ಚಿಕ್ಕಬಳ್ಳಾಪುರ : ಕಾಲುಬಾಯಿ ಜ್ವರವು ಎಲ್ಲಾ ಸೀಳು ಗೊರಸುಳ್ಳ ಪ್ರಾಣಿಗಳಾದ ದನ, ಎಮ್ಮೆ, ಹಂದಿ,ಕುರಿ, ಮೇಕೆ ಹಾಗೂ ಕಾಡು ಪ್ರಾಣಿಗಳಾದ ಜಿಂಕೆ, ಕಾಡೆಮ್ಮೆ, ಮುಂತಾದ ಪ್ರಾಣಿಗಳಲ್ಲಿ ವೈರಾಣುವಿನಿಂದ ಬರುವ ಕಾಯಿಲೆ ಯಾಗಿದ್ದು ಸಕಾಲದಲ್ಲಿ ಲಸಿಕೆ ಹಾಕಿಸಿದರೆ ಜೀವಹಾನಿ ತಪ್ಪಿಸಬಹುದು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ನಗರ ಹೊರವಲಯದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಕೈಗೊಳ್ಳಲಾಗುವ ೬ನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಲುಬಾಯಿ ರೋಗವು ಸಾಂಕ್ರಾಮಿಕ ರೋಗವಾಗಿದ್ದು,ಗಾಳಿಯ ಮೂಲಕ ಹರಡುತ್ತದೆ. ಈ ರೋಗದಿಂದ ರಾಸುಗಳಲ್ಲಿ ನಿಶ್ಯಕ್ತಿ ಹೆಚ್ಚಿ ಹಾಲಿನ ಇಳುವರಿ ಕಡಿಮೆ ಆಗುವ ಮೂಲಕ ಆರ್ಥಿಕ ಹಾನಿಯಾಗುತ್ತದೆ. ಈ ರೋಗದಿಂದ ನಮ್ಮ ರಾಷ್ಟçಕ್ಕೆ ಪ್ರತಿ ವರ್ಷ ಅಪಾರ ನಷ್ಟವಾಗುತ್ತದೆ ಎಂದು ತಿಳಿಸಿದರು
ಈ ಹಿಂದೆ ಕಾಲುಬಾಯಿ ರೋಗ ನಿಯಂತ್ರಣ ಕಾರ್ಯಕ್ರಮವು ೨೦೦೨ ರಿಂದ ೨೦೧೯ ರ ತನಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ೬೦:೪೦ ಅನುಪಾತದ ಅನುದಾನದಲ್ಲಿ ೧೭ ಸುತ್ತಿನ ಲಸಿಕಾ ಅಭಿಯಾನ ನಡೆದಿದೆ. ಮಾನ್ಯ ಪ್ರಧಾನ ಮಂತ್ರಿಗಳು ಘೋಷಿಸಿರುವಂತೆ ೬ ನೇ ಹಂತದ ಲಸಿಕಾ ಅಭಿಯಾನ ಇದೆ ಅಕ್ಟೋಬರ್ ೨೧ ರಿಂದ ನವೆಂಬರ್ ೨೦ ರವರೆಗೆ ಸಂಪೂರ್ಣ ಕೇಂದ್ರ ಸರ್ಕಾರದ ಅನುದಾನದಲ್ಲಿ ನಡೆಯಲಿದೆ ಎಂದರು.
ಪ್ರಸ್ತುತ ಸಾಲಿನಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಕೈಗೊಳ್ಳಲಾಗಿರುವ ೫ನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಲಸಿಕಾ ಪೂರ್ವದಲ್ಲಿ ಭೌತಿಕ ಜಾನುವಾರುಗಳ ಸರ್ವೆಯನ್ನು ಮಾಡಲಾಗಿತ್ತು. ೫ನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಕಳೆದ ಏಪ್ರಿಲ್-೨೦೨೪ ಮತ್ತು ಮೇ-೨೦೨೪ನೇ ಮಾಹೆಯಲ್ಲಿ ಹಮ್ಮಿಕೊಂಡು ವಾಸ್ತವಿಕವಾಗಿ ೧,೭೭,೬೬೧ (ಹಸು, ಎಮ್ಮೆ) ಜಾನುವಾರುಗಳ ಪೈಕಿ ೧,೭೬,೧೯೧ ಜಾನುವಾರುಗಳಿಗೆ ಲಸಿಕೆ ಹಾಕಿ ಜಿಲ್ಲೆಯಲ್ಲಿ ಶೇ. ೯೯ ರಷ್ಟು ಪ್ರಗತಿ ಸಾಧಿಸ ಲಾಗಿದೆ. ಈ ರೋಗವನ್ನು ನಿಯಂತ್ರಿಸಲು ಪ್ರತಿ ೬ ತಿಂಗಳಿಗೊಮ್ಮೆ ನಿರಂತರವಾಗಿ ಲಸಿಕೆಯನ್ನು ಹಾಕಿಸುವು ದರಿಂದ ಮಾತ್ರ ಸಾಧ್ಯ, ಎಂಬುದನ್ನು ವಿಜ್ಞಾನಿಗಳು ನಿರಂತರವಾಗಿ ಸಂಶೋಧನೆ ನಡೆಸಿ ಕಂಡುಕೊಂಡಿರುತ್ತಾರೆ.
ಭಾರತ ಸರ್ಕಾರದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ೬ ನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅಕ್ಟೋಬರ್ ೨೧ ರಿಂದ ನವೆಂಬರ್ ೨೦ ರವರೆಗೆ ಒಟ್ಟು ೩೦ ದಿನಗಳು ಹಮ್ಮಿಕೊಳ್ಳಲಾಗಿದೆ. ಲಸಿಕೆಗೆ ಒಳಪಡುವ ಜಾನುವಾರುಗಳಿಗೆ ಅಧಾರ್ ಸಂಖ್ಯೆಯಂತೆ ೧೨ ಸಂಖ್ಯೆಯುಳ್ಳ ಕಿವಿಯೋಲೆಗಳನ್ನು (ಇಚಿಡಿ ಖಿಚಿgs) ಅಳವಡಿಸಿ ಃhಚಿಡಿಚಿಣh Pಚಿshuಜhಚಿಟಿ ತಂತ್ರಾAಶದಲ್ಲಿ ಪೂರ್ಣ ಮಾಹಿತಿಯನ್ನು ದಾಖಲಿಸುವುದು ಕಡ್ಡಾಯವಾಗಿರುತ್ತದೆ. ಈ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪಶುಪಾಲನಾ ಇಲಾಖೆ ಹಾಗೂ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಸಹಯೋಗದೊಂದಿಗೆ ನಡೆಸಲಾಗುವುದು.
೨೦೧೯ ರಲ್ಲಿ ಹಮ್ಮಿಕೊಂಡ ಜಾನುವಾರು ಗಣತಿಯ ಪ್ರಕಾರ ಜಿಲ್ಲೆಯಲ್ಲಿರುವ ಒಟ್ಟು ಜಾನುವಾರುಗಳ ಸಂಖ್ಯೆ (ದನ +ಎಮ್ಮೆ) ೨,೪೦,೨೧೨ ಆಗಿದ್ದು ಈ ಜಾನುವಾರುಗಳಿಗೆ ಲಸಿಕೆ ಹಾಕಲು ೭೩ ತಾಂತ್ರಿಕ ಲಸಿಕಾ ತಂಡಗಳನ್ನು ರಚಿಸಲಾಗಿದೆ. ಒಬ್ಬ ಪಶು ವೈದ್ಯಾಧಿಕಾರಿಯು ಪ್ರತಿ ತಂಡದ ಮುಖ್ಯಸ್ಥರಾಗಿರುತ್ತಾರೆ. ಕಾರ್ಯಕ್ರಮದಲ್ಲಿ ಪ್ರಚಾರ ಸಾಮಗ್ರಿಗಳಾದ ಬ್ಯಾನರ್ ಪೋಸ್ಟರ್, ಕರಪತ್ರಗಳು ಹಾಗೂ ಇತ್ಯಾದಿಗಳ ಮುಖಾಂತರ ಪ್ರಚಾರ ಮಾಡಲಾಗುತ್ತದೆ. ಲಸಿಕಾ ತಂಡ ಭೇಟಿ ನೀಡುವ ಹಿಂದಿನ ದಿನ ಆಯಾ ಹಾಲು ಉತ್ಪಾದಕರ ಸಹಕಾರ ಸಂಘದ ಸಹಕಾರದೊಂದಿಗೆ ಹಳ್ಳಿಯಲ್ಲಿ ಟಾಂಟಾA ಹಾಕಿಸಿ ಪ್ರಚಾರ ನಡೆಸಲಾಗುತ್ತದೆ ರೈತರು, ಸಾರ್ವಜನಿಕರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಂಡು ಸಹಕಾರ ನೀಡುವಂತೆ ಮನವಿ ಮಾಡಿದರು.
ಪ್ರಸ್ತುತ ಈ ಕಾರ್ಯಕ್ಕೆ ಜಿಲ್ಲೆಯಲ್ಲಿ ಲಸಿಕಾದಾರರು ಸೇರಿ ಒಟ್ಟು ೨೨೦ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತೊಡಗಿಸಲಾಗಿದೆ. ಒಟ್ಟು ೧,೮೯,೮೦೦ ಡೋಸ್ ಲಸಿಕೆ ಸರಬರಾಜಾಗಿದ್ದು, ಲಸಿಕೆಗೆ ಅಗತ್ಯವಿರುವ ಸಿರಂಜ್, ನೀಡಲ್ ಹಾಗೂ ತುರ್ತು ಔಷಧಿಗಳು ಸರಬರಾಜಾಗಿದೆ. ಪ್ರತಿ ಲಸಿಕೆದಾರರು (ವಾಕ್ಸಿನೇಟರ್) ಪ್ರತಿ ದಿನ ೫೦ ರಿಂದ ೬೦ ಜಾನುವಾರುಗಳಿಗೆ ಲಸಿಕೆ ಹಾಕುತ್ತಾರೆ.
ಕಳೆದ ಸುತ್ತಿನಂತೆ ಈ ಬಾರಿಯೂ ಆನ್ ಲೈನ್ ಮುಖಾಂತರ ಪ್ರತಿದಿನದ ಪ್ರಗತಿಯನ್ನು ತಾಲ್ಲೂಕು ಪಶು ಆಸ್ಪತ್ರೆಯಲ್ಲಿ ಎಂಟ್ರಿ ಮಾಡಲಾಗುವುದು. ಇದಕ್ಕೆ ಪೂರಕವಾಗಿ ಎಲ್ಲಾ ೬ ತಾಲ್ಲೂಕುಗಳಲ್ಲಿ ಆನ್ ಲೈನ್ ವಿಲೇಜ್ ಮ್ಯಾಪಿಂಗ್ ಅನ್ನು ಈಗಾಗಲೇ ಪೂರ್ಣಗೊಳಿಸಿದೆ. ಪ್ರತಿ ದಿನದಲ್ಲಿ ಆಗಿರುವ ಲಸಿಕಾ ಪ್ರಗತಿಯನ್ನು ಈ ವೆಬ್ ಸೈಟ್‌ನಲ್ಲಿ ನೋಡಬಹುದಾಗಿದೆ ಎಂದು ಮಾಹಿತಿ ನೀಡಿದರು.
ಕಾಲು ಬಾಯಿ ರೋಗೋದ್ರೇಕ ತಡೆಗಟ್ಟಲು ಹಾಗೂ ಲಸಿಕೆ ಪರಿಣಾಮವನ್ನು ತಿಳಿಯಲು ರಕ್ತ ಮಾದರಿ ಸೀರಂ ಸ್ಯಾಂಪಲ್ ಗಳನ್ನು ಪ್ರತಿ ತಾಲ್ಲೂಕಿನ ನಿರ್ದಿಷ್ಟ ಗ್ರಾಮಗಳ ರಾಸುಗಳಲ್ಲಿ ಲಸಿಕೆ ಕಾರ್ಯಕ್ರಮ ಪ್ರಾರಂಭವಾಗುವ ಮುನ್ನ ಅಂದರೆ ೦ ದಿನ ಹಾಗೂ ಲಸಿಕೆ ಹಾಕಿದ ೨೮ ದಿನಗಳ ತರುವಾಯ ಸೀರಂ ಮಾದರಿ ಸಂಗ್ರಹಿಸಿ ಪ್ರಯೋಗ ಶಾಲೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು. ಇದರಿಂದ ಜಾನುವಾರುಗಳಲ್ಲಿ ಕಾಲು ಬಾಯಿ ರೋಗದ ವಿರುದ್ಧ ರೋಗ ನಿರೋಧಕ ಶಕ್ತಿ ಎಷ್ಟು ಪ್ರಮಾಣದಲ್ಲಿ ವೃದ್ಧಿಸಿದೆ ಎಂಬುದನ್ನು ತಿಳಿಯಬಹುದಾಗಿದೆ ಎಂದರು.
ಈ ಲಸಿಕಾ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಂಡು ರೈತರು ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಿ ಅಮೂಲ್ಯವಾದ ಜಾನುವಾರು ಸಂಪತ್ತನ್ನು ರಕ್ಷಿಸಿಕೊಳ್ಳಬೇಕೆಂದು ಅವರು ಕೋರಿದರು.
“ಜಾನುವಾರು ಮಾಲೀಕರು ಈ ಸದಾವಕಾಶವನ್ನು ಬಳಸಿಕೊಂಡು ತಮ್ಮ ಜಾನುವಾರುಗಳನ್ನು ‘ಕಾಲು ಬಾಯಿ ಜ್ವರ’ ರೋಗದಿಂದ ರಕ್ಷಿಸುವಂತೆ ಹಾಗೂ ಲಸಿಕಾದಾರರು ತಮ್ಮ ಗ್ರಾಮಕ್ಕೆ ಭೇಟಿ ನೀಡಿದಾಗ ಅಗತ್ಯ ಸಹಕಾರ ನೀಡಿ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು.”
ಈ ವೇಳೆ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ “ಭಾರತ ಸರ್ಕಾರದ ಯೋಜನೆಯಾದ ರಾಷ್ಟಿçÃಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ೬ನೇ ಸುತ್ತಿನ ಲಸಿಕಾ ಕಾರ್ಯಕ್ರಮದ ಭಿತ್ತಿ ಪತ್ರಗಳು ಹಾಗೂ ಕರಪತ್ರಗಳನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಚ್.ಎನ್. ರಂಗಪ್ಪ, ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಲಕ್ಷ್ಮಣ್, ಚಿಂತಾಮಣಿ ತಾಲ್ಲೂಕಿನ ಮುಖ್ಯ ಪಶುವೈದ್ಯಾಧಿಕಾರಿ ಡಾ. ಎಂ.ಎನ್.ಚೆನ್ನಕೇಶವರೆಡ್ಡಿ, ಚಿಕ್ಕಬಳ್ಳಾಪುರ ಮುಖ್ಯ ಪಶುವೈದ್ಯಾಧಿಕಾರಿ ಡಾ. ಬಿ.ಕೆ.ರಮೇಶ್, ತಾಂತ್ರಿಕ ವಿಭಾಗದ ಮುಖ್ಯ ಪಶುವೈದ್ಯಾಧಿ ಕಾರಿಗಳ ಡಾ. ಎಸ್.ಎಂ. ಶೀಲಾ, ಗೌರಿಬಿದನೂರು ತಾಲ್ಲೂಕು ಪಶುವೈದ್ಯಾಧಿಕಾರಿ ಡಾ.ಮಾರುತಿ, ಕೋಲಾರ ಮತ್ತು ಚಿಕ್ಕಬಳ್ಳಾಪುರದ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ. ಡಿ.ಕೆ.ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.