ಜಾತಿ ಜನಗಣತಿ ಜಾರಿಯಾದರೆ ಬಲಿಜ ಸಮುದಾಯಕ್ಕೆ ಅನುಕೂಲವಾಗಲಿದೆ
ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಜಾತಿ ಜನಗಣತಿ ವರದಿ ಜಾರಿಯಾಗುವುದಾದರೆ ನಮ್ಮ ಬಲಿಜ ಸಮುದಾಯಕ್ಕೆ ಒಳಿತಾಗುವ ನಂಬಿಕೆಯಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರ ಹೊರವಲಯ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉಪ ನಿರ್ದೇ ಶಕರು ಶಾಲಾ ಶಿಕ್ಷಣ ಮತತು ಸಾಕ್ಷರತಾ ಇಲಾಖೆ ವತಿಯಿಂದ 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಫಲಿತಾಂಶ ವೃದ್ಧಿಗಾಗಿ ಏರ್ಪಡಿಸಿದ್ದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.
2ಎಮೀಸಲಿಗೆ ಬದ್ಧ
ನಾನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಬರುವ ಬಲಿಜ ಸಮುದಾಯಕ್ಕೆ ಸೇರಿದವನು.ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಸಿದ್ಧಪಡಿಸಿರುವ ಜಾತಿಗಣತಿಯನ್ನು ಸರಕಾರಿ ಒಪ್ಪಿಕೊಂಡು ಜಾರಿ ಮಾಡಿದ್ದೇ ಆದಲ್ಲಿ ನಮ್ಮ ಸಮುದಾಯಕ್ಕೆ ಒಳಿತಾಗುವ ನಂಬಿಕೆಯಿದೆ. ಈಗಾಗಲೇ ನಾನು ಸಿಎಂ ಸಿದ್ದರಾಮಯ್ಯ ನವರ ಬಳಿ ನನ್ನ ಸಮುದಾಯಕ್ಕೆ ಉದ್ಯೋಗದ ವಿಚಾರದಲ್ಲಿ 2ಎ ಮೀಸಲಾತಿ ಕಲ್ಪಿಸಲು ಬೇಡಿಕೆ ಇಟ್ಟಿದ್ದೇನೆ. ಹೀಗಾಗಿ ಜಾತಿಗಣತಿ ವರದಿ ಬಿಡುಗಡೆ ಆದರೆ ನಮ್ಮ ಬಲಿಜ ಸಮುದಾಯಕ್ಕೆ ಒಳಿತಾಗಲಿದೆ. ನನ್ನ ಸಮುದಾಯದ ಪರವಾಗಿ ಇದನ್ನು ಕೇಳುವುದು ನನ್ನ ಧರ್ಮ ಕರ್ತವ್ಯ. ಆದರೆ ವರದಿ ಜಾರಿ ಮಾಡಲೇಬೇಕು ಎಂದು ನಾನು ಆದೇಶ ಮಾಡಲಾಗಲಿ, ಆಗ್ರಹಪಡಿಸಲಾಗಲಿ ಮಾಡಲಾಗುವುದಿಲ್ಲ. ಮುಂದಿನ ಬಾರಿ ಎಂಎಲ್‌ಎ ಆಗೋವಷ್ಟರಲ್ಲಿ ೨ಎ ಮೀಸಲಾತಿ ಜಾರಿ ಆಗುವಂತೆ ಮಾಡ್ತೀನಿ. ಇದು ನನ್ನ ಸಮುದಾಯಕ್ಕೆ ನಾನು ಕೊಡುವ ಸ್ಪಷ್ಟ ಭರವಸೆಯಾಗಿದೆ ಎಂದು ಹೇಳಿದ್ದಾರೆ.
ಜಾತಿಗಣತಿ ಹೊರಬರಲಿ
ಜಾತಿ ಗಣತಿ ಬಗ್ಗೆ ಯಾರು ಏನೇ ಮಾತನಾಡಲಿ ಚರ್ಚೆಗಳು ಆಗಲಿ, ನನ್ನ ಅಭಿಪ್ರಾಯದಲ್ಲಿ ಅದು ಜಾರಿಗೆ ಬರಬೇಕು. ಬಂದರೆ ಜಾತಿಗಳ ಅಂಕಿಸ0ಖ್ಯೆಯ ಬಗ್ಗೆ ಸ್ಪಷ್ಟವಾದ ಮಾಹಿತಿ ಗೊತ್ತಾಗಲಿದೆ.ಯಾವ ಯಾವ ಸಮುದಾಯದ ಅಂಕಿ ಅಂಶಗಳು ಏನು ಎಂಬುದು ಗೊತ್ತಾಗಲಿದೆ. ಚಿಕ್ಕಬಳ್ಳಾಪುರದಲ್ಲಿಯೇ ನೋಡಿ 2 ಲಕ್ಷದ 12೨ ಸಾವಿರ ಒಟ್ಟು ಮತದಾರರು ಇದ್ದಾರೆ. 2011ರ ಗಣತಿ ಪ್ರಕಾರ 54 ಸಾವಿರ ಎಸ್ಸಿ, 27 ಸಾವಿರ ಎಸ್ಟಿ, 22 ಸಾವಿರ ಮುಸ್ಲಿಂ ಸಮುದಾಯ ಇದೆ. ಹಾಗೆ ನೋಡಿದರೆ ಒಂದು ಕಾಲು ಲಕ್ಷ ಎಸ್ಸಿ,ಎಸ್ಟಿ, ಮುಸ್ಲಿಂ ಜನಸಂಖ್ಯೆಯಿದೆ. ಉಳಿದ 80 ಸಾವಿರದಲ್ಲಿ ಮಿಕ್ಕಿದ್ದೆಲ್ಲಾ ಸಮುದಾಯಗಳು ಇವೆ.ಬಲಜಿಗರು, ಒಕ್ಕಲಿಗರು, ಯಾದವರು, ಲಿಂಗಾಯತರು, ಬ್ರಾಹ್ಮಣರು ಕುಂಬಾರ ಕಮ್ಮಾರ ಸೇರಿ ಎಲ್ಲರೂ ಇದ್ದಾರೆ. ಇವು ಯಾವುವೂ ಕೂಡ 20 ಸಾವಿರಕ್ಕೂ ಮೀರುವುದಿಲ್ಲ. ಇದನ್ನು ಅರಿಯದೆ ಸಮುದಾಯದ ಮುಖಂಡರು ನಾವು ಅಷ್ಟಿದ್ದೇವೆ, ಇಷ್ಟಿದ್ದೇವೆ ಎಂದು ತಪ್ಪು ತಪ್ಪು ಅಂಕಿ ಅಂಶಗಳನ್ನು ಕೊಡುತ್ತಿದ್ದಾರೆ ಎಂದರು. ಆದ್ದರಿಂದ ಜಾತಿಗಣತಿ ವರದಿ ಆಚೆ ಬಂದರೆ ಯಾವ ಸಮುದಾಯದ ನಂಬರ್ ಏನಿದೆಯೋ ಅದರಂತೆ ಪ್ರಾತಿನಿಧ್ಯ ಕೊಡುತ್ತಾರೆ ಎಂದರು.
ಸದನದಲ್ಲಿ ಪ್ರಶ್ನಿಸುವೆ?
ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಜಲ್ಲಿಕ್ರಶರ್ ಹಾವಳಿಯಿಂದಾಗಿ ಅಮಾಯಕರ ಜೀವಹಾನಿಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ನಿತ್ಯವೂ ದೂರುಗಳು ಕೇಳಿಬರುತ್ತಿವೆ.ನಾನು ಶಾಸಕನಾದ ಪ್ರಾರಂಭದ ದಿನದಿಂದಲೂ ಕ್ರರ‍್ಸ್ ಹಾವಳಿ ತಡೆಯುವ ಬಗ್ಗೆ ಮಾತನಾಡುತ್ತಲೇ ಬಂದಿದ್ದೇನೆ.ಈ ಬಗ್ಗೆ ವಿಧಾನಸಭೆಯಲ್ಲಿ ಕೂಡ ದನಿಯೆತ್ತಲು ಸಿದ್ಧತೆ ಮಾಡಿಕೊಂಡಿದ್ದೇನೆ.ಏನೇ ಆಗಲಿ ಜನಸಾಮಾನ್ಯರ ಜೀವದ ಜತೆ ಟಿಪ್ಪರ್ ಮಾಲಿಕರು ಚಾಲಕರು ಚೆಲ್ಲಾಟವಾಡುವುದು ತಪ್ಪು. ಆರ್‌ಟಿಒ ಅಧಿಕಾರಿಗಳು ಇವರ ಉಪಟಳಕ್ಕೆ ನಿಯಂತ್ರಣ ಹಾಕಲು ಮುಂದಾದರೂ ಕೆಲವರು ಇದನ್ನು ಬೇರೆ ರೀತಿಯಲ್ಲಿ ತಿರುಗಿಸಲು ಯತ್ನಿಸುತ್ತಿರುವುದನ್ನು ನೀವೇ ಕಂಡಿದ್ದೀರಿ. ಹೀಗಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶಾಶ್ವತ ಪರಿಹಾರ ಕಂಡುಹಿಡಿಯಲು ಮುಂದಾಗಿದ್ದೇನೆ ಎಂದರು.
ಒಳಮೀಸಲಾತಿ ಬಗ್ಗೆ ಗೊತ್ತಿಲ್ಲ ?
ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ದಲಿತ ಸಂಘಟನೆಗಳು ನಿರಂತರವಾಗಿ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಯಿಸಿದ ಶಾಸಕ ಪ್ರದೀಪ್ ಈಶ್ವರ್ ಈಬಗ್ಗೆ ನನಗೆ ಮಾಹಿತಿಯಿಲ್ಲ. ತಿಳಿದು ಕೊಂಡು ಮಾತನಾಡುತ್ತೇನೆ ಎಂದರು.
ಇದನ್ನೂ ಓದಿ: MLA Pradeep Eshwar: 10 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾದ ಶಾಸಕ ಪ್ರದೀಪ್ ಈಶ್ವರ್