Monday, 25th November 2024

Fashion Tips: ಡೆನಿಮ್‌ ಕೋ ಆರ್ಡ್ ಸೆಟ್‌ ಸ್ಟೈಲಿಂಗ್‌ಗೆ 5 ಸಿಂಪಲ್‌ ಐಡಿಯಾ

Fashion Tips

| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಡೆನಿಮ್‌ ಕೋ ಆರ್ಡ್ ಸೆಟ್‌ ಫ್ಯಾಷನ್‌ ಇದೀಗ ಹೊಸ ರೂಪದಲ್ಲಿ ಮರಳಿದ್ದು, ಮತ್ತೊಮ್ಮೆ ಸೀಸನ್‌ ಟಾಪ್‌ ಲಿಸ್ಟ್‌ಗೆ ಸೇರಿದೆ. ಸೆಲೆಬ್ರೆಟಿ ಲುಕ್‌ ನೀಡುವ ಈ ಫ್ಯಾಷನ್‌, ಸದ್ಯ ಹುಡುಗಿಯರು ಮಾತ್ರವಲ್ಲದೇ, ಉದ್ಯೋಗಸ್ಥ ಮಾನಿನಿಯರಿಗೂ ಪ್ರಿಯವಾಗಿದೆ. ಆದರೆ, ಒಮ್ಮೆ ಧರಿಸಿದ ಈ ಔಟ್‌ಫಿಟ್‌ ಮತ್ತೊಮ್ಮೆ ಧರಿಸುವಾಗ ಸೇಮ್‌ ಟು ಸೇಮ್‌ ಕಾಣಿಸುವುದರಿಂದ ಕೆಲವು ಬಾರಿ ಈ ಡ್ರೆಸ್‌ಗಳು ವಾರ್ಡ್ರೋಬ್‌ನ ಮೂಲೆ ಸೇರುತ್ತವೆ. ಹಾಗಾಗಿ ಹೊಸ ಔಟ್‌ಫಿಟ್‌ ಕೊಳ್ಳುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಜತೆಗೆ ಒಂದಿಷ್ಟು ಸಿಂಪಲ್‌ ಸ್ಟೈಲಿಂಗ್‌ ಐಡಿಯಾ ಫಾಲೋ ಮಾಡಬೇಕು ಎನ್ನುವ ಸ್ಟೈಲಿಸ್ಟ್ ಸುಕ್ರುತಿ ಗ್ರೋವರ್‌, ಈ ಕುರಿತಂತೆ ತಿಳಿಸಿದ್ದಾರೆ.

1.ತ್ರೀ ಪೀಸ್‌ ಡೆನಿಮ್‌ ಕೋ ಆರ್ಡ್ ಸೆಟ್‌ :
ಟು ಪೀಸ್‌, ತ್ರೀ ಪೀಸ್‌ ಡೆನಿಮ್‌ ಕೋ ಆರ್ಡ್ ಸೆಟ್‌ಗಳು ಇಂದು ಚಾಲ್ತಿಯಲ್ಲಿದ್ದು, ಆದಷ್ಟೂ ಈ ಸೀಸನ್‌ಗೆ ಹೊಂದುವಂತಹ ತ್ರೀ ಪೀಸ್‌ ಡೆನಿಮ್‌ ಕೋ ಆರ್ಡ್ ಸೆಟ್‌ ಫ್ಯಾಷನ್‌ಗೆ ಸೈ ಎನ್ನಿ. ಇದು ನಿಮಗೆ ಪ್ರೊಫೆಷನಲ್‌ ಲುಕ್‌ ನೀಡುವುದರೊಂದಿಗೆ ಸೆಲೆಬ್ರೆಟಿಯಂತೆ ಬಿಂಬಿಸುತ್ತದೆ. ಸೀಸನ್‌ಗೂ ಹೊಂದುತ್ತದೆ.

2.ಡೆನಿಮ್‌ನಲ್ಲಿ ಮಾರ್ಡರ್ನ್‌ ಲುಕ್‌ :
ಯಾವುದೇ ಕಾರಣಕ್ಕೂ ಡೆನಿಮ್‌ ಕೋ ಆರ್ಡ್ ಸೆಟ್‌ ಧರಿಸಿದಾಗ ಟ್ರೆಡಿಷನಲ್‌ ಹೇರ್‌ಸ್ಟೈಲ್‌, ಮೇಕಪ್‌ ಮಾಡಬೇಡಿ. ಮಾಡರ್ನ್‌ ಲುಕ್‌ ನೀಡಿ. ಜೆನ್‌ ಜಿ ಹುಡುಗಿಯರ ಸ್ಟೈಲಿಂಗ್‌ ಟ್ರೈ ಮಾಡಿ, ನೋಡಿ.

3.ಪರ್ಸನಾಲಿಟಿಗೆ ತಕ್ಕಂತೆ ಡೆನಿಮ್‌ ಕೋ ಆರ್ಡ್ ಸೆಟ್‌ ಆಯ್ಕೆ ಮಾಡಿ:
ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಡೆನಿಮ್‌ ಕೋ ಆರ್ಡ್ ಸೆಟ್‌ ಆಯ್ಕೆ ಮಾಡಿ. ನೀವು ಪ್ಲಂಪಿಯಾಗಿದ್ದಲ್ಲಿ ದೊಗಲೆ ಪ್ಯಾಂಟ್‌ ಸೆಟ್‌ ಬೇಡ. ನೀವು ಉದ್ದಗಿದ್ದಲ್ಲಿ ಯಾವ ಬಗೆಯ ಸೆಟ್‌ ಆದರೂ ಓಕೆ. ಕುಳ್ಳಗಿದ್ದಲ್ಲಿ ಆದಷ್ಟೂ ಬೆಲ್‌ ಬಾಟಮ್‌ ಪ್ಯಾಂಟ್‌ ಸೆಟ್‌ ಆವಾಯ್ಡ್ ಮಾಡಿ.

4.ಸಿಂಪಲ್‌ ಮೇಕೋವರ್‌ ಗೆ ಸೈ ಎನ್ನಿ :
ಡೆನಿಮ್‌ ಕೋ ಆರ್ಡ್ ಸೆಟ್‌ ಧರಿಸಿದಾಗ ಆದಷ್ಟೂ ಸಿಂಪಲ್‌ ಮೇಕೋವರ್‌ ನಿಮ್ಮದಾಗಲಿ. ಹೆವ್ವಿ ಆಕ್ಸೇಸರೀಸ್‌ ಧರಿಸುವುದು ಬೇಡ! ಮೇಕಪ್‌ ಲೈಟಾಗಿರಲಿ. ಫ್ಲ್ಯಾಟ್‌ ಫುಟ್‌ವೇರ್‌ ಬೇಡ. ಸ್ನೀಕರ್ಸ್, ಆಫ್‌ ಶೂ, ಹೈ ಹೀಲ್ಸ್ ಧರಿಸಿದಲ್ಲಿ ಸೆಲೆಬ್ರೆಟಿಯಂತೆ ಕಾಣಿಸಬಹುದು.

5.ವಾರ್ಡ್ರೋಬ್‌ ನಲ್ಲಿರುವ ಹಳೆಯ ಡೆನಿಮ್‌ಗೆ ಹೊಸ ರೂಪ:
ನಿಮ್ಮ ವಾರ್ಡ್ರೋಬ್‌ನಲ್ಲಿರುವ ಹಳೆಯ ಡೆನಿಮ್‌ ಕೋ ಆರ್ಡ್ ಸೆಟ್‌ಗೂ ನಯಾ ರೂಪ ನೀಡಿ, ಧರಿಸಿ. ಡೆನಿಮ್‌ ಟಾಪ್‌ ಇದ್ದಲ್ಲಿ ಅದಕ್ಕೆ ಡೆನಿಮ್‌ ಪ್ಯಾಂಟ್‌ ಧರಿಸಿ. ಡೆನಿಮ್ ಜಾಕೆಟ್‌ ಇದ್ದಲ್ಲಿ, ಒಳಗೆ ಕಾಂಟ್ರಾಸ್ಟ್ ಇನ್ನರ್‌ ಟಾಪ್‌ ಧರಿಸಿ ಸ್ಕರ್ಟ್ ಧರಿಸಿ. ಲಾಂಗ್‌ ಡೆನಿಮ್‌ ಶರ್ಟ್ ಡ್ರೆಸ್‌ ಇದ್ದಲ್ಲಿ ಅದರೊಂದಿಗೆ ಕೇಪ್ರೀಸ್‌ ಧರಿಸಿ, ನೋಡಿ. ಕ್ರಾಪ್‌ ಡೆನಿಮ್‌ ಟಾಪ್‌ಗೆ ಮಿನಿ ಸ್ಕರ್ಟ್ /ಮಿಡಿ ಧರಿಸಬಹುದು. ಡೆನಿಮ್‌ ಲಾಂಗ್‌ ಕೋಟ್‌ಗೆ ಬರ್ಮಡಾದಂತಹ ಶಾರ್ಟ್ಸ್ ಧರಿಸಬಹುದು.

    (ಲೇಖಕಿ ಫ್ಯಾಷನ್‌ ಪತ್ರಕರ್ತೆ)