Thursday, 24th October 2024

Crime News : ಮಂಗಳೂರಿನಲ್ಲಿ ರೈಲು ಹಳಿ ಮೇಲೆ ಕಲ್ಲಿಟ್ಟು ದುಷ್ಕೃತ್ಯಕ್ಕೆ ಯತ್ನ

Crime News

ಮಂಗಳೂರು: ದೇಶದ ಎಲ್ಲೆಡೆ ರೈಲು ಅವಘಡಗಳು ನಡೆಯುತ್ತಲೇ ಇವೆ. ಅದಕ್ಕೆಅನೇಕ ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ. ಕೆಲವರು ರೈಲಿನ ಸುರಕ್ಷತೆಯ ಲೋಪ ಎಂದು ಹೇಳಿದರೆ ಇನ್ನೂ ಕೆಲವರು ಇದು ದುಷ್ಕರ್ಮಿಗಳ ಕೃತ್ಯ (Crime News) ಎಂದು ಆರೋಪಿಸಿದ್ದಾರೆ. ರಾಷ್ಟ್ರೀಯ ಭದ್ರತಾ ದಳ ಈ ದೃಷ್ಟಿಕೋನದಲ್ಲಿ ತನಿಖೆ ನಡೆಸುತ್ತಿದೆ. ಇವೆಲ್ಲದ ನಡುವೆ ಮಂಗಳೂರು ಸಮೀಪದ ರೈಲು ಹಳಿಯ ಮೇಲೆ ಕಲ್ಲಿಟ್ಟು ಹಳಿ ತಪ್ಪಿಸಲು ಯತ್ನಿಸಿದ ಘಟನೆಯೊಂದು ವರದಿಯಾಗಿದೆ.

ಮಂಗಳೂರಿನ ಉಳ್ಳಾಲದ ತೊಕ್ಕೊಟ್ಟುವಿಲ್ಲಿಯಲ್ಲಿ ಮಂಗಳೂರು-ಕೇರಳ ರೈಲು ಮಾರ್ಗದ ಹಳಿಗಳ ಮೇಲೆ ದುಷ್ಕರ್ಮಿಗಳು ಕಲ್ಲು ಇಟ್ಟು ಪರಾರಿಯಾಗಿದ್ದಾರೆ. ರೈಲುಗಳ ಸಂಚಾರಿಸಿದ ವೇಳೆ ದೊಡ್ಡ ಸದ್ದು ಕೇಳಿ ಸ್ಥಳಿಯರು ಆತಂಕಗೊಂಡಿದ್ದು, ಸ್ಥಳಕ್ಕೆ ಹೋಗಿ ನೋಡಿದಾಗ ರೈಲ್ವೆ ಹಳಿಗಳ ಮೇಲೆ ಕಲ್ಲು ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಇನ್ನು ತಡರಾತ್ರಿ ರೈಲ್ವೆ ಹಳಿಗಳ ಮೇಲೆ ಕಲ್ಲು ದುಷ್ಕರ್ಮಿಗಳು ಕಲ್ಲು ಇಟ್ಟಿದ್ದಾರೆ. ಎನ್ನಲಾಗಿದೆ. ಸ್ಥಳೀಯರು ಇಬ್ಬರು ದುಷ್ಕರ್ಮಿಗಳು ಕಲ್ಲು ಇಟ್ಟಿರುವುದನ್ನು ನೋಡಿರುವುದಾಗಿ ಹೇಳಿದ್ದಾರೆ.

ಹಳಿ ತಪ್ಪಿದ ಅಗರ್ತಲಾ- ಮುಂಬೈ ಎಕ್ಸ್‌ಪ್ರೆಸ್ ರೈಲು

ತ್ರಿಪುರಾದ ಅಗರ್ತಲಾದಿಂದ ಮುಂಬೈಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್ ಮತ್ತು ಏಳು ಬೋಗಿಗಳು (Indian Railways) ಅಸ್ಸಾಂನ ದಿಬೋಲಾಂಗ್ ನಿಲ್ದಾಣದಲ್ಲಿ ಅಕ್ಟೋಬರ್‌ 17ರಂದು ಮಧ್ಯಾಹ್ನ 3: 55 ರ ಸುಮಾರಿಗೆ ಹಳಿ ತಪ್ಪಿತ್ತು. ಘಟನೆಯಲ್ಲಿ ಯಾವುದೇ ಸಾವು ಅಥವಾ ದೊಡ್ಡ ಗಾಯಗಳ ಬಗ್ಗೆ ವರದಿಯಾಗಿರಲಿಲ್ಲ. ಹಳಿ ತಪ್ಪಿದ ಬೋಗಿಗಳಲ್ಲಿ ರೈಲಿನ ಪವರ್ ಕಾರ್ ಕೂಡ ಸೇರಿತ್ತು.

12520 ಅಗರ್ತಲಾ-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್ಪ್ರೆಸ್ ಇಂದು ಬೆಳಿಗ್ಗೆ ಅಗರ್ತಲಾದಿಂದ ಹೊರಟಿತು. ಅಸ್ಸಾಂನ ಲುಮ್ಡಿಂಗ್-ಬದರ್ಪುರ್ ಬೆಟ್ಟದ ಬಳಿ ದುರ್ಘಟನೆ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಹಿರಿಯ ಅಧಿಕಾರಿಗಳೊಂದಿಗೆ ಅಪಘಾತ ಪರಿಹಾರ ರೈಲು ಮತ್ತು ಅಪಘಾತ ಪರಿಹಾರ ವೈದ್ಯಕೀಯ ರೈಲು ಈಗಾಗಲೇ ಲುಮ್ಡಿಂಗ್ ನಿಂದ ಅಪಘಾತದ ಸ್ಥಳಕ್ಕೆ ತೆರಳಿತ್ತು.

ಅಧಿಕಾರಿಗಳು ಸದ್ಯಕ್ಕೆ ಲುಮ್ಡಿಂಗ್-ಬದರ್ಪುರ ವಿಭಾಗದಲ್ಲಿ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ.