Friday, 22nd November 2024

Director Guruprasad: ನಿರ್ದೇಶಕ ಗುರುಪ್ರಸಾದ್ ವಿರುದ್ಧ ದೂರು ದಾಖಲು; ಕಾರಣವೇನು?

Director Guruprasad

ಬೆಂಗಳೂರು: ಸ್ಯಾಂಡಲ್‌ವುಡ್‌ ನಿರ್ದೇಶಕ, ನಟ ಗುರುಪ್ರಸಾದ್ ವಿರುದ್ಧ ದೂರು ದಾಖಲಾಗಿದೆ. ಜಯನಗರದ ಟೋಟಲ್ ಕನ್ನಡ ಮಳಿಗೆ ಮಾಲೀಕ ಲಕ್ಷ್ಮೀಕಾಂತ್ ಅವರು ಗುರುಪ್ರಸಾದ್ (Director Guruprasad) ವಿರುದ್ಧ ಜಯನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ʼ ಮಠʼ, ʼಎದ್ದೇಳು ಮಂಜುನಾಥʼ ದಂತಹ ಸಿನಿಮಾಗಳಿಂದ ಖ್ಯಾತಿಯಾದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಪುಸ್ತಕ ಮತ್ತು ಸಿಡಿಗಳನ್ನು ಖರೀದಿಸಿ ಹಣ ನೀಡದಿರುವ ಆರೋಪ ಕೇಳಿಬಂದಿದೆ. ಗುರುಪ್ರಸಾದ್‌ 2019ರಲ್ಲಿ ಟೋಟಲ್‌ ಕನ್ನಡ ಮಳಿಗೆಯಲ್ಲಿ ಕನ್ನಡ ಸಾಹಿತ್ಯ ಹಾಗೂ ಸಿನಿಮಾ ಸಂಬಂಧಿತ ಪುಸ್ತಕಗಳನ್ನು ಖರೀದಿ ಮಾಡಿದ್ದರು. ಇದರೊಂದಿಗೆ ಅವರು ಸಾಹಿತ್ಯಕ್ಕೆ ಸಂಬಂಧಿಸಿದ್ದ ಸಿಡಿಗಳನ್ನು ಖರೀದಿ ಮಾಡಿದ್ದರು. ಆದರೆ, ಖರೀದಿಸಿದ್ದ ವಸ್ತುಗಳಿಗೆ ಹಣ ನೀಡಿಲ್ಲ ಎಂದು ಲಕ್ಷ್ಮೀಕಾಂತ್ ಆರೋಪಿಸಿದ್ದಾರೆ.

ತಾವು ತರಬೇತಿ ನೀಡುವ ವಿದ್ಯಾರ್ಥಿಗಳಿಗೆ ಓದಲು ಬೇಕಾದ ನೂರು ಪುಸ್ತಕ ಬೇಕು ಎಂದು ರಿಯಾಯಿತಿ ದರದಲ್ಲಿ ಗುರುಪ್ರಸಾದ್ ಕೇಳಿದ್ದರು. ಅವರು 75 ಪುಸ್ತಕಗಳ ಐದು ಸೆಟ್​ ಖರೀದಿಸಿದ್ದರು. ಒಂದು ಸೆಟ್​ಗೆ 13 ಸಾವಿರದಂತೆ ಐದು ಸೆಟ್ ಪುಸ್ತಕಗಳಿಗೆ 65 ಸಾವಿರ ನೀಡಬೇಕು. ಆದರೆ, ಪುಸ್ತಕ ಮತ್ತು ಸಿಡಿಗಳ ಹಣ ಕೊಡದೆ ಸತಾಯಿಸುತ್ತಿದ್ದಾರೆ. ಕರೆ ಮಾಡಿದರೂ ರಿಸೀವ್‌ ಮಾಡುತ್ತಿಲ್ಲ. ಇದಲ್ಲದೆ ಮನೆಯ ವಿಳಾಸ ಕೂಡ ಬದಲಾಯಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Sudeep Mother Passed away : ಪತ್ರಿಕಾಗೋಷ್ಠಿ ಕ್ಯಾನ್ಸಲ್; ಸುದೀಪ್ ತಾಯಿ ಕುರಿತು ಲಾಯರ್ ಜಗದೀಶ್ ಮಾರ್ಮಿಕ ಮಾತು

ಮಂಗಳೂರಿನಲ್ಲಿ ರೈಲು ಹಳಿ ಮೇಲೆ ಕಲ್ಲಿಟ್ಟು ದುಷ್ಕೃತ್ಯಕ್ಕೆ ಯತ್ನ

ಮಂಗಳೂರು: ದೇಶದ ಎಲ್ಲೆಡೆ ರೈಲು ಅವಘಡಗಳು ನಡೆಯುತ್ತಲೇ ಇವೆ. ಅದಕ್ಕೆಅನೇಕ ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ. ಕೆಲವರು ರೈಲಿನ ಸುರಕ್ಷತೆಯ ಲೋಪ ಎಂದು ಹೇಳಿದರೆ ಇನ್ನೂ ಕೆಲವರು ಇದು ದುಷ್ಕರ್ಮಿಗಳ ಕೃತ್ಯ (Crime News) ಎಂದು ಆರೋಪಿಸಿದ್ದಾರೆ. ರಾಷ್ಟ್ರೀಯ ಭದ್ರತಾ ದಳ ಈ ದೃಷ್ಟಿಕೋನದಲ್ಲಿ ತನಿಖೆ ನಡೆಸುತ್ತಿದೆ. ಇವೆಲ್ಲದ ನಡುವೆ ಮಂಗಳೂರು ಸಮೀಪದ ರೈಲು ಹಳಿಯ ಮೇಲೆ ಕಲ್ಲಿಟ್ಟು ಹಳಿ ತಪ್ಪಿಸಲು ಯತ್ನಿಸಿದ ಘಟನೆಯೊಂದು ವರದಿಯಾಗಿದೆ.

ಮಂಗಳೂರಿನ ಉಳ್ಳಾಲದ ತೊಕ್ಕೊಟ್ಟುವಿಲ್ಲಿಯಲ್ಲಿ ಮಂಗಳೂರು-ಕೇರಳ ರೈಲು ಮಾರ್ಗದ ಹಳಿಗಳ ಮೇಲೆ ದುಷ್ಕರ್ಮಿಗಳು ಕಲ್ಲು ಇಟ್ಟು ಪರಾರಿಯಾಗಿದ್ದಾರೆ. ರೈಲುಗಳ ಸಂಚಾರಿಸಿದ ವೇಳೆ ದೊಡ್ಡ ಸದ್ದು ಕೇಳಿ ಸ್ಥಳಿಯರು ಆತಂಕಗೊಂಡಿದ್ದು, ಸ್ಥಳಕ್ಕೆ ಹೋಗಿ ನೋಡಿದಾಗ ರೈಲ್ವೆ ಹಳಿಗಳ ಮೇಲೆ ಕಲ್ಲು ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಇನ್ನು ತಡರಾತ್ರಿ ರೈಲ್ವೆ ಹಳಿಗಳ ಮೇಲೆ ಕಲ್ಲು ದುಷ್ಕರ್ಮಿಗಳು ಕಲ್ಲು ಇಟ್ಟಿದ್ದಾರೆ. ಎನ್ನಲಾಗಿದೆ. ಸ್ಥಳೀಯರು ಇಬ್ಬರು ದುಷ್ಕರ್ಮಿಗಳು ಕಲ್ಲು ಇಟ್ಟಿರುವುದನ್ನು ನೋಡಿರುವುದಾಗಿ ಹೇಳಿದ್ದಾರೆ.