Friday, 22nd November 2024

Maharashtra Election 2024 : ಮಹಾರಾಷ್ಟ್ರ ಚುನಾವಣೆಗೆ ಬಿಜೆಪಿಯ 99 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

Maharashtra election 2024

ನವದೆಹಲಿ: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ (Maharashtra Election 2024) ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಭಾನುವಾರ ಪ್ರಕಟಿಸಿದೆ. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬವಾನ್ಕುಲೆ ಸೇರಿದಂತೆ 99 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ದೇವೇಂದ್ರ ಫಡ್ನವೀಸ್ ನಾಗ್ಪುರ ನೈಋತ್ಯ ಕ್ಷೇತ್ರದಿಂದ ಸ್ಪರ್ಧಿಸಿದರೆ, ಬವಾನ್ಕುಲೆ ಕಾಮ್ತಿಯಿಂದ ಸ್ಪರ್ಧಿಸಲಿದ್ದಾರೆ.

ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಸಂಸದ ಅಶೋಕ್ ಚವಾಣ್ ಅವರ ಪುತ್ರಿ ಶ್ರೀಜಯ ಚವಾಣ್ ಭೋಕರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಅದೇ ರೀತಿ  ಸಚಿವರಾದ ಗಿರೀಶ್ ಮಹಾಜನ್, ಸುಧೀರ್ ಮುಂಗಂತಿವಾರ್ ಮತ್ತು ಅತುಲ್ ಸಾವೆ ಅವರಂತಹ ಪ್ರಮುಖ ಹೆಸರುಗಳಿವೆ.

288 ಸದಸ್ಯರ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.

2019 ರ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಮತ್ತು ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದಿತ್ತು. 2014ರ ಚುನಾವಣೆಯಲ್ಲಿ ಬಿಜೆಪಿ 122, ಶಿವಸೇನೆ 63 ಮತ್ತು ಕಾಂಗ್ರೆಸ್ 42 ಸ್ಥಾನಗಳನ್ನು ಗೆದ್ದಿತ್ತು.

ಇದನ್ನೂ ಓದಿ: Bomb Threat : ‘ತೋಳ ಬಂತು ಕತೆಯಾಯ್ತು’ ವಿಮಾನಗಳಿಗೆ ಬಾಂಬ್‌ ಬೆದರಿಕೆ! 32 ಪ್ರಕರಣಗಳಲ್ಲಿ ಒಂದು ವಿಮಾನವಷ್ಟೇ ತುರ್ತು ಭೂಸ್ಪರ್ಶ

ಚುನಾವಣಾ ಪೂರ್ವ ಮೈತ್ರಿಯ ಹೊರತಾಗಿಯೂ, ಶಿವಸೇನೆ ರೊಟೇಷನ್‌ ಪ್ರಕಾ ಮುಖ್ಯಮಂತ್ರಿ ವ್ಯವಸ್ಥೆಗೆ ಒತ್ತಾಯಿಸಿತು. ಅದನ್ನು ಬಿಜೆಪಿ ನಿರಾಕರಿಸಿತು. ಇದು ಉಭಯ ಪಕ್ಷಗಳ ನಡುವೆ ಮನಸ್ತಾಪಕ್ಕೆ ಕಾರಣವಾಯಿತು. ಅದು ಬಿಕ್ಕಟ್ಟು ರಾಜಕೀಯ ಬಿಕ್ಕಟ್ಟನ್ನು ಹುಟ್ಟುಹಾಕಿತು. ಮಾತುಕತೆಗಳು ಮತ್ತು ರಾಜಕೀಯ ತಂತ್ರಗಳ ನಂತರ, ಶಿವಸೇನೆ ಬಿಜೆಪಿಯೊಂದಿಗೆ ಸಂಬಂಧ ಕಡಿದುಕೊಂಡು ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು, ಮಹಾ ವಿಕಾಸ್ ಅಘಾಡಿ (ಎಂವಿಎ) ಒಕ್ಕೂಟ ರಚಿಸಿತು. ಶಿವಸೇನೆಯ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದರು. ಇದು ಮಹಾರಾಷ್ಟ್ರದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಯಿತು.

ಬಳಿಕ ಶಿವಸೇನೆಯ ಏಕನಾಥ್ ಶಿಂಧೆ ದಂಗೆ ಎದ್ದುಎನ್‌ಸಿಪಿ ಮತ್ತುಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿತು.