ಬೆಂಗಳೂರು: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (Indian Oil Corporation Limited) ವತಿಯಿಂದ ವೈದ್ಯಕೀಯ ತಜ್ಞರ ಹುದ್ದೆಗಳ ನೇಮಕಾತಿಗೆ ಪ್ರಕಟಣೆಯನ್ನು (Job News) ಹೊರಡಿಸಲಾಗಿದ್ದು, ಆಸಕ್ತರು ಅಕ್ಟೋಬರ್ 24 ಮತ್ತು 25ರಂದು ಸಂಬಂಧಿತ ದಾಖಲೆಗಳೊಂದಿಗೆ ಸಂದರ್ಶನಕ್ಕೆ (walk-in interview) ಹಾಜರಾಗಬಹುದು.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ಒಂಬತ್ತು ವಿವಿಧ ವೈದ್ಯಕೀಯ ತಜ್ಞರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ ಪ್ರಕಟಣೆಯನ್ನು ಹೊರಡಿಸಿದೆ. ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಐಒಸಿಎಲ್ ಅಧಿಕೃತ ವೆಬ್‌ಸೈಟ್ iocl.com ನಲ್ಲಿ ಲಭ್ಯವಿದೆ.
ಹುದ್ದೆಯ ವಿವರ
ಆರಂಭದ ಒಂದು ವರ್ಷ ತರಬೇತಿ ಅವಧಿ ಎಂದು ಪರಿಗಣಿಸಲಾಗುತ್ತದೆ. ಬಳಿಕ ಒಂದು ವರ್ಷ ತರಬೇತಿ ಅವಧಿಯನ್ನು ವಿಸ್ತರಿಸಲಾಗುತ್ತದೆ. ಅನಂತರ ಗುವಾಹಟಿ ರಿಫೈನರಿ ಆಸ್ಪತ್ರೆಯ ಅವಶ್ಯಕತೆ ಮತ್ತು ವೈದ್ಯರ ತೃಪ್ತಿದಾಯಕ ಕಾರ್ಯಕ್ಷಮತೆಯನ್ನು ಆಧರಿಸಿ ಉದ್ಯೋಗದ ಭರವಸೆ ನೀಡಲಾಗುತ್ತದೆ. ಇದು ಐಒಸಿಎಲ್ ನ ನಿಯಮ ಮತ್ತು ಷರತ್ತಿನ ಮೇಲೆ ನಿರ್ಧರಿಸಲಾಗುತ್ತದೆ.
ಖಾಲಿ ಹುದ್ದೆಗಳು ಮತ್ತು ಅರ್ಹತೆ
ರೋಗಶಾಸ್ತ್ರಜ್ಞ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ರೋಗಶಾಸ್ತ್ರದಲ್ಲಿ ಎಂಡಿ ಅಥವಾ ಡಿಎನ್‌ಬಿ ಪೂರ್ಣಗೊಳಿಸಿರಬೇಕು.
ಚರ್ಮರೋಗ ವೈದ್ಯ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಡರ್ಮಟಾಲಜಿಯಲ್ಲಿ ಎಂಡಿ ಅಥವಾ ಡಿಎನ್‌ಬಿ ಪೂರ್ಣಗೊಳಿಸಿರಬೇಕು.
ದಂತವೈದ್ಯ ಹುದ್ದೆಗೆ ಬಿಡಿಎಸ್ ಅಥವಾ ಎಂಡಿಎಸ್ ಅನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪೂರ್ಣಗೊಳಿಸಿರಬೇಕು.
ಇಎನ್‌ಟಿ ತಜ್ಞ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಎನ್‌ಟಿ ಯಲ್ಲಿ ಎಂಎಸ್ ಅಥವಾ ಡಿಎನ್‌ಬಿ ಪೂರ್ಣಗೊಳಿಸಿರಬೇಕು.
ಮನೋವೈದ್ಯ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮನೋವೈದ್ಯಶಾಸ್ತ್ರದಲ್ಲಿ ಎಂಡಿ ಅಥವಾ ಡಿಎನ್‌ಬಿ ಪೂರ್ಣಗೊಳಿಸಿರಬೇಕು.
ಹೋಮಿಯೋಪತಿ ವೈದ್ಯ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಹೆಚ್‌ಎಂಎಸ್ ಪೂರ್ಣಗೊಳಿಸಿರಬೇಕು.
ಶಸ್ತ್ರಚಿಕಿತ್ಸಕ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಜನರಲ್ ಸರ್ಜರಿಯಲ್ಲಿ ಎಂಎಸ್ ಅಥವಾ ಡಿಎನ್‌ಬಿ ಪೂರ್ಣಗೊಳಿಸಿರಬೇಕು.
ಹೃದ್ರೋಗ ತಜ್ಞ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕಾರ್ಡಿಯಾಲಜಿಯಲ್ಲಿ ಡಿಎಂ ಅಥವಾ ಡಿಎನ್‌ಬಿ ಪೂರ್ಣಗೊಳಿಸಿರಬೇಕು.
ಎಲ್ಲಾ ಹುದ್ದೆಗಳಿಗೂ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಬಳಿಕ ಕನಿಷ್ಠ ಎರಡು ವರ್ಷಗಳ ಅನುಭವ ಪಡೆದಿರುವುದು ಕಡ್ಡಾಯವಾಗಿದೆ.
ಆಯ್ಕೆ ವಿಧಾನ
ಅಧಿಸೂಚನೆಯ ಪ್ರಕಾರ ಅಕ್ಟೋಬರ್ 24 ಮತ್ತು 25ರಂದು ಗುವಾಹಟಿ ರಿಫೈನರಿ ಆಸ್ಪತ್ರೆಯಲ್ಲಿ ಸಂದರ್ಶನ ನಿಗದಿಪಡಿಸಲಾಗಿದೆ.
ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್, ಪಿ.ಓ. ನಲ್ಲಿರುವ ಗುವಾಹಟಿ ರಿಫೈನರಿ ಆಸ್ಪತ್ರೆಯಲ್ಲಿ ಡೆಪ್ಯೂಟಿ ಜನರಲ್ ಮ್ಯಾನೇಜರ್ (HS&E-Med) ಕಚೇರಿಗೆ ನಿಗದಿತ ದಿನಾಂಕದಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ರೊಳಗೆ ವರದಿ ಮಾಡಬೇಕು. ಸಂದರ್ಶನಕ್ಕೆ ಬರುವ ಸಮಯವನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಈ ಮೂಲಕ ಅಭ್ಯರ್ಥಿಯ ಸಮಯಪ್ರಜ್ಞೆಯ ಪರೀಕ್ಷೆಯನ್ನು ನಡೆಸಲಾಗುತ್ತದೆ.
Job News: KPTCLನಿಂದ 2,975 ಹುದ್ದೆಗಳಿಗೆ ಅರ್ಜಿ ಆಹ್ವಾನ, ನ.20 ಕೊನೆಯ ದಿನ
ಆಸಕ್ತ ಅಭ್ಯರ್ಥಿಗಳು ಸಂಬಂಧಿತ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ. ಇದರಲ್ಲಿ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಬಣ್ಣದ ಭಾವಚಿತ್ರ, ಮೂಲ ಮತ್ತು ಫೋಟೊಕಾಪಿ ರೂಪದಲ್ಲಿ ಅನುಭವ ಪ್ರಮಾಣಪತ್ರ, ಇತರ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.