Saturday, 23rd November 2024

J&K attack : ಜಮ್ಮು ಕಾಶ್ಮೀರದಲ್ಲಿ ವೈದ್ಯ ಆರು ಮಂದಿಯನ್ನುಹತ್ಯೆ ಮಾಡಿದ್ದು ಪಾಕ್ ಮೂಲದ ಲಷ್ಕರ್‌

J&K attack

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್‌ ಜಿಲ್ಲೆಯಲ್ಲಿ ಭಾನುವಾರ ನಡೆದ ಉಗ್ರರ ದಾಳಿಯಲ್ಲಿ (J&K attack) ಒಬ್ಬ ವೈದ್ಯ ಮತ್ತು ಆರು ವಲಸೆ ಕಾರ್ಮಿಕರು ಸಾವನ್ನಪ್ಪಿದ ಘಟನೆಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದ ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ವಹಿಸಿಕೊಂಡಿದೆ ಎಂದು ಮೂಲಗಳು ಇಂಡಿಯಾ ತಿಳಿಸಿವೆ.

ಟಿಆರ್‌ಎಫ್‌ ಮುಖ್ಯಸ್ಥ ಶೇಖ್ ಸಜ್ಜಾದ್ ಗುಲ್ ಈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದು, ಆತನ ಆದೇಶದ ಮೇರೆಗೆ ಗುಂಪಿನ ಸ್ಥಳೀಯ ಘಟಕವು ಕಾಶ್ಮೀರಿಗಳು ಮತ್ತು ಕಾಶ್ಮೀರೇತರರನ್ನು ಗುರಿಯಾಗಿಸಿಕೊಂಡು ಮೊದಲ ಬಾರಿ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಟಿಆರ್‌ಎಫ್‌ ಕಾಶ್ಮೀರದಲ್ಲಿ ಸಕ್ರಿಯವಾಗಿದೆ ಮತ್ತು ಕಳೆದ ಒಂದೂವರೆ ವರ್ಷಗಳಲ್ಲಿ ಕಾಶ್ಮೀರಿ ಪಂಡಿತರು, ಸಿಖ್ಖರು ಮತ್ತು ಸ್ಥಳೀಯರಲ್ಲದವರನ್ನು ಗುರಿಯಾಗಿಸಿಕೊಂಡಿದೆ. ಇದು ಈ ಹಿಂದೆ ಹಲವಾರು ಕಾಶ್ಮೀರಿ ಪಂಡಿತರನ್ನು ಕೊಂದ ಸಂಘಟನೆಯ ಕಾರ್ಯತಂತ್ರದಲ್ಲಿ ದೊಡ್ಡ ಬದಲಾವಣೆ ಸೂಚಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Guru Charan Das Column: ಭಾರತೀಯ ಕಾರ್ಪೊರೇಟ್ ಜಗತ್ತಿನ ಸಾಕ್ಷಿಪ್ರಜ್ಞೆ ರತನ್‌ ಟಾಟಾ

ಕಳೆದ ಒಂದು ತಿಂಗಳಿನಿಂದ ಗಂದರ್‌ಬಾಲ್‌ ಜಿಲ್ಲೆಯ ಸೋನಾಮಾರ್ಗ್ ಪ್ರದೇಶದ ಕಟ್ಟಡ ನಿರ್ಮಾಣ ಸ್ಥಳದ ಮೇಲೆ ಭಯೋತ್ಪಾದಕ ಗುಂಪು ದಾಳಿ ನಡೆಸಿತ್ತು ಎಂದು ಮೂಲಗಳು ತಿಳಿಸಿವೆ. ಆರಂಭಿಕ ವರದಿಗಳ ಪ್ರಕಾರ, ಹತ್ಯೆಯಾದ ವೈದ್ಯರು ಮತ್ತು ಕಾರ್ಮಿಕರು ಗಗನೀರ್ ಅನ್ನು ಗಂದರ್‌ಬಾಲ್‌ ಸೋನಾಮಾರ್ಗ್‌ಗೆ ಸಂಪರ್ಕಿಸುವ ಝಡ್-ಮೋರ್ಹ್ ಸುರಂಗ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡುತ್ತಿದ್ದರು.

ಗಂದರ್‌ಬಾಲ್‌ ಗುಂಡ್‌ನಲ್ಲಿ ಸುರಂಗ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮತ್ತು ಇತರ ಸಿಬ್ಬಂದಿ ಸಂಜೆ ತಮ್ಮ ಶಿಬಿರಕ್ಕೆ ಹಿಂದಿರುಗಿದಾಗ ಭಯೋತ್ಪಾದಕರು ಈ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಪ್ರಮಾಣವಚನ ಸ್ವೀಕರಿಸಿದ ಕೇವಲ ನಾಲ್ಕು ದಿನಗಳ ನಂತರ ಈ ನರಮೇಧವನ್ನು ಅವರು ಖಂಡಿಸಿದ್ದಾರೆ.

ಅಕ್ಟೋಬರ್ 18 ರಂದು ಶೋಪಿಯಾನ್ ಜಿಲ್ಲೆಯಲ್ಲಿ ಬಿಹಾರದ ವಲಸೆ ಕಾರ್ಮಿಕನನ್ನು ಭಯೋತ್ಪಾದಕರು ಕೊಂದ ನಂತರ ಗಂಡರ್‌ಬಾಲ್‌ನಲ್ಲಿ ನಡೆದ ಇದೇ ಮಾದರಿಯ ಎರಡನೇ ಘಟನೆಯಾಗಿದೆ ಈ ವರ್ಷದ ಏಪ್ರಿಲ್‌ನಲ್ಲಿ ಅನಂತ್‌ನಾಗ್‌ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಬಿಹಾರ ಮೂಲದ ವಲಸೆ ಕಾರ್ಮಿಕನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು.