Tuesday, 19th November 2024

Shirt Fashion: ಟಾಮ್‌ ಬಾಯ್‌ ಇಮೇಜ್‌‌‌ನಿಂದ ಗ್ಲಾಮರಸ್‌ ಕೆಟಗರಿಗೆ ಸೇರಿದ ಶರ್ಟ್ ಫ್ಯಾಷನ್‌!

Shirt Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಸೀಸನ್‌ ಟ್ರೆಂಡ್‌ನಲ್ಲಿ ಇದೀಗ ಹುಡುಗಿಯರು ಧರಿಸುವ ವೈವಿಧ್ಯಮಯ ಶರ್ಟ್‌ಗಳು ಟಾಪ್‌ ಫ್ಯಾಷನ್‌ಗೆ (Shirt Fashion)‌ ಸೇರಿವೆ. ಅವುಗಳಲ್ಲಿ 3 ಶೈಲಿಯವು ಹೆಚ್ಚು ಪಾಪುಲರ್‌ ಆಗಿವೆ. ಹೌದು, ಮೊದಲೆಲ್ಲಾ ಹುಡುಗಿ ಶರ್ಟ್ ಧರಿಸುತ್ತಾಳೆ ಎಂದಾಕ್ಷಣಾ ಎಲ್ಲರೂ ಟಾಮ್‌ಬಾಯ್‌ ಎಂದು ಕರೆಯುತ್ತಿದ್ದರು. ಆದರೆ, ಈಗ ಸ್ಟೈಲಿಂಗ್‌ ಬದಲಾಗಿದೆ. ಶರ್ಟ್ ಧರಿಸುವ ಲುಕ್‌ ಕೂಡ ಬದಲಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಪಾಪುಲರ್‌ ಆಗಿರುವ ಶರ್ಟ್‌‌ಗಳ ಕುರಿತಂತೆ ಇಲ್ಲಿ ವಿವರಿಸಿದ್ದಾರೆ.

ಇಶಾ ಗುಪ್ತಾ, ನಟಿ

ಇನ್ನರ್‌ ಟಾಪ್‌ -ಶರ್ಟ್ ಡ್ರೆಸ್‌

ಶರ್ಟ್‌‌ನೊಳಗೆ ಸೇಮ್‌ ಕಲರ್‌ನ ಅಥವಾ ಕಾಂಟ್ರಾಸ್ಟ್ ಶೇಡ್‌ನ ಇನ್ನರ್‌ ಟಾಪ್‌ ಧರಿಸುವ ಫ್ಯಾಷನ್‌ ಇದೀಗ ಜೆನ್‌ ಜಿ ಹುಡುಗಿಯರ ಲಿಸ್ಟ್‌ಗೆ ಸೇರಿದೆ. ಈ ರೀತಿಯ ಮಿಕ್ಸ್ ಮ್ಯಾಚ್‌ ಕಾನ್ಸೆಪ್ಟ್‌ನ ಸ್ಟೈಲಿಂಗ್‌ ಶರ್ಟ್‌ನ ಲುಕ್‌ ಬದಲಿಸಿದೆ. ಕೋಟ್‌ನಂತೆ ಇನ್ನರ್‌ ಟಾಪ್‌ ಮೇಲೆ ಅರ್ಧಂಬರ್ಧ ಬಟನನ್ನು ಓಪನ್‌ ಮಾಡಿ ಧರಿಸುವುದು ಕಾಮನ್‌ ಆಗಿದೆ.

ಪಾರ್ಟಿವೇರ್‌ ವ್ರಾಪ್‌ ಶರ್ಟ್ಸ್

ಈ ಶೈಲಿಯ ಶರ್ಟ್ ಸಾಮಾನ್ಯವಾಗಿ ಫಾರ್ಮಲ್ಸ್ ಸೆಟ್‌ನಲ್ಲಿ ಕಂಡು ಬರುತ್ತವೆ. ಮಾನೋಕ್ರೋಮ್‌ ಶೇಡ್‌ಗಳಲ್ಲಿ ಇವು ಹೆಚ್ಚಾಗಿ ಬಿಡುಗಡೆಗೊಳ್ಳುತ್ತವೆ. ಡಿಸೈನರ್‌ಗಳ ಬಳಿ ವಿಶೇಷವಾಗಿ ಕಸ್ಟಮೈಸ್ಡ್‌ ಡಿಸೈನ್‌ನಲ್ಲಿಯೂ ಇವು ಲಭ್ಯ.

ಈ ಸುದ್ದಿಯನ್ನೂ ಓದಿ | Karva Chauth 2024: ಮಾರುಕಟ್ಟೆಗೆ ಉತ್ತೇಜನ ತಂದ ಕರ್ವ ಚೌತ್‌; ದಾಖಲೆಯ 22,000 ಕೋಟಿ ರೂ. ವಹಿವಾಟಿನ ನಿರೀಕ್ಷೆ

ಅಸ್ಸೆಮ್ಮಿಟ್ರಿಕಲ್‌ ಡಿಸೈನ್‌ ಹೊಂದಿರುವ ಈ ಶರ್ಟ್‌ಗಳು ಪಾರ್ಟಿವೇರ್‌ ಔಟ್‌ಫಿಟ್‌ ಲಿಸ್ಟ್‌‌ಗೆ ಸೇರುತ್ತವೆ. ಸಾಮಾನ್ಯ ಶರ್ಟ್‌‌ನಂತೆ ಇವು ಬಟನ್‌ಗಳನ್ನು ಹೊಂದಿರುವುದಿಲ್ಲ. ಬದಲಿಗೆ ಕಾಲರ್‌ ಜತೆಜತೆಗೆ ವ್ರಾಪ್‌ ಮಾಡುವಂತಹ ವಿನ್ಯಾಸ ಹೊಂದಿರುತ್ತವೆ. ಬಲಗಡೆ ಅಥವಾ ಎಡಗಡೆ ಸೈಡ್‌ನಲ್ಲಿ ಕಟ್ಟುವಂತಹ ಟೈಯಿಂಗ್‌ ಅಪ್ಷನ್‌ ಹೊಂದಿರುತ್ತವೆ.

ಓವರ್‌ ಸೈಜ್ ಶೋಲ್ಡರ್ ಶರ್ಟ್

ದೊಡ್ಡದಾಗಿರುವ ಅಥವಾ ಬಾಡಿ ಮಾಸ್‌ ಇಂಡೆಕ್ಸ್‌ಗಿಂತ ತೀರಾ ಲೂಸಾಗಿರುವ, ಧರಿಸಿದರೇ ಫಿಟ್ಟಿಂಗ್‌ ಇಲ್ಲದ, ಎಕ್ಸ್‌ ಎಲ್‌ ಸೈಝಿನ ಶರ್ಟ್‌ಗಳಿವು. ನೋಡಲು ಪುರುಷರು ಧರಿಸುವ ಶರ್ಟ್‌ಗಳಂತೆ ಕಾಣುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಇವು ಧರಿಸಿದಾಗ ಲೂಸು ಲೂಸಾದ ಉಡುಪಿನಂತೆ ಕಾಣುತ್ತವೆ. ಇತ್ತೀಚೆಗೆ ಜೆನ್‌ ಜಿ ಫ್ಯಾಷನ್‌ ಹುಡುಗಿಯರನ್ನು ಸವಾರಿ ಮಾಡತೊಡಗಿವೆ.

ಈ ಸುದ್ದಿಯನ್ನೂ ಓದಿ | Yakshadhruva Patla Foundation: ಜರ್ಮನಿಯಲ್ಲೂ ಯಕ್ಷಗಾನದ ಸೊಬಗು; ಯಕ್ಷಧ್ರುವ ಪಟ್ಲ ಫೌಂಡೇಶನ್‌‌ನ ಯುರೋಪ್ ಘಟಕ ಉದ್ಘಾಟನೆ

ಓವರ್‌ಸೈಝ್‌ ಶೋಲ್ಡರ್‌ ಶರ್ಟ್‌ನೊಳಗೆ ಫಿಟ್ಟಿಂಗ್‌ ಔಟ್‌ಫಿಟ್‌ ಧರಿಸಬೇಕು.
ಶರ್ಟ್‌‌ಗೆ ಪ್ಯಾಂಟ್‌ ಮ್ಯಾಚ್‌ ಮಾಡುವುದಾದಲ್ಲಿ ಫಿಟ್ಟಿಂಗ್‌ ಇರುವಂತಹ ಸ್ಕಿನ್‌ ಟೈಟ್‌ ಅಥವಾ ಪೆನ್ಸಿಲ್‌ ಸ್ಕರ್ಟ್‌ಗಳನ್ನು ಧರಿಸಬಹುದು.
ಇದು ಫಂಕಿ ಲುಕ್‌ ಆಗಿರುವುದರಿಂದ ಮಿನಿಮಲ್‌ ಜ್ಯುವೆಲರಿಗೆ ಪ್ರಾಮುಖ್ಯತೆ ನೀಡಬೇಕು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)