಸಿದ್ದು ದೂರುಗಳಿಗೆ ದಾರಿಯಾಗಿದೆ. ಹೀಗಾಗಿ ಆನ್‌ಲೈನ್‌ ಪ್ರಕ್ರಿಯೆಯನ್ನು ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.

ಇನ್ನು ಮುಂದೆ ಅರ್ಜಿದಾರರಿಗೆ ಅನುಕೂಲವಾಗುವಂತೆ ಮತ್ತು ಇಡೀ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಬಹುದಾದ ರೀತಿಯಲ್ಲಿ ಈಗಾಗಲೇ ಆನ್ಲೈನ್ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದ್ದು ಪ್ರಸ್ತುತ ವಿವಿಧ ಜಿಲ್ಲೆಗಳಿಂದ ಆನ್ಲೈನ್ ಪರೀಕ್ಷೆಗೆ ಮಾಡ್ಯೂಲ್‌ ಒದಗಿಸಿ ವರದಿಗಳನ್ನು ಪಡೆಯಲಾಗುತ್ತಿದೆ. ವರದಿಗಳ ಆಧಾರದಲ್ಲಿ ತಂತ್ರಾಂಶವು ಅತ್ಯಂತ ಸಮರ್ಥವಾಗಿ ಮತ್ತು ಸುಲಭ ವ್ಯವಹರಣೆಗೆ ಸೂಕ್ತವಾಗಿ ಇರುತ್ತದೆ. ಇನ್ನು ಮುಂದೆ ಎಲ್ಲಾ ಅನುಕಂಪದ ನೇಮಕಾತಿ ಅರ್ಜಿಗಳನ್ನು ಆನ್ಲೈನ್ ವ್ಯವಸ್ಥೆಯಲ್ಲಿಯೇ ಸ್ವೀಕರಿಸಲು ಮತ್ತು ಆಯಾ ಕಚೇರಿಹಂತಗಳಲ್ಲಿ ಮತ್ತು ಮೇಲು ಕಚೇರಿಗೆ ಅರ್ಜಿಗಳನ್ನು ಮುಂದಿನ ಕ್ರಮಕ್ಕಾ ಗಿ ಆನ್ಲೈನ್‌ಲ್ಲಿಯೇಸಲ್ಲಿಸಲು ವ್ಯವಸ್ಥೆಗೊಳಿಸಲಾಗಿದೆ. ಅನುಕಂಪದ ಆಧಾರಿತ ಅರ್ಜಿಗಳ ಪ್ರಕ್ರಿಯೆಯು ಯಾವುದೇ ವಿಳಂಬವಿಲ್ಲದಂತೆ ಕಾರ್ಯನಿರ್ವಾಹಕರ ಹಂತದಿಂದ ನೇಮಕಾತಿ ಆದೇಶ ನೀಡುವವರೆಗೆ ಆನ್ಲೈನ್ ವ್ಯವಸ್ಥೆಯಲ್ಲಿ ನಿರ್ವಹಣೆಗೊಳ್ಳಲು ಸೂಚನೆಗಳನ್ನು ಹೊರಡಿಸಲಾಗಿದೆ.

ಸೂಚನೆಗಳನ್ನು ಪಾಲಿಸದೇ ಭೌತಿಕವಾಗಿ ಅರ್ಜಿಗಳನ್ನು ನಿರ್ವಹಿಸುವುದನ್ನು ಅತ್ಯಂತ ಗಂಭಿರವಾಗಿ ಪರಿಗಣಿಸಲಾಗುವುದು ಮತ್ತು ಅಂತಹ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಎಚ್ಚರಿಸಿದೆ.

ಸೂಚನೆಗಳು ಮತ್ತು ವೇಳಾಪಟ್ಟಿ :

  1. ದಿನಾಂಕ:18.11.2024 ರಿಂದ ಎಲ್ಲಾ ಅನುಕಂಪದ ಆಧಾರಿತ ನೇಮಕಾತಿ ಕೋರಿಕೆ ಅರ್ಜಿಗಳನ್ನು ಕಡ್ಡಾಯವಾಗಿ ಆನ್ಲೈನ್ ವ್ಯ ವಸ್ಥೆಯಲ್ಲಿಯೇ ಸ್ವೀಕರಿಸತಕ್ಕದ್ದು ಮತ್ತು ನಿರ್ವಹಿಸತಕ್ಕದ್ದು. ಆದರೆ ದಿನಾಂಕ:18.10.2024 ರಿಂದ 16.11.2024 ರವರೆಗೆ ಸಮಾನಾಂತರವಾಗಿ ಭೌತಿಕವಾಗಿಯೂ ಅರ್ಜಿಗಳನ್ನು ಪಡೆದು ಆನ್ಲೈನ್ ವ್ಯ ವಸ್ಥೆ ಮತ್ತು ಭೌತಿಕ ವ್ಯವಸ್ಥೆಯಲ್ಲಿ ಪ್ರಕ್ರಿಯೆಯನ್ನು ಹಮ್ಮಿಕೊಳ್ಳತಕ್ಕದ್ದು. ಈ ವ್ಯವಸ್ಥೆಯು ಅನುಕಂಪದ ಆಧಾರಿತ ಅರ್ಜಿದಾರರಿಗೆ ಯಾವುದೇ ತೊಂದರೆಯಾಗದಂತೆ ಆಡಳಿತ ವ್ಯವಸ್ಥೆಯಲ್ಲಿ ಭೌತಿಕ ಪದ್ಧತಿಯಿಂದ ಆನ್ಲೈನ್ ಪದ್ಧತಿಗೆ ಪೂರ್ಣ ಹೊಂದಿಕೊಳ್ಳಲು ಸಮಯವನ್ನು ಕಲ್ಪಿಸಲಾಗಿದೆ (transition period). ಇದರಿಂದ ತಂತ್ರಾಂಶವನ್ನು ಬಳಸುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹೊಸ ವ್ಯವಸ್ಥೆಗೆ ಒಗ್ಗೂಡಿಕೊಳ್ಳಲು ಮತ್ತು ಅರ್ಜಿದಾರರಿಗೂ ಸಹ ಸೂಕ್ತ ತಾಂತ್ರಿಕ ಮಾರ್ಗದರ್ಶನವನ್ನು ನೀಡಲು ತರಬೇತಿಯನ್ನು ಪಡೆದುಕೊಳ್ಳಲು ಕಾಲಾವಕಾಶವನ್ನು ಕಲ್ಪಿಸಲಾಗಿದೆ.

ಆದರೆ ದಿನಾಂಕ:19-11-2024 ರಿಂದ ಮುಂದಕ್ಕೆ ಅರ್ಜಿ ಸ್ವೀಕಾರ ಮತ್ತು ಎಲ್ಲಾ ಪ್ರಾರಂಭಿಕ ಪ್ರಕ್ರಿಯೆಗಳಿಂದ ಆಖೈರಿನವರೆಗೆ ಸಂಪೂರ್ಣವಾಗಿ ಆನ್ಲೈನ್‌ನಲ್ಲಿಯೇ ಕಡತ
ನಿರ್ವಹಣೆಯಾಗತಕ್ಕ ದ್ದು. ಈಗಾಗಲೇ ಇಇಡಿಎಸ್ ತಂತ್ರಾಂಶವನ್ನು ಬಳಸಲಾಗುತ್ತಿರುವುದರಿಂದ ಅನುಕಂಪದ ಆಧಾರಿತ ನೇಮಕಾತಿ ಅರ್ಜಿಗಳ ಆನ್ಲೈನ್ ನಿರ್ವಹಣೆಗೆ ಒಗ್ಗಿಕೊಳ್ಳುವುದು ಸುಲಭವಾಗಿಯೇ ಇದೆ.

  1. ಅನುಕಂಪದ ಆಧಾರಿತ ನೇಮಕಾತಿಗೆ ಚಾಲ್ತಿಯಲ್ಲಿರುವ ನಿಯಮಗಳನುಸಾರ ಎಲ್ಲಾ ಅಂಶಗಳನ್ನು ಪರಿಗಣಿಸಿ ವ್ಯವಸ್ಥೆಗಳನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ ಮತ್ತು ಭೌತಿಕ ಕಡತ ನಿರ್ವಹಣೆಯ ಪ್ರತಿರೂಪದಂತೆಯ ಆನ್ಲೈನ್ ವ್ಯ ವಸ್ಥೆಯ ಕಡತ ನಿರ್ವಹಣೆ ಸಹ ಇರಲಿದೆ.
  2. ಪ್ರಸ್ತುತದಲ್ಲಿ ಅನುಕಂಪದ ಆಧಾರಿತ ನೇಮಕಾತಿ ಕೋರಿಕೆ ಅರ್ಜಿಯು ಒಂದನೇ ಹಂತದಲ್ಲಿ ಆಯಾ ಕಚೇರಿ ಮುಖ್ಯಸ್ಥರಲ್ಲಿ ಭೌತಿಕವಾಗಿ ಸ್ವೀಕೃತವಾಗುತ್ತಿದೆ. ಆದರೆ ಇನ್ನು ಮುಂದೆ ಅರ್ಜಿದಾರರಿಗೆ ಅನುಕೂಲವಾಗುವಂತೆ ನೇರವಾಗಿ https://schooleducation.karnataka.gov.in ಮುಖಾಂತರ ಒದಗಿಸಲಾಗಿರುವ ಲಿಂಕ್‌ನಲ್ಲಿ ಅರ್ಜಿಯನ್ನು ಸಲ್ಲಿಸಲು ವ್ಯ ವಸ್ಥೆ ಮಾಡಲಾಗಿದೆ. ಆಯಾ ಕಛೇರಿ ಮುಖ್ಯಸ್ಥರು ಅವರ ಲಾಗಿನ್‌ ಮುಖಾಂತರದಲ್ಲಿ ಡ್ಯಾಶ್‌ಬೋರ್ಡ್‌ ಪರಿಶೀಲಿಸಿಕೊಂಡು
    ಅರ್ಜಿ ಸ್ವೀಕೃತವಾಗಿರುವ ಬಗ್ಗೆ ಭೌತಿಕ ವಹಿಯಲ್ಲಿಯೂ ಸಹ ನೋಂದಾಯಿಸಿಕೊಳ್ಳಬಹುದಾಗಿದೆ. ಪ್ರಕ್ರಿಯೆಯು ಅತ್ಯಂತ ಸರಳವಾಗಿರುವಂತೆ ವ್ಯವಸ್ಥೆಗೊಳಿಸಲಾಗಿದೆ. ಲಿಂಕ್ ಮೇಲೆ ಕ್ಲಿಕ್‌ ಮಾಡಿದ ತಕ್ಷಣದಲ್ಲಿ ಅರ್ಜಿದಾರನಿಗೆ ಅರ್ಜಿ ಸಲ್ಲಿಸಲು ಲಾಗಿನ್ ಪೇಜ್ ತೆರೆದುಕೊಳ್ಳಲಿದೆ. ಅದರಲ್ಲಿ ಕನ್ನಡ ಮತ್ತು ಆಂಗ್ಲ ಭಾಷಾ ಅವತರಣಿಕೆಯನ್ನು ಆಯ್ಕೆ ಮಾಡಬಹುದಾಗಿದೆ. ಮೃತ ಸರ್ಕಾರಿ ನೌಕರರ ಅವಲಂಬಿತರಿಂದ ಅರ್ಜಿ ಸಲ್ಲಿಕೆಯಾಗುವುದರಿಂದ ಮೃತ ಸರ್ಕಾರಿ ನೌಕರರ ಕೆ.ಜಿ.ಐ.ಡಿ ಸಂಖ್ಯೆಯನ್ನೇ ಲಾಗಿನ್ ಐಡಿ ಮತ್ತು ಪಾವರ್ಡ್‌ ಆಗಿ ಪ್ರಥಮದಲ್ಲಿ ಇರಿಸಿಕೊಂಡಿದೆ.

ಇದನ್ನೂ ಓದಿ: Government Job News: ವಯೋಮಿತಿ ಮೀರಿದ ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಗುಡ್‌ ನ್ಯೂಸ್;‌ ಎಲ್ಲ ವರ್ಗಕ್ಕೂ 3 ವರ್ಷ ಸಡಿಲಿಕೆ