Friday, 22nd November 2024

Delhi Blast: ಸಿಆರ್‌ಇಎಫ್‌ ಶಾಲೆ ಬಳಿ ಭಾರೀ ‍ಸ್ಫೋಟ

CRPF

ನವದೆಹಲಿ: ಕೇಂದ್ರೀಯ ಮೀಸಲು ಪಡೆ(CRPF) ಶಾಲೆಯ ಬಳಿ ಭಾರೀ ಸ್ಫೋಟವೊಂದು ಸಂಭವಿಸಿದೆ. ರೋಹಿಣಿಯ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಸಿಆರ್‌ಪಿಎಫ್ ಶಾಲೆಯ ಹೊರಗೆ ಸ್ಫೋಟ(Delhi Blast) ಸಂಭವಿಸಿದೆ ಎಂದು ವರದಿಯಾಗಿದೆ.ಈ ಸ್ಫೋಟ ಯಾವ ಕಾರಣದಿಂದ ಸಂಭವಿಸಿದೆ ಎಂಬುದು ತಿಳಿದುಬಂದಿಲ್ಲ.

ಬೆಳಗ್ಗೆ 7:50ರ ಸುಮಾರಿಗೆ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ತಕ್ಷಣವೇ ಎರಡು ಅಗ್ನಿಶಾಮಕ ದಳಗಳನ್ನು ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಪ್ರಕಾರ, ಇದುವರೆಗೆ ಯಾವುದೇ ಬೆಂಕಿ ಅಥವಾ ಗೋಡೆಗೆ ಹಾನಿಯಾದ ವರದಿಯಾಗಿಲ್ಲ. ತಂಡವು ಪ್ರದೇಶದಲ್ಲಿ ಶೋಧವನ್ನೂ ನಡೆಸುತ್ತಿದೆ.

ನಿನ್ನೆಯಷ್ಟೇ ಛತ್ತೀಸ್‌ಗಢದಲ್ಲಿ ಮಾವೋವಾದಿಗಳು ಇಟ್ಟಿದ್ದ ಐಇಡಿ ಸ್ಫೋಟ(Maoist IED Attack)ಗೊಂಡ ಪರಿಣಾಮ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP)ಯ ಇಬ್ಬರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಶನಿವಾರ ಐಟಿಬಿಪಿ, ಗಡಿ ಭದ್ರತಾ ಪಡೆ ಮತ್ತು ಜಿಲ್ಲಾ ಮೀಸಲು ಪಡೆ ತಂಡಗಳು ಧುರಬೇಡದಲ್ಲಿ ಕಾರ್ಯಾಚರಣೆ ನಡೆಸಿ ನಾರಾಯಣಪುರಕ್ಕೆ ಹಿಂತಿರುಗುತ್ತಿದ್ದವು. ಅಬುಜ್ಮದ್ ಪ್ರದೇಶದ ಕೊಡ್ಲಿಯಾರ್ ಗ್ರಾಮದ ಬಳಿ ನಿನ್ನೆ ಮಧ್ಯಾಹ್ನ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಗೊಂಡಿದೆ.

ಮಹಾರಾಷ್ಟ್ರದ ಸತಾರಾ ಮೂಲದ ಅಮರ್ ಪನ್ವಾರ್ ಮತ್ತು ಆಂಧ್ರಪ್ರದೇಶದ ಕಡಪಾ ಮೂಲದ ಕೆ ರಾಜೇಶ್ ಎಂಬ ಇಬ್ಬರು ಐಟಿಬಿಪಿ ಯೋಧರು ಮೃತಪಟ್ಟಿದ್ದಾರೆ. ಪನ್ವಾರ್ ಮತ್ತು ರಾಜೇಶ್ ಇಬ್ಬರೂ 36 ವರ್ಷ ವಯಸ್ಸಿನವರಾಗಿದ್ದರು ಮತ್ತು ಐಟಿಬಿಪಿಯ 53 ನೇ ಬೆಟಾಲಿಯನ್‌ನ ಭಾಗವಾಗಿದ್ದರು. ನಾರಾಯಣಪುರ ಜಿಲ್ಲಾ ಪೊಲೀಸ್‌ನಿಂದ ಗಾಯಗೊಂಡ ಇಬ್ಬರು ಪೊಲೀಸ್ ಸಿಬ್ಬಂದಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಸ್ಥಿರರಾಗಿದ್ದಾರೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನೂ ಓದಿ: Maoist IED Attack: ನಕ್ಸಲರಿಂದ IED ಸ್ಫೋಟ; ಇಬ್ಬರು ಯೋಧರು ಹುತಾತ್ಮ